
ಪಾಕಿಸ್ತಾನ ತಂಡದೊಂದಿಗೆ ಸಾಂಪ್ರದಾಯಿಕ ಹ್ಯಾಂಡ್‌ಶೇಕ್ ಅನ್ನು ನಿರಾಕರಿಸಿದ ಟೀಂ ಇಂಡಿಯಾ ನಡೆ ಸರಿಯೇ ಎಂದರೆ ಮಾಜಿ ಆಟಗಾರ ಮನೋಜ್ ತಿವಾರಿಗೆ ದೃಷ್ಟಿಯಲ್ಲಿ ಅದು ಸರಿಯಲ್ಲ. ಮೆನ್ ಇನ್ ಬ್ಲೂ ಮಾಡಿದ್ದು ಏನೂ ತಪ್ಪಾಗಿರಲಿಲ್ಲ. ಆದರೆ, ಬಹುಶಃ ಅದು ತೋರಿಕೆಗಾಗಿರಬಹುದು ಎಂದು ಭಾರತೀಯ ಮಾಜಿ ಕ್ರಿಕೆಟಿಗ ತಿಳಿಸಿದ್ದಾರೆ.
ಸೆಪ್ಟೆಂಬರ್ 14 ರಂದು ನಡೆದ ಏಷ್ಯಾಕಪ್ ಪಂದ್ಯಕ್ಕೂ ಮುನ್ನವೇ ಮನೋಜ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದರು. 'ನಾನು ಭಾರತ vs ಪಾಕಿಸ್ತಾನ ಪಂದ್ಯ ಹಾಗೂ ಏಷ್ಯಾಕಪ್ ಅನ್ನು ಬಹಿಷ್ಕರಿಸುತ್ತಿದ್ದೇನೆ. ಏಕೆಂದರೆ, ನಾನು ಇದನ್ನು ನೋಡಲು ಸಾಧ್ಯವಿಲ್ಲ. ಇದು ಕೇವಲ ಕ್ರೀಡೆ ಎಂದು ಅರ್ಥಮಾಡಿಕೊಳ್ಳಬೇಕು; ಇದು ಜೀವನವಲ್ಲ. ನಾವು ಮಾನವ ಜೀವನವನ್ನು ಕ್ರೀಡೆಗಳಿಗೆ ಹೋಲಿಸುತ್ತಿದ್ದೇವೆ; ಇದನ್ನು ಎಂದಿಗೂ ಮಾಡಬಾರದು' ಎಂದು ಹೇಳಿದ್ದರು.
ಇನ್‌ಸೈಡ್‌ಸ್ಪೋರ್ಟ್ ಜೊತೆಗಿನ ವಿಶೇಷ ಸಂವಾದದಲ್ಲಿ ಬಂಗಾಳದ ಮಾಜಿ ಕ್ರಿಕೆಟಿಗ, ಕೇವಲ ಐದು ದಿನಗಳ ಹಿಂದೆ, ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಅವರು ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರೊಂದಿಗೆ ಕೈಕುಲುಕಿದ್ದರು.
ಆಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಟೀಂ ಇಂಡಿಯಾ ನಡುವೆ ಯಾವುದೇ ಸಮಸ್ಯೆಗಳಿರಲಿಲ್ಲ, ಈಗ ಏಕೆ? ಸೂರ್ಯಕುಮಾರ್‌ಗೆ ಎಷ್ಟು ಪ್ರತಿಕ್ರಿಯೆ ಸಿಕ್ಕಿತು ಎಂಬುದು ಎಲ್ಲರಿಗೂ ನೆನಪಿದೆ. ಹೆಚ್ಚಿನ ಟೀಕೆಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು, ಕೈಕುಲುಕುವ ನಿರ್ಧಾರವನ್ನು ಕೈಬಿಡಲಾಯಿತು. ಆದ್ದರಿಂದ, ಪಹಲ್ಗಾಮ್ ಸಂತ್ರಸ್ತರಿಗೆ ಅಥವಾ ಭಾರತೀಯ ಸಶಸ್ತ್ರ ಪಡೆಗಳಿಗೆ ವಿಜಯವನ್ನು ಅರ್ಪಿಸುವುದು ಕೇವಲ ಪ್ರತಿಕ್ರಿಯೆಯನ್ನು ತಪ್ಪಿಸುವ ಒಂದು ಕ್ರಮವಾಗಿತ್ತು ಎಂದಿದ್ದಾರೆ.
'ಅದು ಸರಿಯಾದ ನಡೆಯಲ್ಲ ಎಂದು ನಾನು ಭಾವಿಸಿದೆ. ನೀವು ಪಾಕಿಸ್ತಾನ ವಿರುದ್ಧ ಪಂದ್ಯ ಆಡಲು ನಿರ್ಧರಿಸಿದ ನಂತರ, ಪತ್ರಿಕಾಗೋಷ್ಠಿಯ ಕ್ಲಿಪ್‌ಗಳಲ್ಲಿ ಒಂದನ್ನು ನಾನು ನೋಡುತ್ತಿದ್ದೆ, ಅಲ್ಲಿ ನಾಯಕರ ನಡುವೆ ಹಸ್ತಲಾಘವ ನಡೆಯಿತು. ಅಲ್ಲಿ, ಸೂರ್ಯಕುಮಾರ್ ಅವರು ಸಲ್ಮಾನ್ ಆಘಾ ಅವರೊಂದಿಗೆ ಹಸ್ತಲಾಘವ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಅದನ್ನು ಮಾಡಿದ ನಂತರ, ನೀವು ಕಳುಹಿಸಲು ಬಯಸುವ ಸಂದೇಶವೇನು? 'ಗೆದ್ದ ನಂತರ ನಾನು ಕೈಕುಲುಕಲು ಬಯಸುವುದಿಲ್ಲ ಮತ್ತು ಈ ಗೆಲುವನ್ನು ಹುತಾತ್ಮರು ಮತ್ತು ದುಃಖಿತ ಕುಟುಂಬಗಳಿಗೆ ಅರ್ಪಿಸಲು ಬಯಸುತ್ತೇನೆ' ಎಂಬುದು ಅದರ ಸಂದೇಶವಾಗಿತ್ತಾ ಎಂದು ಮನೋಜ್ ಇನ್‌ಸೈಡ್‌ಸ್ಪೋರ್ಟ್‌ಗೆ ತಿಳಿಸಿದರು.
ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಈ ಕ್ರಮವನ್ನು ಹೇಗೆ ತೆಗೆದುಕೊಂಡಿರಬಹುದು ಎಂಬುದನ್ನು ವಿವರಿಸುವ ಮನೋಜ್, ಸ್ವಲ್ಪ ಸಮಯದವರೆಗೆ, ಅವರು ಭಾರತ ಮತ್ತು ಪಾಕಿಸ್ತಾನ ಪಂದ್ಯಗಳು ನಡೆಯಬಾರದು ಎಂದು ಹೇಳುತ್ತಿದ್ದರು. ಕಳೆದ ವರ್ಷ ಜುಲೈನಲ್ಲಿ ಮತ್ತು ಈ ವರ್ಷ ಮೇ ತಿಂಗಳಲ್ಲಿ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಅವರು ಹಾಗೆ ಮಾಡಿದ್ದರು.
ಗಂಭೀರ್ ಅಧಿಕಾರದಲ್ಲಿ ಇಲ್ಲದಿದ್ದಾಗ ಇತರರನ್ನು ಟೀಕಿಸುತ್ತಾರೆ. ಆದರೆ, ಅವರ ಸರದಿ ಬಂದಾಗ ಅವರು ಆಟವನ್ನು ಬಹಿಷ್ಕರಿಸಲಿಲ್ಲ ಎಂದರು. ಏಷ್ಯಾ ಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಆಡಬೇಕೆಂದು ನಿರ್ಧರಿಸಿದಾಗ, ಗಂಭೀರ್ ಏಕೆ ರಾಜೀನಾಮೆ ನೀಡಲಿಲ್ಲ ಎಂದು ಮನೋಜ್ ಈ ಹಿಂದೆ ಪ್ರಶ್ನಿಸಿದ್ದರು.
ಗಂಭೀರ್ ಭಾರತೀಯ ಆಟಗಾರರಿಗೆ ಪಾಕಿಸ್ತಾನ ತಂಡದೊಂದಿಗೆ ಹ್ಯಾಂಡ್‌ಶೇಕ್ ನಿರಾಕರಿಸುವಂತೆ ಹೇಳುವ ಮೂಲಕ ತಮ್ಮನ್ನು ತಾವು ಉಳಿಸಿಕೊಳ್ಳುತ್ತಿದ್ದಾರೆ. ಇಲ್ಲದಿದ್ದರೆ, ಅವರು ಭಾರತದ ಮುಖ್ಯ ಕೋಚ್ ಆಗುವುದಕ್ಕೂ ಮುನ್ನ ತಾವೇ ನೀಡಿದ ಹೇಳಿಕೆಗೆ ಅದು ಸಂಪೂರ್ಣ ವಿರುದ್ಧವಾಗುತ್ತಿತ್ತು ಎಂದು ತಿಳಿಸಿದರು.
'ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳದಿದ್ದಾಗ, ತಾವು ಕೂಡ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲದ ಹಲವು ಹೇಳಿಕೆಗಳನ್ನು ನೀಡಿದ್ದರಿಂದ, ಕೋಚ್ ಆದ ಬಳಿಕ ಅವರು ಬೂಟಾಟಿಕೆಯಿಂದ ವರ್ತಿಸುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು ಸ್ವತಃ ಹೊರಗುಳಿಯಬಹುದಿತ್ತು, ಆದರೆ ಅವರು ಹಾಗೆ ಮಾಡಲಿಲ್ಲ. ಪಾಕಿಸ್ತಾನ ತಂಡದೊಂದಿಗೆ ಕೈಕುಲುಕದೆ ಸಂತ್ರಸ್ತರಿಗೆ ಬೆಂಬಲ ನೀಡುವಂತೆ ಪ್ರಚೋದಿಸಿದರು ಎಂದು ನಾನು ಭಾವಿಸುತ್ತೇನೆ' ಎಂದು ಮನೋಜ್ ಹೇಳಿದರು.
Advertisement