IPL 2026: Marcus Stoinis ಸ್ಫೋಟಕ ಬ್ಯಾಟಿಂಗ್; RR ಗೆ ಗೆಲ್ಲಲು 223 ರನ್ ಬೃಹತ್ ಗುರಿ ನೀಡಿದ PBKS!

ರಾಜಸ್ತಾನ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬಾ ಕಿಂಗ್ಸ್ ತಂಡ ನಿಗಧಿತ 20 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 222ರನ್ ಕಲೆಹಾಕಿತು.
Marcus Stoinis Takes PBKS To 222 against RR
ರಾಜಸ್ತಾನ ವಿರುದ್ಧ ಪಂಜಾಬ್ ಕಿಂಗ್ಸ್ ಭರ್ಜರಿ ಬ್ಯಾಟಿಂಗ್
Updated on

ಚಂಡೀಗಢ: ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಮತ್ತೊಂದು ಬೃಹತ್ ಮೊತ್ತ ದಾಖಲಾಗಿದ್ದು, ರಾಜಸ್ತಾನ ರಾಯಲ್ಸ್ ತಂಡದ ವಿರುದ್ಧ ಪಂಜಾಬ್ ಕಿಂಗ್ಸ್ ತಂಡ 222 ರನ್ ಗಳ ಬೃಹತ್ ಮೊತ್ತ ಪೇರಿಸಿದೆ.

ಚಂಡೀಗಢದ ಮುಲ್ಲನ್ ಪುರ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ರಾಜಸ್ತಾನ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬಾ ಕಿಂಗ್ಸ್ ತಂಡ ನಿಗಧಿತ 20 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 222ರನ್ ಕಲೆಹಾಕಿತು. ಆ ಮೂಲಕ ರಾಜಸ್ತಾನ ರಾಯಲ್ಸ್ ತಂಡಕ್ಕೆ ಗೆಲ್ಲಲು 223 ರನ್ ಗಳ ಬೃಹತ್ ಗುರಿ ನೀಡಿತು.

ಪಂಜಾಬ್ ಪರ ಆರಂಭಿಕ ಆಟಗಾರ ಪ್ರಭ್ ಸಿಮ್ರನ್ ಸಿಂಗ್ 59 ರನ್ ಕಲೆಹಾಕಿದರೆ, ಪ್ರಿಯಾಂಶ್ ಆರ್ಯ 29 ರನ್ ಗಳಿಸಿ ಔಟಾದರು.

Marcus Stoinis Takes PBKS To 222 against RR
IPL ನಲ್ಲಿ ದಾಖಲೆ ನಿರ್ಮಿಸಿದ ಕೊಹ್ಲಿ: ಈ ಹೆಗ್ಗಳಿಕೆಗೆ ಪಾತ್ರರಾದ ಏಕೈಕ ಕ್ರಿಕೆಟಿಗ!

ಬಳಿಕ ಬಂದ ಕೂಪರ್ ಕನೋಲಿ ಮತ್ತು ನಾಯಕ ಶ್ರೇಯಸ್ ಅಯ್ಯರ್ ತಲಾ 30 ರನ್ ಗಳಿಸಿ ಔಟಾದರು. ಈ ವೇಳೆ ಕ್ರೀಸ್ ಗೆ ಬಂದ ಮಾರ್ಕಸ್ ಸ್ಟಾಯ್ನಿಸ್ ಅಜೇಯ 62ರನ್ ಪೇರಿಸಿ ತಂಡದ ಮೊತ್ತ 220ರ ಗಟಿ ದಾಟುವಂತೆ ನೋಡಿಕೊಂಡರು.

ರಾಜಸ್ತಾನ ಪರ ಯಶ್ ರಾಜ್ ಪುಂಜಾ 2 ವಿಕೆಟ್ ಪಡೆದರೆ, ಜೋಫ್ರಾ ಆರ್ಚರ್ ಮತ್ತು ಬರ್ಗರ್ ತಲಾ 1 ವಿಕೆಟ್ ಪಡೆದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com