IPL 2026: ರನ್ ಕದಿಯಲು ಹೋಗಿ ರನೌಟ್ ಆದ ರಘುವಂಶಿ, ಮೈದಾನದಲ್ಲೇ ಸಿಟ್ಟಾದ ರಿಂಕ್ ಸಿಂಗ್ !Video

ಆದರೆ ಒತ್ತಡಕ್ಕೆ ಒಳಗಾಗಿ ಇಲ್ಲದ ರನ್‌ ಕದಿಯಲು ಹೋಗಿ ಪೆವಿಲಿಯನ್ ಸೇರಿದರು. ಈ ಮಹಾ ಯಡವಟ್ಟಿನಿಂದ ಪಂದ್ಯವೇ ಕೈ ಜಾರಿತು.
Rinku Singh
ರಿಂಕ್ ಸಿಂಗ್
Updated on

ಕೋಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಸನ್ ರೈಸರ್ಸ್ ವಿರುದ್ದದ ಪಂದ್ಯದಲ್ಲಿ ಅಂಗ್‌ಕ್ರಿಶ್ ರಘುವಂಶಿ 29 ಎಸೆತಗಳಲ್ಲಿ 52 ರನ್ ಬಾರಿಸಿ ಕೆಕೆಆರ್ ಪರ ಉತ್ತಮ ಪ್ರದರ್ಶನ ತೋರಿದರು.

ಆದರೆ ಒತ್ತಡಕ್ಕೆ ಒಳಗಾಗಿ ಇಲ್ಲದ ರನ್‌ ಕದಿಯಲು ಹೋಗಿ ಪೆವಿಲಿಯನ್ ಸೇರಿದರು. ಈ ಮಹಾ ಯಡವಟ್ಟಿನಿಂದ ಪಂದ್ಯವೇ ಕೈ ಜಾರಿತು.

ಹೌದು. 11ನೇ ಓವರ್‌ ಕೊನೆಯ ಎಸೆತದಲ್ಲಿ ರಿಂಕು ಸಿಂಗ್ ಅವರು ಬ್ಯಾಕ್‌ವರ್ಡ್‌ ಪಾಯಿಂಟ್‌ನತ್ತ ಚೆಂಡನ್ನು ತಳ್ಳಿದರು. ಆದರೆ, ಓಡಲಿಲ್ಲ. ಆಗ ಅಲ್ಲಿಯೇ ಫೀಲ್ಡ್ ಮಾಡುತ್ತಿದ್ದ ಇಶಾನ್‌ ಮಲಿಂಗ್‌ ಅವರು ಚೆಂಡನ್ನು ಶಿವಂಗ್ ಕುಮಾರ್ ಗೆ ಎಸೆದರು.

Rinku Singh
IPL 2026: ಅಭಿಷೇಕ್, ಕ್ಲಾಸೆನ್ ಸ್ಫೋಟಕ ಬ್ಯಾಟಿಂಗ್; KKR ವಿರುದ್ಧ SRH ಭರ್ಜರಿ ಗೆಲುವು

ನಾನ್‌ ಸ್ಟ್ರೈಕರ್‌ ಆಂಡ್‌ನಲ್ಲಿ ಅಂಗ್‌ಕ್ರಿಶ್ ರಘುವಂಶಿ ಸಿಂಗಲ್‌ ರನ್‌ ಕದಿಯಲು ಹೋದರು. ಆದರೆ ಶಿವಂಗ್‌ ಚೆಂಡನ್ನು ಹಿಡಿದು ರನೌಟ್ ಮಾಡಿದರು. ಇದರಿಂದಾಗಿ ರಿಂಕ್ ಸಿಂಗ್ ಸಿಟ್ಟಾದರು. ಮತ್ತೊಂದೆಡೆ ಸನ್‌ರೈಸರ್ಸ್‌ನತ್ತ ಗೆಲುವಿನ ಹಾದಿ ಸುಗಮವಾಯಿತು.

ನಂತರ ಬಂದ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಪರಿಣಾಮ ಕೆಕೆಆರ್‌ 16 ಓವರ್‌ಗಳಲ್ಲಿ 161 ರನ್‌ ಸೇರಿಸುವುದರೊಂದಿಗೆ ಎರಡನೇ ಬಾರಿಗೆ ಸೋಲಿಗೆ ಶರಣಾಯಿತು. ಈ ಹಿಂದೆ ಮುಂಬೈ ಇಂಡಿಯನ್ಸ್ ವಿರುದ್ಧ ಸೋತಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com