
ನವದೆಹಲಿ: ಟೀಂ ಇಂಡಿಯಾದ ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯ ಕಳೆದ ವರ್ಷ ಮಾಡೆಲ್-ನಟಿ ನತಾಶಾ ಸ್ಟಾಂಕೋವಿಕ್ ಅವರೊಂದಿಗೆ ವಿಚ್ಛೇದನ ಪಡೆದ ನಂತರ ಡೇಟಿಂಗ ವಿಚಾರ ಸಾಕಷ್ಟು ಸುದ್ದಿಯಲ್ಲಿದೆ. ಯುಕೆ ಮೂಲದ ಜಾಸ್ಮಿನ್ ವಾಲಿಯಾ ನಂತರ, ಹಾರ್ದಿಕ್ ಪಾಂಡ್ಯ ಇದೀಗ ಮಾಡೆಲ್-ನಟಿ ಮಹಿಕಾ ಶರ್ಮಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಕೇಳಿಬಂದಿದೆ.
ರೆಡ್ಡಿಟ್‌ನಲ್ಲಿ ಬಂದ ಒಂದು ಪೋಸ್ಟ್‌ನಲ್ಲಿ, ಈ ಜೋಡಿ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಒಟ್ಟಿಗೆ ಇರುವುದನ್ನು ತೋರಿಸಿದ ನಂತರ ಈ ಊಹಾಪೋಹಗಳು ಆರಂಭವಾದವು. ಒಂದು ಚಿತ್ರದಲ್ಲಿ, ಹಾರ್ದಿಕ್ ಪಾಂಡ್ಯ ಅವರ ಜೆರ್ಸಿ ಸಂಖ್ಯೆ 33 ಇರುವುದು ಪತ್ತೆಯಾದ ನಂತರ ಈ ಊಹಾಪೋಹಗಳಿಗೆ ಮತ್ತಷ್ಟು ವೇಗ ಸಿಕ್ಕಂತಾಯಿತು.
ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಪರಸ್ಪರ ಅನುಸರಿಸುತ್ತಿರುವ ಸ್ಕ್ರೀನ್‌ಶಾಟ್‌ಗಳನ್ನು ಸಹ ಅದೇ ಥ್ರೆಡ್‌ನಲ್ಲಿ ಹಂಚಿಕೊಂಡಾಗ ವದಂತಿಗಳು ತೀವ್ರಗೊಂಡವು.
ಈ ಹಿಂದೆ ಅಪ್‌ಲೋಡ್ ಮಾಡಿದ ಅವರ ಇನ್‌ಸ್ಟಾಗ್ರಾಂ ಸ್ಟೋರಿಗಳಲ್ಲಿ ಒಂದರಲ್ಲಿ, ಹಾರ್ದಿಕ್ ಮತ್ತು ಮಹಿಕಾ ಒಂದೇ ಬಾತ್‌ರೋಬ್ ಧರಿಸಿ ಪ್ರತ್ಯೇಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ, ಮಾಡೆಲ್-ನಟಿ ದುಬೈನಲ್ಲಿ ನಡೆದ ಭಾರತ-ಪಾಕಿಸ್ತಾನ ಏಷ್ಯಾ ಕಪ್ ಪಂದ್ಯದ ವೇಳೆ ಹಾಜರಿದ್ದರು. ಟೀಂ ಇಂಡಿಯಾ ಮತ್ತು ಹಾರ್ಧಿಕ್ ಪಾಂಡ್ಯ ಅವರಿಗೆ ಬೆಂಬಲ ನೀಡಿದ್ದರು.
ಈಮಧ್ಯೆ, ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ 2020ರಲ್ಲಿ ವಿವಾಹವಾದರು ಮತ್ತು ಹಲವಾರು ತಿಂಗಳುಗಳ ಪ್ರತ್ಯೇಕ ವಾಸದ ಬಳಿಕ ಕಳೆದ ವರ್ಷ ಜುಲೈನಲ್ಲಿ ತಮ್ಮ ವಿಚ್ಛೇದನದ ಕುರಿತು ಘೋಷಿಸಿದರು.
'ನಾಲ್ಕು ವರ್ಷಗಳ ಕಾಲ ಒಟ್ಟಿಗೆ ಇದ್ದ ನಂತರ, ನತಾಶಾ ಮತ್ತು ನಾನು ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದೇವೆ. ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು ಮತ್ತು ನಮ್ಮೆಲ್ಲವನ್ನೂ ನೀಡಿದ್ದೇವೆ ಮತ್ತು ಇದು ನಮ್ಮಿಬ್ಬರ ಹಿತದೃಷ್ಟಿಯಿಂದ ಎಂದು ನಾವು ನಂಬುತ್ತೇವೆ. ನಾವು ಒಟ್ಟಿಗೆ ಕುಟುಂಬವನ್ನು ನಿರ್ಮಿಸುವಾಗ ಹಂಚಿಕೊಂಡ ಸಂತೋಷ, ಪರಸ್ಪರ ಗೌರವ ಮತ್ತು ಒಡನಾಟವನ್ನು ಗಮನಿಸಿದರೆ, ಇದು ಕಠಿಣ ನಿರ್ಧಾರವಾಗಿತ್ತು' ಎಂದು ಕ್ರಿಕೆಟಿಗ ಹೇಳಿಕೆಯಲ್ಲಿ ಬಹಿರಂಗಪಡಿಸಿದ್ದಾರೆ.
'ನಮಗೆ ಅಗಸ್ತ್ಯ ಎಂಬ ಮಗನಿದ್ದಾನೆ. ಅವನು ನಮ್ಮಿಬ್ಬರ ಜೀವನದ ಕೇಂದ್ರಬಿಂದುವಾಗಿ ಮುಂದುವರಿಯುತ್ತಾನೆ ಮತ್ತು ಆತನ ಸಂತೋಷಕ್ಕಾಗಿ ನಾವು ಸಾಧ್ಯವಿರುವ ಎಲ್ಲವನ್ನೂ ನೀಡುತ್ತೇವೆ ಎಂದು ಖಚಿತಪಡಿಸಿಕೊಳ್ಳಲು ನಾವು ಸಹ-ಪೋಷಕರಾಗಿರುತ್ತೇವೆ. ಈ ಕಷ್ಟಕರ ಮತ್ತು ಸೂಕ್ಷ್ಮ ಸಮಯದಲ್ಲಿ ನಮ್ಮ ಗೌಪ್ಯತೆ ಕಾಪಾಡುವಂತೆ ನಿಮ್ಮ ಬೆಂಬಲ ಮತ್ತು ತಿಳುವಳಿಕೆಯನ್ನು ನಾವು ಪ್ರಾಮಾಣಿಕವಾಗಿ ವಿನಂತಿಸುತ್ತೇವೆ' ಎಂದು ಅವರು ಹೇಳಿದರು.
ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ದಂಪತಿಗೆ 2020 ರಲ್ಲಿ ಮಗ ಅಗಸ್ತ್ಯ ಜನಿಸಿದ.
Advertisement