GT ವಿರುದ್ಧ MIಗೆ ಗೆಲುವು: 'ಶೆಡ್‌ನಲ್ಲಿ ಕುಳಿತುಕೊಳ್ಳಿ ಮತ್ತು ನೀವಿಬ್ಬರು ಮತ್ತೆ ಹೊರಬರಬೇಡಿ' ಎಂದ ಮಾಜಿ ಆಟಗಾರ ಕ್ರಿಸ್ ಶ್ರೀಕಾಂತ್!

ಈ ಗೆಲುವಿನ ಮೂಲಕ ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಜಿಗಿದಿದೆ. ನೆಟ್ ರನ್ ರೇಟ್ ಕೂಡ ಸುಧಾರಿಸಿದೆ. ಸದ್ಯ MI ಆರು ಪಂದ್ಯಗಳನ್ನು ಆಡಿದ್ದು, ಎರಡರಲ್ಲಿ ಗೆಲುವು ಸಾಧಿಸಿದೆ.
Hardik Pandya after Mumbai Indians' win
ಮುಂಬೈ ಇಂಡಿಯನ್ಸ್ ಗೆಲುವಿನ ನಂತರ ಹಾರ್ದಿಕ್ ಪಾಂಡ್ಯ
Updated on

ದೀಪಕ್ ಚಾಹರ್ ಮತ್ತು ಶಾರ್ದೂಲ್ ಠಾಕೂರ್ ಜೋಡಿಯನ್ನು ಬೆಂಚ್‌ಗೆ ಹಿಂತಿರುಗಿಸುವುದರೊಂದಿಗೆ, ಮುಂಬೈ ಇಂಡಿಯನ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026 ರಲ್ಲಿ ಸೋಮವಾರ ಗುಜರಾತ್ ಟೈಟಾನ್ಸ್ (ಜಿಟಿ) ಅನ್ನು 99 ರನ್‌ಗಳಿಂದ ಸೋಲಿಸಿ ಗೆಲುವಿನ ಹಾದಿಗೆ ಮರಳಿತು. ಶಾರ್ದೂಲ್ ಮತ್ತು ಚಾಹರ್ ಅವರ ಹೊರಗಿಡುವಿಕೆಯು MIಗೆ ಅಶ್ವನಿ ಕುಮಾರ್ ಮತ್ತು ಕ್ರಿಶ್ ಭಗತ್ ಅವರನ್ನು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸೇರಿಸಲು ದಾರಿ ಮಾಡಿಕೊಟ್ಟಿತು.

ಅಶ್ವನಿ ಅವರು ಅಹಮದಾಬಾದ್‌ನಲ್ಲಿ ಕೇವಲ 24 ರನ್‌ಗಳನ್ನು ಬಿಟ್ಟುಕೊಟ್ಟು 4 ವಿಕೆಟ್‌ಗಳನ್ನು ಪಡೆದು ಪಂದ್ಯದಲ್ಲಿ MI ಪರ ಅಗ್ರ ವಿಕೆಟ್‌ ಟೇಕರ್ ಆಗಿ ಹೊರಹೊಮ್ಮಿದರು. ಇತ್ತ ಭಗತ್ 2 ಓವರ್‌ಗಳಲ್ಲಿ 10 ರನ್‌ಗಳನ್ನು ಮಾತ್ರ ನೀಡಿದರು. ಮುಂಬೈ ಮತ್ತೆ ಗೆಲುವಿನ ಹಳಿಗೆ ಮರಳಿರುವುದನ್ನು ಕಂಡ ಭಾರತದ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್, ಶಾರ್ದೂಲ್ ಮತ್ತು ಚಾಹರ್ ಅವರನ್ನು 'ಮತ್ತೆ ಹೊರಬರಬೇಡಿ' ಎಂದು ಒತ್ತಾಯಿಸಿದ್ದಾರೆ.

ಕ್ರಿಕೆಟ್ ವಿಷಯಗಳ ಬಗ್ಗೆ ಯಾವಾಗಲೂ ನೇರ ಅಭಿಪ್ರಾಯಗಳಿಗೆ ಹೆಸರುವಾಸಿಯಾದ ಶ್ರೀಕಾಂತ್, ಶಾರ್ದೂಲ್ ಮತ್ತು ಚಾಹರ್ ಅವರಿಗೆ ಹಣ ನೀಡಿ ಮನೆಗೆ ಕಳುಹಿಸುವಂತೆ ಎಂಐ ಮ್ಯಾನೇಜ್‌ಮೆಂಟ್‌ಗೆ ಈ ಹಿಂದೆ ಹೇಳಿದ್ದರು. MI ಈ ಜೋಡಿಯನ್ನು ಬೆಂಚ್‌ನಲ್ಲಿ ಕೂರಿಸಿದ ಬಳಿಕ, ಮುಂಬೈ ಇಂಡಿಯನ್ಸ್ ತಂಡವು ಭರ್ಜರಿ ಗೆಲುವು ಸಾಧಿಸಿದೆ. 1983ರ ವಿಶ್ವಕಪ್-ವಿಜೇತ ಈ ಕ್ರಮಕ್ಕೆ ಸಂತೋಷಪಟ್ಟಿದ್ದಾರೆ.

'ಧನ್ಯವಾದಗಳು ದೇವರೆ, ಅವರು ಶಾರ್ದೂಲ್ ಠಾಕೂರ್ ಮತ್ತು ದೀಪಕ್ ಚಾಹರ್ ಇಬ್ಬರನ್ನೂ ಶೆಡ್‌ಗೆ ಕಳುಹಿಸಿದ್ದಾರೆ. ಈ ಸಮಯದಲ್ಲಿ, 'ನೀವಿಬ್ಬರೂ ಶೆಡ್‌ನಲ್ಲಿ ನಿಮ್ಮ ಆಸನಗಳನ್ನು ಅಲಂಕರಿಸಿ ಮತ್ತು ಮತ್ತೆ ಹೊರಗೆ ಬರಬೇಡಿ' ಎಂದು ಮುಂಬೈ ಇಂಡಿಯನ್ಸ್ ಅವರಿಗೆ ಹೇಳಿದೆ ಎಂದು ನನಗೆ ಖಾತ್ರಿಯಿದೆ' ಎಂದು ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿನ ವಿಡಿಯೋದಲ್ಲಿ ತಿಳಿಸಿದ್ದಾರೆ.

Hardik Pandya after Mumbai Indians' win
IPL 2026: GT ವಿರುದ್ಧ MI ಭರ್ಜರಿ ಜಯ, ತವರಿನಲ್ಲೇ ರನ್ ಗಳಿಸಲು ತಿಣುಕಾಡಿದ Shubman Gill ಪಡೆ!

ಪವರ್‌ಪ್ಲೇನಲ್ಲಿ ಜಸ್ಪ್ರೀತ್ ಬುಮ್ರಾ ಅವರನ್ನು ಬಳಸುವುದನ್ನು ಒಳಗೊಂಡಂತೆ ಆಟವನ್ನು ಅನುಸರಿಸುವ ರೀತಿಯಲ್ಲಿ MI ಸಾಕಷ್ಟು ಬದಲಾವಣೆಗಳನ್ನು ಮಾಡಿದೆ. ಪಂದ್ಯದ ಇನಿಂಗ್ಸ್‌ನ ಮೊದಲ ಎಸೆತದಲ್ಲಿಯೇ ಜಸ್ಪ್ರೀತ್ ಬುಮ್ರಾ ಅವರು ಜಿಟಿಯ ಸಾಯಿ ಸುದರ್ಶನ್ ಅವರ ವಿಕೆಟ್‌ ಕಬಳಿಸುವ ಮೂಲಕ ಈ ಆವೃತ್ತಿಯಲ್ಲಿ ಚೊಚ್ಚಲ ವಿಕೆಟ್ ಪಡೆದು ಸಂಭ್ರಮಿಸಿದರು.

ಮುಂಬೈ ಇಂಡಿಯನ್ಸ್ ಬೌಲರ್‌ಗಳು ಆಟದಲ್ಲಿ ತೋರಿದ ಶಿಸ್ತನ್ನು ಕಂಡು ಶ್ರೀಕಾಂತ್ ಖುಷಿಪಟ್ಟರು.

'ಅವರು ಬೌಲಿಂಗ್ ಮಾಡಿದ ಲೆಂತ್‌ಗಳನ್ನು ನೋಡಿ, ಸಂಪೂರ್ಣ ಟೆಸ್ಟ್ ಪಂದ್ಯದ ಮಟ್ಟದ ಶಿಸ್ತು ಆದಾಗಿತ್ತು' ಎಂದು ಅವರು ಹೇಳಿದರು.

ಈ ಅಮೋಘ ಗೆಲುವಿನ ಮೂಲಕ ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಜಿಗಿದಿದೆ. ನೆಟ್ ರನ್ ರೇಟ್ ಕೂಡ ಸುಧಾರಿಸಿದೆ. ಸದ್ಯ MI ಆರು ಪಂದ್ಯಗಳನ್ನು ಆಡಿದ್ದು, ಎರಡರಲ್ಲಿ ಗೆಲುವು ಸಾಧಿಸಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡವು ಪ್ಲೇಆಫ್‌ನಲ್ಲಿ ಸ್ಥಾನ ಪಡೆಯಬೇಕಾದರೆ, ಇನ್ನೂ ಸಾಕಷ್ಟು ದೂರ ಸಾಗಬೇಕಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com