
ದುಬೈ: ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಬದ್ಧ ವೈರಿಗಳ ನಡುವಿನ ಕಾಳಗದಲ್ಲಿ ಪಾಕಿಸ್ತಾನದ ನಾಯಕ ಸಲ್ಮಾನ್ ಅಘಾ ಅವರೊಂದಿಗೆ ಭಾರತದ ನಾಯಕ ಸೂರ್ಯ ಕುಮಾರ್ ಯಾದವ್ ಹ್ಯಾಂಡ್ ಶೇಕ್ ಮಾಡಲು ನಿರಾಕರಿಸಿದರೆ, ಪಂದ್ಯ ಮುಗಿದ ಬಳಿಕವೂ ಉಳಿದ ಭಾರತೀಯ ಆಟಗಾರರು ಪಾಕಿಸ್ತಾನ ಆಟಗಾರರೊಂದಿಗೆ ಹ್ಯಾಂಡ್ ಶೇಕ್ ಮಾಡಲಿಲ್ಲ.
ಇದು ವಿವಾದಕ್ಕೆ ಕಾರಣವಾಗಿದೆ. ಪಾಕಿಸ್ತಾನದ ಆಟಗಾರರೊಂದಿಗಿನ ಎಲ್ಲಾ ಸೌಹಾರ್ದಯುತ ಸಂಕೇತಗಳನ್ನು ಕಡಿದುಕೊಳ್ಳುವ ಟೀಂ ಇಂಡಿಯಾದ ನಿರ್ಧಾರವು ಪ್ರಪಂಚದಾದ್ಯಂತದ ಕ್ರಿಕೆಟ್ ಕ್ಷೇತ್ರದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತು ಮೌನ ಮುರಿದಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ(PCB) ಟಾಸ್ ಸಮಯದಲ್ಲಿ ಸೂರ್ಯಕುಮಾರ್ ಅವರೊಂದಿಗೆ ಹಸ್ತಲಾಘವ ಮಾಡಬೇಡಿ ಎಂದು ಪಾಕ್ ನಾಯಕ ಸಲ್ಮಾನ್ ಅವರಿಗೆ ಮ್ಯಾಚ್ ರೆಫರಿ ಸೂಚಿಸಿದ್ದರು ಎಂದು ಹೇಳಿದ್ದು, ಭಾರತದ ನಿರ್ಧಾರವನ್ನು unsportsmanlike' 'ಎಂದು ಕರೆಯಲಾಗಿದ್ದು,ಅಧಿಕೃತವಾಗಿ ಪ್ರತಿಭಟನೆಯನ್ನು ದಾಖಲಿಸಲು ಪಿಸಿಬಿ ನಿರ್ಧರಿಸಿದೆ.
ಭಾರತದ ವಿರುದ್ಧ ಪ್ರತಿಭಟನೆಯ ಭಾಗವಾಗಿ ಮುಂದ್ಯ ಮುಗಿದ ನಂತರದ ಕಾರ್ಯಕ್ರಮದಲ್ಲಿ ನಾಯಕ ಸಲ್ಮಾನ್ ಅಘಾ ಪಾಲ್ಗೊಂಡಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಖಚಿತಪಡಿಸಿದೆ.
Advertisement