
ಅಬುದಾಬಿ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಫೈನಲ್ ಪಂದ್ಯಕ್ಕೆ ರಂಗ ಸಜ್ಜಾಗಿದ್ದು, ಈ ನಡುವೆ ಪಾಕಿಸ್ತಾನಿ ಅಭಿಮಾನಿಯೊಬ್ಬರು ಭಾರತ ತಂಡವನ್ನು ಬಿಡಬೇಡಿ.. ಹೀನಾಯವಾಗಿ ಸೋಲಿಸಿ ಎಂದು ಪಾಕಿಸ್ತಾನ ಬೌಲರ್ ಗೆ ಕೈಮುಗಿದು ಮನವಿ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
ಹೌದು.. ಬರೊಬ್ಬರಿ 40 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಏಷ್ಯಾಕಪ್‌ನ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗುತ್ತಿವೆ. ಸೆಪ್ಟೆಂಬರ್ 28 ಭಾನುವಾರ ದುಬೈನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಎರಡೂ ತಂಡಗಳು ಸಜ್ಜಾಗುತ್ತಿವೆ.
ಈಗಾಗಲೇ 2025 ರ ಏಷ್ಯಾಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ, ಪಾಕಿಸ್ತಾನವನ್ನು ಎರಡು ಬಾರಿ ಸೋಲಿಸಿದೆ. ಈಗ, ಎರಡೂ ತಂಡಗಳು ಮತ್ತೊಮ್ಮೆ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿವೆ. ಹೀಗಾಗಿ ಈ ಪಂದ್ಯದ ಮೇಲಿನ ಕುತೂಹಲ ಇಮ್ಮಡಿಯಾಗಿದ್ದು, ಯಾವುದೇ ತಂಡ ಗೆದ್ದರೂ ಪಂದ್ಯ ಮಾತ್ರ ರಣರೋಚಕವಾಗಿರುತ್ತದೆ ಎಂದು ಅಂದಾಜಿಸಲಾಗಿದೆ.
ಈ ಮಧ್ಯೆ, ಪಾಕಿಸ್ತಾನಿ ಅಭಿಮಾನಿಯೊಬ್ಬರು ಪಾಕ್ ತಂಡದ ವೇಗದ ಹ್ಯಾರಿಸ್ ರೌಫ್ ಅವರ ಬಳಿ ‘ಭಾರತವನ್ನು ಬಿಡಬೇಡಿ’ (ಫೈನಲ್‌ನಲ್ಲಿ ಭಾರತವನ್ನು ಸೋಲಿಸಿ) ಎಂದು ಕೂಗುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಏಷ್ಯಾಕಪ್‌ನ ನಿರ್ಣಾಯಕ ಸೂಪರ್ ಫೋರ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಬಾಂಗ್ಲಾದೇಶವನ್ನು 11 ರನ್‌ಗಳಿಂದ ಸೋಲಿಸಿ ಫೈನಲ್‌ಗೆ ಅರ್ಹತೆ ಪಡೆಯಿತು. ಪಂದ್ಯದ ನಂತರ, ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ ಅಭಿಮಾನಿಗಳೊಂದಿಗೆ ಕೈಕುಲುಕುತ್ತಿದ್ದರು.
ಈ ಸಮಯದಲ್ಲಿ, ಅಭಿಮಾನಿಯೊಬ್ಬರು ರೌಫ್ ಅವರ ಕೈ ಹಿಡಿದು ‘ಫೈನಲ್‌ನಲ್ಲಿ ಭಾರತವನ್ನು ಬಿಡಬಾರದು, ಫೈನಲ್‌ನಲ್ಲಿ ಭಾರತವನ್ನು ಬಿಡಬಾರದು’ ಎಂದು ಪದೇ ಪದೇ ಕೂಗಿ ಹೇಳಿದ್ದಾರೆ. ಕೊನೆಗೆ ಮೈಮುಗಿದು ವಿನಂತಿಸಿದ್ದಾನೆ.
ಇತ್ತ ಹ್ಯಾರಿಸ್ ರೌಫ್ ಕೂಡ ನಗುತ್ತಾ ತಲೆಯಾಡಿಸಿದ್ದು, ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Advertisement