ಕರುಣ್ ನಾಯರ್‌ಗೆ BCCI ಮತ್ತೊಂದು ಅವಕಾಶ; ಭಾರತ vs ವಿಂಡೀಸ್ ಟೆಸ್ಟ್‌ಗೆ ಕನ್ನಡಿಗನ ಆಯ್ಕೆ ಸಾಧ್ಯತೆ

ವೆಸ್ಟ್ ಇಂಡೀಸ್ ವಿರುದ್ಧದ ಮುಂಬರುವ ಎರಡು ಟೆಸ್ಟ್ ಸರಣಿಗೆ ಬಿಸಿಸಿಐ ಆಯ್ಕೆ ಸಭೆಯನ್ನು ಬುಧವಾರ ಪ್ರಕಟಿಸಲು ನಿರ್ಧರಿಸಲಾಗಿತ್ತು, ಆದರೆ ಅದನ್ನು ಗುರುವಾರಕ್ಕೆ (ಇಂದು) ಮುಂದೂಡಲಾಗಿದೆ.
Karun Nair
ಕರುಣ್ ನಾಯರ್
Updated on

ಹಲವು ವರ್ಷಗಳಿಂದ, ಕರುಣ್ ನಾಯರ್ ಅವರ ಹೆಸರು ಭಾರತೀಯ ಕ್ರಿಕೆಟ್ ಮಾತುಕತೆಯಲ್ಲಿ ಕೇಳಿಬರುತ್ತಿದೆ. ವೃತ್ತಿಜೀವನದ ಆರಂಭದಲ್ಲಿ ತ್ರಿಶತಕ ಬಾರಿಸಿದ ಅವರ ಟೆಸ್ಟ್ ಪ್ರಯಾಣವು ಎಂದಿಗೂ ಲಯವನ್ನು ಕಂಡುಕೊಳ್ಳಲಿಲ್ಲ. ಅದಾದ ಎಂಟು ವರ್ಷಗಳ ನಂತರ, ಅವರು ಅಂತಿಮವಾಗಿ ಈ ವರ್ಷದ ಆರಂಭದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದರು. ಆದರೆ, ನಾಲ್ಕು ಟೆಸ್ಟ್‌ಗಳಲ್ಲಿ ಅವರು 25.62 ಸರಾಸರಿಯಲ್ಲಿ ಕೇವಲ 205 ರನ್‌ ಗಳಿಸಲು ಶಕ್ತರಾದರು.

ವೆಸ್ಟ್ ಇಂಡೀಸ್ ವಿರುದ್ಧದ ಮುಂಬರುವ ಎರಡು ಟೆಸ್ಟ್ ಸರಣಿಗೆ ಬಿಸಿಸಿಐ ಆಯ್ಕೆ ಸಭೆಯನ್ನು ಬುಧವಾರ ಪ್ರಕಟಿಸಲು ನಿರ್ಧರಿಸಲಾಗಿತ್ತು, ಆದರೆ ಅದನ್ನು ಗುರುವಾರಕ್ಕೆ (ಇಂದು) ಮುಂದೂಡಲಾಗಿದೆ. ಇಂಗ್ಲೆಂಡ್‌ನಲ್ಲಿ ಸಾಧಾರಣ ಪ್ರದರ್ಶನ ನೀಡಿದ ಹೊರತಾಗಿಯೂ ಕನ್ನಡಿಗ ಕರುಣ್ ನಾಯರ್ ಅವರನ್ನು ಉಳಿಸಿಕೊಳ್ಳಬಹುದು ಎನ್ನಲಾಗಿದೆ.

ಟೆಲಿಗ್ರಾಫ್ ಇಂಡಿಯಾ ಪ್ರಕಾರ, ಚಿಂತಕರ ಚಾವಡಿಯ ಪ್ರಭಾವಿ ಸದಸ್ಯರೊಬ್ಬರು ನಾಯರ್ ಅವರು ಸ್ಪಿನ್ ವಿರುದ್ಧ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ನಂಬುತ್ತಾರೆ. ಪಿಚ್‌ಗಳು ಹೆಚ್ಚಾಗಿ ಸ್ಪಿನ್ ಬೌಲಿಂಗ್‌ಗೆ ಸಹಾಯ ಮಾಡುವ ಭಾರತೀಯ ಪರಿಸ್ಥಿತಿಗಳಲ್ಲಿ, ಸ್ಪಿನ್ ಅನ್ನು ನಿಭಾಯಿಸುವುದು ಅಗತ್ಯವಾಗಿರುತ್ತದೆ. ಕರುಣ್ ನಾಯರ್ ಸ್ಪಿನ್ ಅನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಹೆಸರುವಾಸಿಯಾಗಿರುವುದರಿಂದ, ಈ ಕೌಶಲ್ಯವು ಅವರನ್ನು ಮತ್ತೆ ಆಯ್ಕೆಗೆ ಪ್ರಬಲ ಅಭ್ಯರ್ಥಿಯನ್ನಾಗಿ ಮಾಡುತ್ತದೆ. ವೆಸ್ಟ್ ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳು ಅಹಮದಾಬಾದ್ ಮತ್ತು ನವದೆಹಲಿಯಲ್ಲಿ ನಡೆಯಲಿವೆ. ಹೀಗಾಗಿ, ಅವರು ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ.

Karun Nair
ರಣಜಿ ಟ್ರೋಫಿ: ಸಂಭಾವ್ಯರ ಪಟ್ಟಿಯಲ್ಲಿ ಕೆ.ಎಲ್ ರಾಹುಲ್, ಪ್ರಸಿದ್ಧ್, ಕರುಣ್ ನಾಯರ್

ಆದರೆ, ಕರುಣ್ ನಾಯರ್ ಸ್ಥಾನ ಖಚಿತವಿಲ್ಲ. ಆಸ್ಟ್ರೇಲಿಯಾ ಎ ವಿರುದ್ಧ ಭಾರತ ಎ ಪರ 150 ರನ್ ಗಳಿಸಿರುವ ದೇವದತ್ ಪಡಿಕ್ಕಲ್ ಮತ್ತು ಇಂಗ್ಲೆಂಡ್ ಪ್ರವಾಸದಿಂದ ಹೊರಗುಳಿದ ಶ್ರೇಯಸ್ ಅಯ್ಯರ್ ಕೂಡ ತಂಡಕ್ಕೆ ಮರಳುವ ನಿರೀಕ್ಷೆಯಿದೆ. ಇಂಗ್ಲೆಂಡ್‌ನಲ್ಲಿ ಅಷ್ಟೇನು ಉತ್ತಮ ಪ್ರದರ್ಶನ ನೀಡಿಲ್ಲದಿದ್ದರೂ, ಸಾಯಿ ಸುದರ್ಶನ್ ಕೂಡ ಮಧ್ಯಮ ಕ್ರಮಾಂಕದಲ್ಲಿ ಮತ್ತೊಬ್ಬ ಸ್ಪರ್ಧಿಯಾಗಿ ಉಳಿದಿದ್ದಾರೆ.

ವರದಿಗಳು ಅವರನ್ನು ತೆಗೆದುಹಾಕುವ ಸಾಧ್ಯತೆ ಇದೆ ಎಂದು ಸೂಚಿಸುವ ಗಂಟೆಗಳ ಮೊದಲು, ಕರುಣ್ ನಾಯರ್ ಅವರು ದೇಶೀಯ ಪಂದ್ಯದಲ್ಲಿ ಗೋವಾ ವಿರುದ್ಧ ಕೆಎಸ್‌ಸಿಎ ಕಾರ್ಯದರ್ಶಿ ಇಲೆವೆನ್ ಪರ 151* ರನ್ ಗಳಿಸಿದ್ದಾರೆ. ಬಹುತೇಕ ಒಂಟಿಯಾಗಿ 265 ರನ್‌ಗಳನ್ನು ಬೆನ್ನಟ್ಟಿದರು.

ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆದಾರರು ಈಗ ವಿವೇಕ ಮತ್ತು ಸಾಮರ್ಥ್ಯದ ನಡುವೆ ಸಿಲುಕಿಕೊಂಡಿದ್ದಾರೆ. ಸ್ಪಿನ್ ಸ್ನೇಹಿ ಪರಿಸ್ಥಿತಿಗಳಲ್ಲಿ ರನ್‌ಗಳನ್ನು ಹೇಗೆ ಪಡೆಯುವುದು ಎಂದು ತಿಳಿದಿರುವ 33 ವರ್ಷದ ಆಟಗಾರನೊಂದಿಗೆ ಅವರು ಮುಂದುವರಿಯುತ್ತಾರೆಯೇ ಅಥವಾ ಕಿರಿಯ ಮುಖದ ಕಡೆಗೆ ತಿರುಗುತ್ತಾರೆಯೇ? ಎಂಬುದನ್ನು ಕಾದು ನೋಡಬೇಕಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com