Asia Cup 2025: ಭಾರತ vs ಪಾಕಿಸ್ತಾನ ಪಂದ್ಯ ಮತ್ತೆ ಯಾವಾಗ? ಇಲ್ಲಿದೆ ಲೆಕ್ಕಾಚಾರ...

ಸೆಪ್ಟೆಂಬರ್ 17 ರಂದು ಯುಎಇ ವಿರುದ್ಧ ನಡೆಯಲಿರುವ ಮುಂದಿನ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದರೆ, ಅವರು ಸೂಪರ್ 4ಗೆ ಅರ್ಹತೆ ಪಡೆಯುತ್ತಾರೆ.
Asia Cup 202
ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ
Updated on

2025ರ ಏಷ್ಯಾಕಪ್‌ ಪಂದ್ಯಾವಳಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತ ತಂಡವು 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಸೂಪರ್ 4 ಹಂತದ ಎರಡನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಯಾದ ಪಾಕಿಸ್ತಾನದೊಂದಿಗೆ ಭಾರತ ಮತ್ತೊಮ್ಮೆ ಮುಖಾಮುಖಿಯಾಗುವ ಸಾಧ್ಯತೆಯಿದೆ. ಗುಂಪು ಬಿನಲ್ಲಿ ಸ್ಥಾನ ಪಡೆದಿರುವ ಭಾರತ ಮತ್ತು ಪಾಕಿಸ್ತಾನ ಅಂಕಪಟ್ಟಿಯಲ್ಲಿ ಕ್ರಮವಾಗಿ 1 ಮತ್ತು 2ನೇ ಸ್ಥಾನದಲ್ಲಿವೆ.

ಸದ್ಯ, ಭಾರತವು ಆಡಿರುವ 2 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ (4 ಅಂಕಗಳು ಮತ್ತು +4.793 ರ NRR) ಗ್ರೂಪ್ ಬಿ ನಲ್ಲಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಭಾನುವಾರ ಪಾಕಿಸ್ತಾನ ವಿರುದ್ಧ ಗೆದ್ದ ಸೂರ್ಯಕುಮಾರ್ ಯಾದವ್ ಮತ್ತು ಪಡೆ ಈಗಾಗಲೇ ಸೂಪರ್ 4 ಗೆ ಅರ್ಹತೆ ಪಡೆದಿದೆ. ಮತ್ತೊಂದೆಡೆ, ಪಾಕಿಸ್ತಾನವು ಒಂದು ಪಂದ್ಯವನ್ನು ಗೆದ್ದು ಒಂದು ಪಂದ್ಯವನ್ನು ಸೋತಿರುವ ಮೂಲಕ ಎರಡನೇ ಸ್ಥಾನದಲ್ಲಿದೆ (2 ಅಂಕಗಳು, +1.649 ರ NRR). ವೇಳಾಪಟ್ಟಿಯ ಪ್ರಕಾರ, A1 ತಂಡವು ಸೂಪರ್ 4 ಪಂದ್ಯದಲ್ಲಿ A2 ತಂಡವನ್ನು ಎದುರಿಸಲಿದೆ.

ಸೆಪ್ಟೆಂಬರ್ 17 ರಂದು ಯುಎಇ ವಿರುದ್ಧ ನಡೆಯಲಿರುವ ಮುಂದಿನ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದರೆ, ಅವರು ಸೂಪರ್ 4ಗೆ ಅರ್ಹತೆ ಪಡೆಯುತ್ತಾರೆ ಮತ್ತು ಸೆಪ್ಟೆಂಬರ್ 21 ರಂದು ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತವನ್ನು ಎದುರಿಸಲಿದ್ದಾರೆ.

Asia Cup 202
‘ಜಗಳಗಳು ನಡೆಯುತ್ತಲೇ ಇರುತ್ತವೆ, ಆದರೆ...’: ಪಾಕ್‌ನೊಂದಿಗೆ ಹ್ಯಾಂಡ್‌ಶೇಕ್‌ಗೆ ಭಾರತ ನಿರಾಕರಿಸಿದ್ದಕ್ಕೆ ಶೋಯೆಬ್ ಅಖ್ತರ್

ಏಷ್ಯಾಕಪ್‌ನಲ್ಲಿ ಇನ್ನೂ ಒಂದೂ ಪಂದ್ಯವನ್ನು ಗೆಲ್ಲದ ಓಮನ್ (-4.650 NRR) ಮತ್ತು ಯುಎಇ (-10.483 NRR) ಸೋಮವಾರ (ಸೆಪ್ಟೆಂಬರ್ 15) ಪರಸ್ಪರ ಸೆಣಸಲಿವೆ. ಇದರರ್ಥ ಒಂದು ತಂಡಕ್ಕೆ ಎರಡು ಅಂಕಗಳು ಸಿಗುತ್ತವೆ. ಗುಂಪು ಹಂತದ ಉಳಿದ ಪಂದ್ಯದಲ್ಲಿ ಯುಎಇ ತಂಡವು ಓಮನ್ ಮತ್ತು ಪಾಕ್ ಎರಡನ್ನೂ ಸೋಲಿಸಿದರೆ, ಪಾಕಿಸ್ತಾನ ಏಷ್ಯಾಕಪ್‌ನಿಂದ ಹೊರಬೀಳಬಹುದು. ಆ ಸಂದರ್ಭದಲ್ಲಿ, ಸೆಪ್ಟೆಂಬರ್ 21 ರಂದು ನಡೆಯುವ ಎರಡನೇ ಸೂಪರ್ 4 ಪಂದ್ಯದಲ್ಲಿ ಯುಎಇ ವಿರುದ್ಧ ಭಾರತ ಮುಖಾಮುಖಿಯಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com