
ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್ ರ ವಿಮಾನ ಪತನ ವಿವಾದಿತ ಸನ್ಹೆಗೆ ಭಾರತದ ವೇಗಿ ಅರ್ಶ್ ದೀಪ್ ಸಿಂಗ್ ಮುಟ್ಟಿನೋಡಿಕೊಳ್ಳುವಂತೆ ಉತ್ತರ ಕೊಟ್ಟಿದ್ದಾರೆ.
ಈ ಹಿಂದೆ ದುಬೈನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ಪಂದ್ಯದ ವೇಳೆ ವಿವಾದಾತ್ಮಕ ಸಹ್ನೆ ಮಾಡಿದ್ದ ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್ ಗೆ ಭಾರತದ ವೇಗಿ ಅರ್ಶ್ ದೀಪ್ ಸಿಂಗ್ ಮೈದಾನದಲ್ಲೇ ಖಡಕ್ ತಿರುಗೇಟು ನೀಡಿದ್ದಾರೆ.
ಈ ಹಿಂದೆ ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್ ಭಾರತದ ಯುದ್ಧ ವಿಮಾನಗಳನ್ನು ಹೊಡೆದುರುಳಿದ್ದಾಗಿ ಸಹ್ನೆ ಮಾಡಿದ್ದರು.
ಭಾರತ ತಂಡದ ಬ್ಯಾಟಿಂಗ್ ವೇಳೆ ಬೌಂಡರಿ ಬಳಿ ನಿಂತಿದ್ದ ಹ್ಯಾರಿಸ್ ರೌಫ್, ಭಾರತೀಯ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡು ರಫೆಲ್ ಯುದ್ಧ ವಿಮಾನ ಬಿತ್ತು ಎನ್ನುವ ಅರ್ಥದಲ್ಲಿ ಕೈ ಸನ್ನೆ ಮಾಡಿ ತೋರಿಸಿದ್ದರು.
ಅವರ ಈ ಕೃತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿತ್ತು. ರಫೆಲ್ ಮಾತ್ರವಲ್ಲದೇ ಹ್ಯಾರಿಸ್ ರೌಫ್ ಭಾರತೀಯ ಸೇನೆಯ 6 ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದಾಗಿ ಅಣಕ ಮಾಡಿ ತೋರಿಸಿರುವ ವಿಡಿಯೋ ವ್ಯಾಪಕ ವೈರಲ್ ಆಗಿತ್ತು.
ಇದೀಗ ಹ್ಯಾರಿಸ್ ರೌಫ್ ಕೃತ್ಯಕ್ಕೆ ಭಾರತದ ವೇಗಿ ಅರ್ಶ್ ದೀಪ್ ಸಿಂಗ್ ಕೂಡ ಖಡಕ್ ತಿರುಗೇಟು ನೀಡಿದ್ದಾರೆ.
ಪಂದ್ಯದ ಬಳಿಕ ಭಾರತದ ಜಿತೇಶ್ ಶರ್ಮಾ ಮತ್ತು ಅರ್ಶ್ ದೀಪ್ ಸಿಂಗ್ ಮೈದಾನದಲ್ಲಿರಬೇಕಾದರೆ ಪಾಕ್ ಅಭಿಮಾನಿಗಳು ರಫೆಲ್ ವಿಮಾನ ಬಿದ್ದ ಕುರಿತು ಅಣಕ ಮಾಡಿದ್ದಾರೆ. ಈ ವೇಳೆ ಅರ್ಶ್ ದೀಪ್ ಸಿಂಗ್ ಮುಲಾಜಿಲ್ಲದೇ ತಿರುಗೇಟು ನೀಡಿದ್ದು, 'ಬಿದ್ದ ವಿಮಾನಗಳನ್ನು ತೆಗೆದು ನಿನ್ನ ತಿ******ದಲ್ಲಿ ಇಟ್ಕೋ' ಎಂದು ನೇರವಾಗಿಯೇ ಸನ್ಹೆ ಮಾಡಿ ತೋರಿಸಿದ್ದಾರೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಏನಿದು ವಿವಾದಾತ್ಮಕ ಸನ್ಹೆ?
ಈ ಹಿಂದೆ ಆಪರೇಷನ್ ಸಿಂದೂರ್ ಕಾರ್ಯಾಚರಣೆ ವೇಳೆ ಭಾರತದ ರಫೆಲ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದಾಗಿ ಪಾಕಿಸ್ತಾನ ಹೇಳಿಕೊಂಡಿತ್ತು. ಅಂದು ಪಾಕಿಸ್ತಾನ ಭಾರತದ ಆರು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದಾಗಿ ಹೇಳಿಕೊಂಡಿತ್ತು.
ಆದರೆ ಈ ವರೆಗೂ ಪತನವಾದ ಯಾವುದೇ ವಿಮಾನದ ಅವಶೇಷಗಳು ಪತ್ತೆಯಾಗಿರಲಿಲ್ಲ. ಈ ಬಗ್ಗೆ ಪಾಕಿಸ್ತಾನ ಕೂಡ ಯಾವುದೇ ಪುರಾವೆ ನೀಡಿಲ್ಲ. ಆದಾಗ್ಯೂ ಪಾಕಿಸ್ತಾನ ಆಪರೇಷನ್ ಸಿಂದೂರ್ ಕಾರ್ಯಾಚರಣೆ ವೇಳೆ ಭಾರತದ ಆರು ಯುದ್ಧ ವಿಮಾನ ಹೊಡೆದುರುಳಿಸಿದ್ದಾಗಿ ಹೇಳಿಕೊಂಡು ತಿರುಗುತ್ತಿದೆ. ಮಾತ್ರವಲ್ಲದೇ ಅಂದಿನ ಯುದ್ಧದಲ್ಲಿ ತಾನೇ ಗೆದ್ದಿದ್ದು ಎಂದೂ ಹೇಳಿಕೊಳ್ಳುತ್ತಿದೆ.
Advertisement