IPL 2026: ಮೂರು ಕ್ಯಾಚ್ ಕೈ ಚೆಲ್ಲಿದ್ದ ಪಂಚಾಬ್ ಸ್ಟಾರ್ ಆಟಗಾರ ಶಶಾಂಕ್ ಸಿಂಗ್! ಕೋಚ್ ರಿಕಿ ಪಾಂಟಿಂಗ್ ರಿಯಾಕ್ಷನ್ ಹೇಗಿತ್ತು ನೋಡಿ...

ಆದಾಗ್ಯೂ ಪಂದ್ಯ ಮುಗಿದ ನಂತರ ಶ್ರೇಯಸ್ ಅಯ್ಯರ್ ಹಾಗೂ ರಿಕಿ ಪಾಟಿಂಗ್ ಇಬ್ಬರೂ ಶಶಾಂಕ್ ಅವರನ್ನು ತಬ್ಬಿಕೊಂಡು ಗೆಲುವನ್ನು ಸಂಭ್ರಮಿಸಿದರು.
Ricky Ponting
ರಿಕಿ ಪಾಂಟಿಂಗ್
Updated on

ನ್ಯೂ ಚಂಡಿಗಢ: ಮುಲ್ಲನ್ ಪುರ್ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡ ರಿಷಬ್ ಪಂತ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 54 ರನ್ ಗಳ ಅಂತರದಲ್ಲಿ ಮಣಿಸಿತು. ಆದರೆ ಶಶಾಂಕ್ ಸಿಂಗ್ ಫೀಲ್ಡಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡಿ ಮೂರು ಕ್ಯಾಚ್‌ಗಳನ್ನು ಕೈಚೆಲ್ಲಿದರು.

ಮುಕುಲ್ ಚೌಧರಿ ಅವರ ಕ್ಯಾಚ್ ಸೇರಿದಂತೆ ಮೂರು ಕ್ಯಾಚ್ ಗಳನ್ನು ಕೈ ಚೆಲ್ಲಿದ ಶಶಾಂಕ್ ಸಿಂಗ್ ಬಗ್ಗೆ ನಾಯಕ ಶ್ರೇಯಸ್ ಅಯ್ಯರ್ ಅಷ್ಟಾಗಿ ಯಾವುದೇ ಅಸಮಾಧಾನ ತೋರಿಸದಿದ್ದರೂ ಡಗ್ ಜೌಟ್ ನಲ್ಲಿ ಕುಳಿತಿದ್ದ ಕೋಚ್ ರಿಕಿ ಪಾಟಿಂಗ್ ಮುಖದಲ್ಲಿ ಆತಂಕ, ಅಸಮಾಧಾನ ಗೋಚರಿಸುತಿತ್ತು.

ಆದಾಗ್ಯೂ ಪಂದ್ಯ ಮುಗಿದ ನಂತರ ಶ್ರೇಯಸ್ ಅಯ್ಯರ್ ಹಾಗೂ ರಿಕಿ ಪಾಟಿಂಗ್ ಇಬ್ಬರೂ ಶಶಾಂಕ್ ಅವರನ್ನು ತಬ್ಬಿಕೊಂಡು ಗೆಲುವನ್ನು ಸಂಭ್ರಮಿಸಿದರು.

Ricky Ponting
IPL 2026: ಸಿಕ್ಸರ್ ಗಳ ಸುರಿಮಳೆ, ಶ್ರೇಯಸ್ ಅಯ್ಯರ್ ಪಡೆಯ ಬ್ಯಾಟಿಂಗ್ ಅಬ್ಬರಕ್ಕೆ ಹಲವು ದಾಖಲೆಗಳು ಪತನ!

ಈ ಪಂದ್ಯದಲ್ಲಿನ ಶಶಾಂಕ್ ಸಿಂಗ್ ಅವರ ಕಳಪೆ ಫೀಲ್ಡಿಂಗ್ ಸಾಮಾಜಿಕ ಮಾಧ್ಯಮಗಳಲ್ಲಿಯೂ ಚರ್ಚೆಗೆ ಗ್ರಾಸವಾಗಿತ್ತು. 14ನೇ ಓವರ್ ನಲ್ಲಿ LSG ಬ್ಯಾಟರ್ ನಿಕೋಲಸ್ ಪೋರನ್ , 18ನೇ ಓವರ್ ನಲ್ಲಿ ಮಾರ್ಕ್ರಂ ಹಾಗೂ ತದನಂತರದ ಓವರ್ ನಲ್ಲಿ ಮುಕುಲ್ ಚೌಧರಿ ಅವರ ಕ್ಯಾಚ್ ನ್ನು ಶಶಾಂಕ್ ಕೈ ಚೆಲ್ಲಿದ್ದರು. ಡಗ್ ಔಟ್ ನಲ್ಲಿ ಕುಳಿತಿದ್ದ ರಿಕಿ ಪಾಟಿಂಗ್ ಮುಖದಲ್ಲಿ ತೀವ್ರ ಆತಂಕ ಮನೆ ಮಾಡಿತ್ತು.

ಆದರೆ ಫೀಲ್ಡಿಂಗ್‌ನಲ್ಲಿ ಎಡವಿದರೂ, ಶಶಾಂಕ್ ಸಿಂಗ್ ಬ್ಯಾಟಿಂಗ್‌ನಲ್ಲಿ 6 ಎಸೆತಗಳಲ್ಲಿ 17 ರನ್ ಗಳಿಸಿ ವೇಗದ ಆಟವಾಡಿದರು. ಪಂದ್ಯದ ನಂತರ, ರಿಕಿ ಪಾಂಟಿಂಗ್ ಅವರು ಶಶಾಂಕ್ ಅವರನ್ನು ಅಪ್ಪಿಕೊಂಡು ಆತ್ಮವಿಶ್ವಾಸ ತುಂಬಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com