

ಹೈದರಾಬಾದ್: ಶನಿವಾರ ಹೈದರಾಬಾದ್‌ನಲ್ಲಿ ನಡೆದ ರೋಚಕ ಐಪಿಎಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅದ್ಭುತ ಗೆಲುವು ಸಾಧಿಸಿತು.
195 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ CSK ಉತ್ತಮವಾಗಿ ಆಡುತಿತ್ತು. ಆದರೆ ಸನ್ ರೈಸರ್ಸ್ ಬೌಲರ್ ಗಳಾದ ನಿತೀಶ್ ಕುಮಾರ್ ರೆಡ್ಡಿ ಮತ್ತು ಎಶಾನ್ ಮಾಲಿಂಗ ಅತ್ಯುತ್ತಮ ವಿಕೆಟ್‌ಗಳನ್ನು ಪಡೆದು ಸೋಲಿನ ದವಡೆಯಿಂದ ಗೆಲುವನ್ನು ಕಸಿದುಕೊಂಡರು.
ಸನ್ ರೈಸರ್ಸ್ ಹೈದರಾಬಾದ್ ತಂಡ ಗೆಲುವು ಸಾಧಿಸುತ್ತಿದ್ದಂತೆ ತಂಡದ ಒಡತಿ ಕಾವ್ಯ ಮಾರನ್ ಸಾಕಷ್ಟು ಸಂಭ್ರಮಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹರ್ಷೋದ್ಘಾರದೊಂದಿಗೆ ಎದ್ದುನಿಂತು ಚಪ್ಪಾಳೆ ತಟ್ಟುವ ಮೂಲಕ ಆಟಗಾರರನ್ನು ಪ್ರೋತ್ಸಾಹಿಸಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಇಶಾನ್ ಕಿಶನ್ ಯುವ ವೇಗಿಗಳ ಬೆನ್ನುತಟ್ಟಿ ಅವರನ್ನು ಅಭಿನಂದಿಸಿದ್ದಾರೆ.
195 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 8 ವಿಕೆಟ್‌ಗಳಿಗೆ 184 ರನ್‌ಗಳಿಗೆ ಸೀಮಿತಗೊಳಿಸಲಾಯಿತು.
ವೇಗಿಗಳಾದ ಎಶಾನ್ ಮಾಲಿಂಗ (4 ಓವರ್‌ಗಳಲ್ಲಿ 3/29), ಸಕಿಬ್ ಹುಸೇನ್ (4 ಓವರ್‌ಗಳಲ್ಲಿ 1/32), ನಿತೀಶ್ ರೆಡ್ಡಿ (4 ಓವರ್‌ಗಳಲ್ಲಿ 2/31) ಮತ್ತು ಸ್ಪಿನ್ನರ್ ಶಿವಾಂಗ್ ಕುಮಾರ್ (3 ಓವರ್‌ಗಳಲ್ಲಿ 1/18) ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಸನ್ ರೈಸನ್ ಹೈದರಾಬಾದ್ ತಂಡ ಗೆಲುವಿನ ನಗೆ ಬೀರಿತು.
Advertisement