
2021 ರಿಂದ ರಾಜಸ್ಥಾನ್ ರಾಯಲ್ಸ್ ತಂಡದ ನಿರ್ದೇಶಕರಾಗಿದ್ದ ಶ್ರೀಲಂಕಾದ ಮಾಜಿ ನಾಯಕ ಕುಮಾರ್ ಸಂಗಕ್ಕಾರ, ಈ ವರ್ಷದ ಆರಂಭದಲ್ಲಿ ಹೆಡ್ ಕೋಚ್ ಹುದ್ದೆಯಿಂದ ಕೆಳಗಿಳಿದ ರಾಹುಲ್ ದ್ರಾವಿಡ್ ಅವರ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ. ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಯು ಕೊನೆಗೊಂಡ ನಂತರ, ಭಾರತದ ಮಾಜಿ ಕ್ರಿಕೆಟಿಗ ಐಪಿಎಲ್ 2025ನೇ ಆವೃತ್ತಿಗಿಂತ ಮುನ್ನ ರಾಜಸ್ಥಾನ್ ರಾಯಲ್ಸ್ (RR) ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡರು. ಆದರೆ, ಕೇವಲ ಒಂದು ಆವೃತ್ತಿಯ ನಂತರ, ಅವರು ಆ ಹುದ್ದೆಯನ್ನು ತ್ಯಜಿಸಿದರು.
ಇಎಸ್‌ಪಿಎನ್‌ಕ್ರಿಕ್‌ಇನ್ಫೊ ಪ್ರಕಾರ, ಸಂಜು ಸ್ಯಾಮ್ಸನ್ ತಂಡದಿಂದ ಬಿಡುಗಡೆ ಮಾಡುವಂತೆ ಕೋರಿದ ನಂತರ, ಆರ್‌ಆರ್‌ಗೆ ಮುಂದಿನ ನಾಯಕ ಯಾರು ಎಂಬುದನ್ನು ನಿರ್ಧರಿಸುವುದು ಸಂಗಕ್ಕಾರ ಅವರ ಮುಂದಿರುವ ದೊಡ್ಡ ಕೆಲಸವಾಗಿದೆ. ತಂಡವು ವಿಕ್ರಮ್ ರಾಥೋಡ್ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ಮುಂದುವರಿಸಲಿದ್ದು, ಶೇನ್ ಬಾಂಡ್ ಬೌಲಿಂಗ್ ಕೋಚ್ ಆಗಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದೆ ಎಂದು ವರದಿ ಹೇಳುತ್ತದೆ.
ಆಗಸ್ಟ್‌ನಲ್ಲಿ, ಫ್ರಾಂಚೈಸಿಯಲ್ಲಿ ದ್ರಾವಿಡ್‌ಗೆ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿತ್ತು. ಆದರೆ, ಅವರು ಅದನ್ನು ತಿರಸ್ಕರಿಸಿದರು ಎಂದು ಆರ್‌ಆರ್ ಹೇಳಿಕೊಂಡಿತು. ತಂಡದ ಸದಸ್ಯರು ಮತ್ತು ಅಭಿಮಾನಿಗಳ ಪರವಾಗಿ ತಂಡಕ್ಕೆ ನೀಡಿದ ಸೇವೆಗಳಿಗಾಗಿ ಫ್ರಾಂಚೈಸಿ ಮಾಜಿ ಭಾರತೀಯ ಕ್ರಿಕೆಟಿಗನಿಗೆ ಕೃತಜ್ಞತೆ ಸಲ್ಲಿಸಿತು.
ದ್ರಾವಿಡ್ ಕೊನೆಯ ಬಾರಿಗೆ 2014 ಮತ್ತು 2015 ರಲ್ಲಿ ಆರ್‌ಆರ್ ಜೊತೆ ಮೆಂಟರ್ ಪಾತ್ರವನ್ನು ನಿರ್ವಹಿಸಿದ್ದರು. ಅವರು ಐಪಿಎಲ್ 2012 ರಲ್ಲಿ ತಂಡದ ನಾಯಕರಾಗಿ ಶೇನ್ ವಾರ್ನ್ ಅವರಿಂದ ಜವಾಬ್ದಾರಿಯನ್ನು ವಹಿಸಿಕೊಂಡರು. ನಾಯಕನಾಗಿ ಅವರ ಮೊದಲ ಸೀಸನ್ ಅಂಕಪಟ್ಟಿಯಲ್ಲಿ ಆರ್‌ಆರ್ 7ನೇ ಸ್ಥಾನದಲ್ಲಿ ಕೊನೆಗೊಂಡಿತು. ಅವರು 2014 ರಲ್ಲಿ ತಂಡವನ್ನು ಪ್ಲೇಆಫ್‌ಗೆ ಕರೆದೊಯ್ಯುವಲ್ಲಿ ಯಶಸ್ವಿಯಾದರು. ಹೆಡ್ ಕೋಚ್ ಆಗಿದ್ದ 2025ರಲ್ಲಿ, ಆರ್‌ಆರ್ ತಂಡ 14 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಪಾಯಿಂಟ್ಸ್ ಟೇಬಲ್‌ನಲ್ಲಿ 9ನೇ ಸ್ಥಾನ ಗಳಿಸಿತು.
Advertisement