IPL 2026: 'ಹೀಗೆ ಮಾಡಿದರೆ ಜಸ್ಪ್ರೀತ್ ಬುಮ್ರಾ ವಿಕೆಟ್ ಪಡೆಯುವುದು ಕಷ್ಟವಲ್ಲ': ಮಾಜಿ ಆಟಗಾರ ಇರ್ಫಾನ್ ಪಠಾಣ್

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಬುಮ್ರಾ ಅಷ್ಟೇನು ಪರಿಣಾಮಕಾರಿಯಾಗಿ ಕಾಣಿಸಿಕೊಂಡಿಲ್ಲ. ಪಂಜಾಬ್ ತಂಡವು ಕೇವಲ 16.3 ಓವರ್‌ಗಳಲ್ಲಿ 196 ರನ್‌ಗಳ ಗುರಿಯನ್ನು ಬೆನ್ನಟ್ಟಿತು.
Jasprit Bumrah
ಜಸ್ಪ್ರೀತ್ ಬುಮ್ರಾ
Updated on

ಇಂಡಿಯನ್ ಪ್ರೀಮಿಯರ್ ಲೀಗ್‌ 2026ನೇ (IPL) ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ (MI) ತಂಡ ಆಡಿರುವ ಐದು ಪಂದ್ಯಗಳಲ್ಲಿ ಜಸ್ಪ್ರೀತ್ ಬುಮ್ರಾ ಒಂದೇ ಒಂದು ವಿಕೆಟ್ ಪಡೆಯದಿರುವುದು ಬಹುತೇಕರಿಗೆ ಆಶ್ಚರ್ಯ ಉಂಟುಮಾಡಿದೆ. ಗುರುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ವಿರುದ್ಧದ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ 41 ರನ್ ನೀಡಿ ಯಾವುದೇ ವಿಕೆಟ್ ಪಡೆದಿಲ್ಲ. ಈ ಆವೃತ್ತಿಯಲ್ಲಿ ಸತತ ಐದನೇ ಪಂದ್ಯವಾಗಿದ್ದು, ಬುಮ್ರಾ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ. ಬುಮ್ರಾ 8.63ರ ಎಕಾನಮಿ ದರದಲ್ಲಿ ರನ್ ಸೋರಿಕೆ ಮಾಡಿದ್ದಾರೆ. ಬುಮ್ರಾ ಅವರ ಕಳಪೆ ಬೌಲಿಂಗ್ ಪ್ರದರ್ಶನವನ್ನು ಟೀಕಿಸಿದ ಇರ್ಫಾನ್ ಪಠಾಣ್, ಬೌಲರ್ ಹೆಚ್ಚು ಸ್ಲೋವರ್ ಎಸೆತಗಳನ್ನು ಎಸೆಯಬಾರದು ಎಂದು ಸೂಚಿಸಿದರು.

'ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಿಂದ ವಿಕೆಟ್‌ಗಳು ಬಹಳ ಮುಖ್ಯ. ಅವರ ಫಾರ್ಮ್‌ನಲ್ಲಿ ಯಾವುದೇ ದೊಡ್ಡ ಸಮಸ್ಯೆ ಇಲ್ಲ. ಆದರೆ, ಈ ಆವೃತ್ತಿಯಲ್ಲಿ ಅವರ ಸರಾಸರಿ ವೇಗ ಗಂಟೆಗೆ 130 ಕಿಮೀ ಇದೆ. ಅವರು ಸುಮಾರು ಶೇ 44 ರಷ್ಟು ಸಮಯ ಸ್ಲೋವರ್ ಚೆಂಡನ್ನು ಬಳಸುತ್ತಿದ್ದಾರೆ. ಅಂದರೆ ಬಹುತೇಕ ಪ್ರತಿ ಎರಡನೇ ಚೆಂಡು ಸ್ಲೋವರ್ ಎಸೆತವಾಗಿರುತ್ತದೆ' ಎಂದು ಪಠಾಣ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದ್ದಾರೆ.

ಮುಂಬೈ ಇಂಡಿಯನ್ಸ್ vs ಪಂಜಾಬ್ ಕಿಂಗ್ಸ್ ಪಂದ್ಯಕ್ಕೂ ಮುನ್ನ ಗುರುವಾರ ಇರ್ಫಾನ್ ಪಠಾಣ್ ವಿಶ್ಲೇಷಣಾ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ.

'ಈಗ ಜಸ್ಪ್ರೀತ್ ಬುಮ್ರಾ ಹೀಗೆ ಮಾಡುತ್ತಿರುವುದು ಏಕೆ? ಇದರ ಬಗ್ಗೆ ಆಳವಾದ ಯೋಚನೆ ಬೇಕು ಎಂದು ನಾನು ಭಾವಿಸುತ್ತೇನೆ. ಅವರು ಹೆಚ್ಚು ವೇಗದ ಎಸೆತಗಳನ್ನು ಎಸೆದು ನಿಧಾನಗತಿಯ ಎಸೆತಗಳ ಶೇಕಡಾವಾರು ಪ್ರಮಾಣವನ್ನು ಕಡಿಮೆ ಮಾಡಿದರೆ, ಫಲಿತಾಂಶಗಳು ಬರುತ್ತವೆ. ಇದು ತುಂಬಾ ಸರಳ ಪರಿಹಾರ. ಬುಮ್ರಾಗೆ ತರಬೇತಿಯ ಅಗತ್ಯವಿಲ್ಲ, ಆದರೆ ಫಲಿತಾಂಶಗಳು ಏನಾಗುತ್ತಿವೆ ಎಂಬುದನ್ನು ತೋರಿಸುತ್ತಿವೆ' ಎಂದು ಅವರು ಹೇಳಿದರು.

Jasprit Bumrah
IPL 2026: ಸತತ ಐದು ಐಪಿಎಲ್ ಪಂದ್ಯಗಳಲ್ಲಿ ಒಂದೇ ಒಂದು ವಿಕೆಟ್ ಪಡೆಯದ ಜಸ್ಪ್ರೀತ್ ಬುಮ್ರಾ; ಆರ್ ಅಶ್ವಿನ್ ಹೇಳಿದ್ದೇನು?

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಬುಮ್ರಾ ಅಷ್ಟೇನು ಪರಿಣಾಮಕಾರಿಯಾಗಿ ಕಾಣಿಸಿಕೊಂಡಿಲ್ಲ. ಪಂಜಾಬ್ ತಂಡವು ಕೇವಲ 16.3 ಓವರ್‌ಗಳಲ್ಲಿ 196 ರನ್‌ಗಳ ಗುರಿಯನ್ನು ಬೆನ್ನಟ್ಟಿತು. ಪಿಬಿಕೆಎಸ್‌ನ ಆರಂಭಿಕ ಆಟಗಾರ ಪ್ರಭ್ಸಿಮ್ರನ್ ಸಿಂಗ್ 39 ಎಸೆತಗಳಲ್ಲಿ ಔಟಾಗದೆ 80 ರನ್ ಗಳಿಸಿದರೆ, ನಾಯಕ ಶ್ರೇಯಸ್ ಅಯ್ಯರ್ 35 ಎಸೆತಗಳಲ್ಲಿ 66 ರನ್ ಗಳಿಸಿದರು.

ಇದರ ಪರಿಣಾಮವಾಗಿ, 2026ರ ಐಪಿಎಲ್‌ ಆವೃತ್ತಿಯಲ್ಲಿ ಮುಂಬೈ ತಂಡ ಸತತ ನಾಲ್ಕನೇ ಸೋಲನ್ನು ಅನುಭವಿಸಿತು. ಅವರು ತಮ್ಮ ಅಭಿಯಾನದ ಆರಂಭಿಕ ಪಂದ್ಯವನ್ನು ಮಾತ್ರ ಗೆದ್ದಿದ್ದಾರೆ ಮತ್ತು ಇದುವರೆಗೆ ಆಡಿದ ಎಲ್ಲ ಪಂದ್ಯಗಳಲ್ಲಿ ಸೋತಿದ್ದಾರೆ.

'ಶೇ 44 ರಷ್ಟು ಸ್ಲೋವರ್ ಚೆಂಡುಗಳು ಮತ್ತು ಗಂಟೆಗೆ ಸರಾಸರಿ ವೇಗ 130 ಕಿಮೀಗಿಂತ ಕಡಿಮೆ ಇದ್ದರೆ, ಅವರು ತನ್ನ ವೇಗವನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ನಿಸ್ಸಂಶಯವಾಗಿ, ನೀವು ಹೆಚ್ಚು ಸ್ಲೋವರ್ ಎಸೆತಗಳನ್ನು ಬೌಲ್ ಮಾಡಿದರೆ, ನಿಮ್ಮ ಸರಾಸರಿ ವೇಗ ಕಡಿಮೆಯಾಗುತ್ತದೆ. ಆದರೆ, ನೀವು ಸ್ಲೋವರ್ ಚೆಂಡಿನ ಶೇಕಡವಾರು ಪ್ರಮಾಣವನ್ನು ಸುಮಾರು 35 ಪ್ರತಿಶತಕ್ಕೆ ಇಳಿಸಬೇಕು. ನೀವು ಅದನ್ನು ಶೇ 30 ರಿಂದ 35 ರಷ್ಟನ್ನು ಇಟ್ಟುಕೊಂಡು ಹೆಚ್ಚು ವೇಗದ ಎಸೆತಗಳನ್ನು ಬೌಲ್ ಮಾಡಿದರೆ, ನಿಮ್ಮ ಸ್ಲೋವರ್ ಚೆಂಡುಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತವೆ. ನೀವು ಸೀಮ್ ಮತ್ತು ಸ್ವಿಂಗ್ ಅನ್ನು ಸಹ ಪಡೆದರೆ, ನೀವು ಬ್ಯಾಟರ್‌ಗಳನ್ನು ಸಹ ಔಟ್ ಮಾಡಬಹುದು' ಎಂದು ಪಠಾಣ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com