Asia Cup 2025: ಇತಿಹಾಸ ಬರೆದ Abhishek Sharma, ಶ್ರೀಲಂಕಾ ಲೆಜೆಂಡ್ Sanath Jayasuriya ದಾಖಲೆ ಪತನ

ಭಾರತ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಭರ್ಜರಿ ಬ್ಯಾಟಿಂಗ್ ಮಾಡಿದರು.
Abhishek Sharma
ಅಭಿಷೇಕ್ ಶರ್ಮಾ
Updated on

ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಇಂದಿನ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಅಭಿಷೇಕ್ ಶರ್ಮಾ ಇತಿಹಾಸ ಬರೆದಿದ್ದು, ಕ್ರಿಕೆಟ್ ಲೋಕದ ಅಪರೂಪದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಸೂಪರ್ 4 ಹಂತದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಭರ್ಜರಿ ಬ್ಯಾಟಿಂಗ್ ಮಾಡಿದರು.

ಕೇವಲ 37 ಎಸೆತಗಳನ್ನು ಎದುರಿಸಿದ ಅಭಿಷೇಕ್ ಶರ್ಮಾ 5 ಸಿಕ್ಸರ್ ಮತ್ತು 6 ಬೌಂಡಿರಗಳ ನೆರವಿನಿಂದ 75 ರನ್ ಚಚ್ಚಿದರು. ಆ ಮೂಲಕ ಭಾರತದ ಸವಾಲಿನ ಗುರಿಗೆ ನೆರವಾದರು.

Abhishek Sharma
Asia Cup 2025: ಬಾಂಗ್ಲಾದೇಶ ವಿರುದ್ಧ ಭರ್ಜರಿ ಬ್ಯಾಟಿಂಗ್, ದಾಖಲೆ ಬರೆದ Team India!

ಪವರ್ ಪ್ಲೇನಲ್ಲಿ ದಾಖಲೆ

ಇನ್ನು ಇಂದು ಬಾಂಗ್ಲಾದೇಶ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ ತಂಡ ಹಾಲಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ದಾಖಲೆ ಬರೆದಿದ್ದು, ಪವರ್ ಪ್ಲೇನಲ್ಲಿ ಗರಿಷ್ಠ ರನ್ ದಾಖಲಿಸಿದ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ. ಭಾರತ ಪವರ್ ಪ್ಲೇಯ 6 ಓವರ್ ನಲ್ಲಿ 72 ರನ್ ಕಲೆಹಾಕಿತ್ತು.

ಇದು ಹಾಲಿ ಏಷ್ಯಾಕಪ್ ಟೂರ್ನಿಯಲ್ಲಿ ಪವರ್ ಪ್ಲೇ ನಲ್ಲಿ ತಂಡವೊಂದು ಕಲೆಹಾಕಿದ ಗರಿಷ್ಠ ರನ್ ಗಳಿಕೆಯಾಗಿದೆ. ಈ ಹಿಂದೆ ಇದೇ ಭಾರತ ತಂಡ ಪಾಕಿಸ್ತಾನ ವಿರುದ್ಧ ಪವರ್ ಪ್ಲೇನಲ್ಲಿ 69 ರನ್ ಕಲೆಹಾಕಿತ್ತು. ಇದು ಹಾಲಿ ಟೂರ್ನಿಯಲ್ಲಿ ಈ ವರೆಗಿನ ತಂಡವೊಂದರ ಪವರ್ ಪ್ಲೇಯ ಗರಿಷ್ಠ ರನ್ ಗಳಿಕೆಯಾಗಿತ್ತು. ಇದೀಗ ಭಾರತ ತನ್ನದೇ ದಾಖಲೆಯನ್ನು ಹಿಂದಿಕ್ಕಿದೆ.

ಅಭಿಷೇಕ್-ಗಿಲ್ ಅದ್ಭುತ ಜೊತೆಯಾಟ

ಭಾರತಕ್ಕೆ ಭರ್ಜರಿ ಆರಂಭ ಒದಗಿಸಿದ ಅಭಿಷೇಕ್ ಶರ್ಮಾ ಮತ್ತು ಶುಭ್ ಮನ್ ಗಿಲ್ ಜೋಡಿ ಮೊದಲ ವಿಕೆಟ್ ಗೆ ಬರೊಬ್ಬರಿ 77 ರನ್ ಜೊತೆಯಾಟ ನೀಡಿತು. ಈ ಪೈಕಿ ಗಿಲ್ 29 ರನ್ ಕಲೆಹಾಕಿದರೆ, ಅಭಿಷೇಕ್ ಶರ್ಮಾ 46ರನ್ ಚಚ್ಚಿದರು. ಬಳಿಕ ಗಿಲ್ ರಿಷಾದ್ ಹೊಸೈನ್ ಬೌಲಿಂಗ್ ನಲ್ಲಿ ಔಟಾದರೆ, ಅಭಿಷೇಕ್ ಶರ್ಮಾ ರನೌಟ್ ಬಲಿಯಾದರು.

ಇತಿಹಾಸ ಬರೆದ ಅಭಿಷೇಕ್ ಶರ್ಮಾ

ಇನ್ನು ಈ ಪಂದ್ಯದಲ್ಲಿ ಬರೊಬ್ಬರಿ ಐದು ಸಿಕ್ಸರ್ ಬಾರಿಸಿದ ಅಭಿಶೇಕ್ ಶರ್ಮಾ ಹಾಲಿ ಏಷ್ಯಾಕಪ್ ಕ್ರಿಕೆ್ಟ್ ಟೂರ್ನಿಯಲ್ಲಿ ತಮ್ಮ ಸಿಕ್ಸರ್ ಗಳ ಸಂಖ್ಯೆಯನ್ನು 16ಕ್ಕೆ ಏರಿಕೆ ಮಾಡಿಕೊಂಡಿದ್ದಾರೆ. ಅಂತೆಯೇ ಅಭಿಷೇಕ್ ಶರ್ಮಾ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಒಂದೇ ಆವೃತ್ತಿಯಲ್ಲಿ 15ಕ್ಕಿಂತ ಹೆಚ್ಚು ಸಿಕ್ಸರ್ ಬಾರಿಸಿದ ಮೊದಲ ಬ್ಯಾಟರ್ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.

ಅಂತೆಯೇ ಅಭಿಷೇಕ್ ಶರ್ಮಾ ಶ್ರೀಲಂಕಾದ ಕ್ರಿಕೆಟ್ ದಂತಕಥೆ ಸನತ್ ಜಯಸೂರ್ಯ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಜಯಸೂರ್ಯ 2008ರಲ್ಲಿ ತಮ್ಮ ತಂಡದ ಪರ 14 ಸಿಕ್ಸರ್ ಬಾರಿಸಿದ್ದರು. ಇದೀಗ ಅಭಿಷೇಕ್ ಶರ್ಮಾ 16 ಸಿಕ್ಸರ್ ಬಾರಿಸಿ ಈ ದಾಖಲೆಯನ್ನು ಮುರಿದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com