'ಪ್ರತಿಯೊಬ್ಬರಿಗೂ ಇಷ್ಟ, ಕಷ್ಟಗಳು ಇರುತ್ತವೆ': ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಪರ ಯುವರಾಜ್ ಸಿಂಗ್ ಬ್ಯಾಟಿಂಗ್!

ರಾಹುಲ್ ದ್ರಾವಿಡ್ ಅವರ ನಂತರ ಗಂಭೀರ್ 2024 ರಲ್ಲಿ ಭಾರತೀಯ ಪುರುಷರ ತಂಡದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡರು.
Yuvraj Singh
ಯುವರಾಜ್ ಸಿಂಗ್
Updated on

ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ತೀಕ್ಷ್ಣ ಮನಸ್ಥಿತಿಯನ್ನು ಶ್ಲಾಘಿಸಿರುವ ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್, ಇದು ಭಾರತೀಯ ಕ್ರಿಕೆಟ್ ತಂಡವನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲು ಸಹಾಯ ಮಾಡಿದೆ ಎಂದಿದ್ದಾರೆ.

ರಾಹುಲ್ ದ್ರಾವಿಡ್ ಅವರ ನಂತರ ಗಂಭೀರ್ 2024 ರಲ್ಲಿ ಭಾರತೀಯ ಪುರುಷರ ತಂಡದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡರು. ಅಂದಿನಿಂದ, ಭಾರತವು 2025ರಲ್ಲಿ ಚಾಂಪಿಯನ್ಸ್ ಟ್ರೋಫಿ ಮತ್ತು 2026ರಲ್ಲಿ ಟಿ20 ವಿಶ್ವಕಪ್ ಗೆದ್ದಿದೆ. ಆದಾಗ್ಯೂ, ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಸೋಲು ಮತ್ತು ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ತವರು ಟೆಸ್ಟ್ ಸರಣಿಯ ವೈಟ್‌ವಾಶ್ ಸೇರಿದಂತೆ ತಂಡವು ಸಾಕಷ್ಟು ಹಿನ್ನಡೆಗಳನ್ನು ಕಂಡಿದೆ. ಇದಕ್ಕಾಗಿ ಗೌತಮ್ ಗಂಭೀರ್ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿಬಂದಿವೆ.

ಸ್ಪೋರ್ಟ್ಸ್ ತಕ್ ಜೊತೆ ಮಾತನಾಡಿದ ಯುವರಾಜ್, ಗಂಭೀರ್ ಆಡುವ ದಿನಗಳಲ್ಲಿ ಮತ್ತು ಈಗ ತರಬೇತುದಾರನಾಗಿ ಯಾವಾಗಲೂ ವಿಜೇತ ಮನಸ್ಥಿತಿಯನ್ನು ಹೊಂದಿದ್ದಾರೆ ಎಂದು ಹೇಳಿದರು.

'ನಾನು ಅಂಡರ್-16 ಮತ್ತು ಅಂಡರ್-19 ಹಂತಗಳಿಂದಲೂ ಗೌತಮ್ ಜೊತೆ ಆಡುತ್ತಿದ್ದೇನೆ. ಗೌತಮ್‌ಗೆ ಕ್ರಿಕೆಟ್ ಬಗ್ಗೆ ಉತ್ತಮ ಜ್ಞಾನವಿದೆ ಎಂದು ನನಗೆ ಯಾವಾಗಲೂ ಅನಿಸುತ್ತಿತ್ತು. ಕ್ರಿಕೆಟ್ ಬಗ್ಗೆ ಮತ್ತು ಅವರು ಆಟವನ್ನು ಹೇಗೆ ಗ್ರಹಿಸುತ್ತಾರೆ ಎಂಬುದರ ಬಗ್ಗೆ ನಾವು ಮಾತನಾಡಿದಾಗಲೆಲ್ಲ ಅವರು ಅದರ ಬಗ್ಗೆ ಆಳವಾಗಿ ಯೋಚಿಸುತ್ತಿದ್ದರು ಎಂಬುದು ಸ್ಪಷ್ಟವಾಗಿತ್ತು. ಭಾರತಕ್ಕೆ ಯಶಸ್ವಿ ಆಟಗಾರನಾಗಿ, ಎರಡು ವಿಶ್ವಕಪ್ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿ, ಅವರು ಸ್ವಾಭಾವಿಕವಾಗಿಯೇ ಉನ್ನತ ಮಟ್ಟದಲ್ಲಿ ಯೋಚಿಸುವ ವಿಶ್ವಾಸವನ್ನು ಹೊಂದಿದ್ದಾರೆ' ಎಂದು ಯುವರಾಜ್ ಹೇಳಿದರು.

Yuvraj Singh
'Told Dad It's Not Okay': ಬಹಿರಂಗವಾಗಿ ಧೋನಿ, ಕಪಿಲ್ ದೇವ್ ಕ್ಷಮೆಯಾಚಿಸಿದ ಯುವರಾಜ್ ಸಿಂಗ್!

ಐಪಿಎಲ್‌ನಲ್ಲಿ, ವಿಶೇಷವಾಗಿ ಕೋಲ್ಕತ್ತಾ ನೈಟ್ ರೈಡರ್ಸ್‌ನ ಮಾರ್ಗದರ್ಶಕರಾಗಿ ಗಂಭೀರ್ ಅವರ ಯಶಸ್ಸನ್ನು ಅವರು ಮತ್ತಷ್ಟು ಎತ್ತಿ ತೋರಿಸಿದರು.

'ಕೆಕೆಆರ್‌ನಲ್ಲಿ ಅವರು ನೀಡಿದ ಮಾರ್ಗದರ್ಶನವೇ ಇದಕ್ಕೆ ಸಾಕ್ಷಿ ಎಂದು ನಾನು ಭಾವಿಸುತ್ತೇನೆ. ಅವರ ನಾಯಕತ್ವದಲ್ಲಿ ತಂಡವು ಒಮ್ಮೆ ನಾಯಕನಾಗಿ ಗೆದ್ದಿತು ಮತ್ತು ನಂತರ ಅವರು ಮಾರ್ಗದರ್ಶಕರಾಗಿ ಮರಳಿದಾಗ ಮತ್ತೆ ಗೆದ್ದಿತು. ಅವರು ಏನನ್ನಾದರೂ ಸರಿಯಾಗಿ ಮಾಡುತ್ತಿರಬೇಕು. ಪ್ರತಿಯೊಬ್ಬರಿಗೂ ಇಷ್ಟಗಳು ಮತ್ತು ಕಷ್ಟಗಳು ಇರುತ್ತವೆ. ಆದರೆ, ನೀವು ಭಾರತೀಯ ಕೋಚ್ ಆಗಿದ್ದಾಗ, ನಿಮ್ಮನ್ನು ನೋಡುವ ಕಣ್ಣುಗಳು ತುಂಬಾ ಇರುತ್ತವೆ' ಎಂದು ಅವರು ಹೇಳಿದರು.

'ನೀವು ತಪ್ಪು ಮಾಡಿದರೆ, ಅದನ್ನು ನೂರು ಬಾರಿ ಹೇಳಲಾಗುತ್ತದೆ. ನೀವು ಏನಾದರೂ ಒಳ್ಳೆಯದನ್ನು ಮಾಡಿದರೆ, ಅದನ್ನು ಸಾವಿರ ಬಾರಿ ಹೇಳಲಾಗುತ್ತದೆ. ಆದ್ದರಿಂದಲೇ ಭಾರತ ಟೆಸ್ಟ್ ಸರಣಿಯನ್ನು ಸೋತಾಗ ಅವರು ಟೀಕೆಗಳನ್ನು ಎದುರಿಸಿದರು. ನಂತರ ಅವರು ತಮ್ಮ ತಂತ್ರಕ್ಕೆ ಅಂಟಿಕೊಂಡರು. ಇದರಿಂದಲೇ ಈಗ ಭಾರತ ತಂಡವು ವಿಶ್ವಕಪ್ ಗೆದ್ದು ದಾಖಲೆ ನಿರ್ಮಿಸಿದೆ. ಈಗ ಗೌತಮ್ ಗಂಭೀರ್ ಮತ್ತೆ ಉನ್ನತ ಸ್ಥಾನಕ್ಕೆ ಮರಳಿದ್ದಾರೆ. ಅದೇ ಜೀವನ. ಅದು ಏರಿಳಿತದಿಂದ ಕೂಡಿರುತ್ತದೆ. ಅದನ್ನೇ ನಾವು ಕಲಿತಿದ್ದೇವೆ' ಎಂದು ಯುವರಾಜ್ ಸಿಂಗ್ ಹೇಳಿದರು.

'ಅವರು ಸ್ಪಷ್ಟ ತಂತ್ರ ಅಥವಾ ಆಟದ ಶೈಲಿಗೆ ಬದ್ಧರಾಗಿದ್ದರು. ವೈಫಲ್ಯದ ಅಪಾಯವಿದ್ದರೂ ಸಹ, ಅವರು ಆ ವಿಧಾನವನ್ನು ಬದಲಿಸದಿರಲು ನಿರ್ಧರಿಸಿದರು ಮತ್ತು ಯೋಜನೆಯನ್ನು ನಂಬಿದ್ದರು. ಈ ಸ್ಥಿರತೆಯಿಂದಾಗಿ, ತಂಡವು ಉತ್ತಮ ಫಲಿತಾಂಶಗಳನ್ನು ಪಡೆಯಲು ಪ್ರಾರಂಭಿಸಿತು. ನಾಯಕನಾಗಿ ಸೂರ್ಯಕುಮಾರ್ ಯಾದವ್ ಮತ್ತಷ್ಟು ವ್ಯತ್ಯಾಸ ಉಂಟುಮಾಡಿದರು. ತಂಡದ ಆಕ್ರಮಣಕಾರಿ ಮನಸ್ಥಿತಿಯು ಮೊದಲ ಎಸೆತದಿಂದಲೇ ಆರಂಭವಾಯಿತು ಮತ್ತು ಎದುರಾಳಿಗಳನ್ನು ಬೆದರಿಸಿತು' ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com