Asia Cup 2025: 'ಭಾರತವೇ ಗೆಲ್ಲುವ ಫೇವರಿಟ್.. ಆದರೆ..': ಪಾಕ್ ಮಾಜಿ ಕ್ರಿಕೆಟಿಗ Wasim Akram

'ಫೈನಲ್‌ ಪಂದ್ಯಕ್ಕೂ ಮುನ್ನ ಭಾರತವು ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ, ಉತ್ತಮ ಆಟದ ಮೂಲಕ ಭಾರತವನ್ನು ಪಾಕಿಸ್ತಾನವು ಸೋಲಿಸಬಹುದು.
Wasim Akram
ವಾಸಿಂ ಅಕ್ರಂ
Updated on

ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತವೇ ಗೆಲ್ಲುವ ಫೇವರಿಟ್ ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ವಾಸಿಂ ಆಕ್ರಂ ಹೇಳಿದ್ದಾರೆ.

ಏಷ್ಯಾ ಕಪ್‌ 17ನೇ ಆವೃತ್ತಿಯ ಫೈನಲ್‌ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿದ್ದು, ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿದೆ ಎಂದು ಪಾಕ್‌ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ ಹೇಳಿದ್ದಾರೆ.

ಖಾಸಗಿ ಚಾನೆಲ್ ಜೊತೆ ಮಾತನಾಡಿರುವ ವಾಸಿಂ ಅಕ್ರಂ, 'ಫೈನಲ್‌ ಪಂದ್ಯಕ್ಕೂ ಮುನ್ನ ಭಾರತವು ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ, ಉತ್ತಮ ಆಟದ ಮೂಲಕ ಭಾರತವನ್ನು ಪಾಕಿಸ್ತಾನವು ಸೋಲಿಸಬಹುದು.

ಸೂಪರ್‌ 4 ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಕೇವಲ 136 ರನ್‌ಗಳನ್ನು ಪಾಕಿಸ್ತಾನ ಡಿಫೆಂಡ್ ಮಾಡಿತ್ತು. ಇದು ಪಾಕಿಸ್ತಾನದ ಮನೋಬಲವನ್ನು ಹೆಚ್ಚಿಸಿದೆ. ಪಾಕ್‌ ಬೌಲಿಂಗ್‌ ದಾಳಿಯು ಫೈನಲ್‌ನಲ್ಲೂ ಹಾಗೇ ಮುಂದುವರಿಯುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

Wasim Akram
Asia Cup 2025: 'Haris Rauf ದಂಡವನ್ನು ನಾನೇ ಕಟ್ಟುತ್ತೇನೆ': ಪಾಕ್ ವೇಗಿಯ ದುರ್ವರ್ತನೆ ಸಮರ್ಥಿಸಿದ PCB ಅಧ್ಯಕ್ಷ Mohsin Naqvi!

ಆತ್ಮವಿಶ್ವಾಸ ಮುಖ್ಯ

‘ಟಿ 20 ಕ್ರಿಕೆಟ್‌ನಲ್ಲಿ ಏನು ಬೇಕಾದರೂ ಸಂಭವಿಸಬಹುದು. ಒಂದು ಉತ್ತಮ ಇನ್ನಿಂಗ್ಸ್‌ ಪಂದ್ಯದ ಗತಿಯನ್ನೇ ಬದಲಿಸಬಲ್ಲದು. ಉತ್ತಮ ಕ್ರಿಕೆಟ್‌ ಆಡುವ ತಂಡಕ್ಕೆ ಗೆಲ್ಲುವ ಅರ್ಹತೆಯಿದೆ. ಭಾರತದ ವಿರುದ್ಧ ಪಂದ್ಯ ಗೆಲ್ಲಬೇಕಾದರೆ, ಪಾಕಿಸ್ತಾನವು ವಿಶ್ವಾಸದಿಂದ ಮೈದಾನಕ್ಕೆ ಕಣಕ್ಕಿಳಿಯಬೇಕಿದೆ.

ಭಾರತದ ಆರಂಭಿಕ ಆಟಗಾರರಾದ ಅಭಿಷೇಕ್‌ ಶರ್ಮಾ, ಶುಭಮನ್‌ ಗಿಲ್‌ ಅವರ ವಿಕೆಟ್‌ಗಳು ಪಂದ್ಯದ ಗತಿಯನ್ನು ಬದಲಿಸಲಿವೆ. ಹೊಸ ಚೆಂಡಿನಲ್ಲೇ ಅವರ ವಿಕೆಟ್‌ ಪಡೆದರೆ, ಪಾಕ್‌ ಮೇಲುಗೈ ಸಾಧಿಸಬಹುದು ಎಂದು ಅಕ್ರಂ ಅಭಿಪ್ರಾಯಪಟ್ಟಿದ್ದಾರೆ.

41 ವರ್ಷಗಳ ಏಷ್ಯಾ ಕಪ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಉಭಯ ತಂಡಗಳು ಫೈನಲ್‌ ಪಂದ್ಯದಲ್ಲಿ ಸೆಣಸುತ್ತಿದ್ದು, ಇಂದು ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com