'ಅದು ನನ್ನನ್ನು ಪ್ರಚೋದಿಸಿತು': ಟಿ20 ಕ್ರಿಕೆಟ್‌ನಲ್ಲಿ ಸ್ಥಿರತೆ ಕಾಯ್ದುಕೊಂಡ ಬಗ್ಗೆ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್

ಬೌನ್ಸರ್‌ಗಳ ವಿರುದ್ಧ ಆಡುವುದಿಲ್ಲ ಎನ್ನುವ ಅಪವಾದಕ್ಕೆ ಗುರಿಯಾಗಿದ್ದ ಅಯ್ಯರ್, ವಿಶ್ವದ ಅತ್ಯುತ್ತಮ ವೇಗಿ, ಮುಂಬೈ ಇಂಡಿಯನ್ಸ್‌ನ ಜಸ್ಪ್ರೀತ್ ಬುಮ್ರಾ ವಿರುದ್ಧ ಅದ್ಭುತ ಸಿಕ್ಸರ್ ಬಾರಿಸಿದರು.
Shreyas Iyer
ಶ್ರೇಯಸ್ ಅಯ್ಯರ್
Updated on

ಭಾರತ ಪರ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ಸ್ಥಿರ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂದು ಈಗಾಗಲೇ ಪರಿಗಣಿಸಲ್ಪಟ್ಟಿರುವ ಶ್ರೇಯಸ್ ಅಯ್ಯರ್, ಟಿ20ಐಗಳಲ್ಲಿಯೂ ತಮ್ಮ ಸ್ಥಿರತೆಯನ್ನು ಸಾಬೀತುಪಡಿಸಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಪಂಜಾಬ್ ಕಿಂಗ್ಸ್ ಪರ ಅತ್ಯಂತ ವಿಶ್ವಾಸಾರ್ಹ ಬ್ಯಾಟರ್ ಆಗಿ ಮಾರ್ಪಟ್ಟಿದ್ದಾರೆ. ಈ ಆವೃತ್ತಿಯಲ್ಲಿ ತಮ್ಮ ತಂಡವನ್ನು ಅನೇಕ ವಿಜಯಗಳಿಗೆ ಮುನ್ನಡೆಸಿದ ಫಿನಿಷರ್ ಮತ್ತು ನಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ. ಆದಾಗ್ಯೂ, ಈ ರೂಪಾಂತರದ ಹಿಂದೆ ಅಯ್ಯರ್ ಅವರನ್ನು ಕೆರಳಿಸಿದ ಮಾತುಗಳಿವೆ. ಇದುವೇ ಅವರು 'ಜನರ ಆ ಹೇಳಿಕೆಗಳು' ತಪ್ಪು ಎಂದು ಸಾಬೀತುಪಡಿಸಲು ಕಾರಣವಾಯಿತು.

ಬೌನ್ಸರ್‌ಗಳ ವಿರುದ್ಧ ಆಡುವುದಿಲ್ಲ ಎನ್ನುವ ಅಪವಾದಕ್ಕೆ ಗುರಿಯಾಗಿದ್ದ ಅಯ್ಯರ್, ವಿಶ್ವದ ಅತ್ಯುತ್ತಮ ವೇಗಿ, ಮುಂಬೈ ಇಂಡಿಯನ್ಸ್‌ನ ಜಸ್ಪ್ರೀತ್ ಬುಮ್ರಾ ವಿರುದ್ಧ ಅದ್ಭುತ ಸಿಕ್ಸರ್ ಬಾರಿಸಿದರು. ಈ ಮೂಲಕ ಅವರ ನ್ಯೂನತೆಗಳ ಬಗ್ಗೆ ಮಾತನಾಡಿದವರ ಬಾಯಿಮುಚ್ಚಿಸಿದರು. ಜಿಯೋಸ್ಟಾರ್‌ನ 'ಬಿಲೀವ್' ಕಾರ್ಯಕ್ರಮದಲ್ಲಿ ಮಾತನಾಡಿದ ಪಂಜಾಬ್ ಕಿಂಗ್ಸ್ ನಾಯಕ, ಟೀಕಾಕಾರರ ಬಾಯಿ ಮುಚ್ಚಿಸಲು ತಾನು ಹೇಗೆ ಶ್ರಮಿಸಿದೆ ಎಂಬುದನ್ನು ವಿವರಿಸಿದ್ದಾರೆ.

'ಈ ಪರಿಸ್ಥಿತಿಯಲ್ಲಿ ನೀವು ಅದನ್ನು ಮಾಡಲು ಸಾಧ್ಯವಿಲ್ಲ, ಅದು ಅಸಾಧ್ಯ ಎಂದು ಹೇಳುವ ಜನರು ನನ್ನ ಸುತ್ತಲೂ ಇದ್ದಾರೆ. ಆದರೆ, ಅದನ್ನು ಕೇಳಿಸಿಕೊಳ್ಳಲು ನನಗೆ ಇಷ್ಟವಿರಲಿಲ್ಲ. ಉನ್ನತ ಮಟ್ಟದಲ್ಲಿ ಆಡುವ ಕ್ರಿಕೆಟಿಗನಾಗಿ, ನಾನು ಅದನ್ನು ಸ್ವೀಕರಿಸಲು ಸಾಧ್ಯವಿರಲಿಲ್ಲ. ನಂತರ ನಾನು ಅವರ ಮಾತುಗಳು ತಪ್ಪು ಎಂದು ಸಾಬೀತುಪಡಿಸಬೇಕು ಎಂದು ನಿರ್ಧರಿಸಿದೆ. 'ನಾನು ಈಗ ಈ ಪರಿಸ್ಥಿತಿಯಲ್ಲಿದ್ದೇನೆ, ನಾನು ಹೇಗೆ ಬಲವಾಗಿ ಹಿಂತಿರುಗಬಹುದು?' ನಾನು ನನ್ನನ್ನು ಇನ್ನಷ್ಟು ಕಠಿಣ ಅಭ್ಯಾಸಕ್ಕೆ ತಳ್ಳಿಕೊಂಡೆ ಮತ್ತು ಮತ್ತು ಸಾಧ್ಯವಾದಷ್ಟು ಬೇಗ ಅವರು ತಪ್ಪು ಎಂಬುದನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತೇನೆ' ಎಂಬ ಆ ಆಲೋಚನೆ ನನ್ನನ್ನು ಓಡಿಸುತ್ತಲೇ ಇರುತ್ತದೆ, ವಿಶೇಷವಾಗಿ ಗಾಯಗಳ ನಂತರ' ಎಂದು ಹೇಳಿದರು.

Shreyas Iyer
ಶ್ರೇಯಸ್ ಅಯ್ಯರ್ ಪರ 'ಪ್ರತಿಭಟನೆ ಮತ್ತು ಹೋರಾಟ' ಮಾಡುತ್ತೇನೆ ಎಂದ ಭಾರತದ ಮಾಜಿ ಆಟಗಾರ ಮನೋಜ್ ತಿವಾರಿ!

'ನನ್ನ ಬೆನ್ನಿಗೆ ಗಾಯವಾದಾಗ, ಕೆಲವರು ನಾನು ಮತ್ತೆಂದೂ ಮೊದಲಿನಂತೆ ಇರುವುದಿಲ್ಲ ಎಂದು ಹೇಳಿದರು. ಆದರೆ, ನಾನು ಮೊದಲಿನ ಹಾಗೆ ಆಗಲು ಏಕೆ ಸಾಧ್ಯವಿಲ್ಲ? ಎಂದು ನಾನು ನನ್ನನ್ನು ಕೇಳಿಕೊಂಡೆ. ಗಾಯದ ನಂತರ ನೀವು ನಿಮ್ಮ ಮನಸ್ಥಿತಿಯನ್ನು ಹೇಗೆ ರೂಪಿಸಿಕೊಳ್ಳುತ್ತೀರಿ ಎಂಬುದು ಮುಖ್ಯವಾಗುತ್ತದೆ. ನೀವು ಯಾವುದರ ಮೇಲೆ ಗಮನಹರಿಸಬೇಕು ಮತ್ತು ಯಾವುದನ್ನು ನಿರ್ಲಕ್ಷಿಸಬೇಕು ಎಂಬುದನ್ನು ಆರಿಸಿಕೊಳ್ಳಬೇಕು' ಎಂದು ಅಯ್ಯರ್ ವಿವರಿಸಿದರು.

'ಶಾರ್ಟ್ ಬಾಲ್‌ಗೆ ಆಡುವುದಿಲ್ಲ' ಎಂಬ ಮಾತು ಅಯ್ಯರ್ ಅವರ ಕಿವಿಯಲ್ಲಿ ಬಹಳ ಸಮಯದಿಂದ ರಿಂಗಣಿಸುತ್ತಲೇ ಇತ್ತು. ಆ ಅಣಕಗಳೇ ನನ್ನನ್ನು 'ಪ್ರಚೋದಿಸಿದವು' ಮತ್ತು ಈ ಕೊರತೆಯನ್ನು ನೀಗಿಸಲು ಕಠಿಣ ಪರಿಶ್ರಮ ಪಡಲು ತಾನು ನಿರ್ಧರಿಸಿದೆ ಎಂದರು.

'ನನ್ನ ಶಾರ್ಟ್-ಬಾಲ್ ಸಮಸ್ಯೆಯನ್ನು ನಾನು ಎಂದಿಗೂ ಸರಿಪಡಿಸುವುದಿಲ್ಲ ಎಂದು ಜನರು ಹೇಳಿದರು. ಅದು ನನ್ನನ್ನು ಪ್ರಚೋದಿಸಿತು. ಉತ್ತಮ ಪ್ರದರ್ಶನ ನೀಡುವ ಮೂಲಕ ಅವರು ತಪ್ಪು ಎಂದು ಸಾಬೀತುಪಡಿಸಲು ನಾನು ಬಯಸಿದ್ದೆ, ಆದ್ದರಿಂದ ನಾನು ಅದರ ಮೇಲೆ ಶ್ರಮಿಸಿದೆ. ಮೊದಲು, ನಾನು ಸಿಂಗಲ್ ತೆಗೆದುಕೊಳ್ಳುತ್ತಿದ್ದೆ ಅಥವಾ ಚೆಂಡನ್ನು ಕೆಳಗೆ ಇಡಲು ಪ್ರಯತ್ನಿಸುತ್ತಿದ್ದೆ, ಆದರೆ ಈಗ ನನ್ನ ಮನಸ್ಥಿತಿ ಬದಲಾಗಿದೆ. ನನ್ನ ವಲಯದಲ್ಲಿ ನಾನು ಶಾರ್ಟ್ ಬಾಲ್ ಅನ್ನು ನೋಡಿದರೆ, ನಾನು ಅದನ್ನು ಸಿಕ್ಸರ್‌ ಹೊಡೆಯುತ್ತೇನೆ. ನಾನು ಪ್ರವೀಣ್ ಆಮ್ರೆ ಅವರೊಂದಿಗೆ ಕೆಲಸ ಮಾಡುತ್ತೇನೆ; ನಾನು ಚಿಕ್ಕವನಿದ್ದಾಗಿನಿಂದ ಅವರೊಂದಿಗೆ ಇದ್ದೇನೆ. ನಾನು ಅಭಿಷೇಕ್ ನಾಯರ್ ಅವರಂತಹ ತರಬೇತುದಾರರೊಂದಿಗೆ ಮಾತನಾಡುತ್ತೇನೆ. ನಾವು ಆಲೋಚನೆಗಳನ್ನು ಹಂಚಿಕೊಳ್ಳುತ್ತೇವೆ' ಎಂದು ತಿಳಿಸಿದರು.

Shreyas Iyer
ಏಕಕಾಲದಲ್ಲಿ ಎರಡು T20 ತಂಡ ರಚನೆಗೆ BCCI ಮುಂದು; ಒಂದಕ್ಕೆ ಶ್ರೇಯಸ್ ಅಯ್ಯರ್ ನಾಯಕ!

'ನನ್ನ ಬ್ಯಾಟಿಂಗ್ ಅಭ್ಯಾಸದ ಸಮಯದಲ್ಲಿ, ನಾನು ಈಗ ಸುಮಾರು 50 ಓವರ್‌ಗಳನ್ನು ಆಡಲು ಪ್ರಯತ್ನಿಸುತ್ತೇನೆ ಮತ್ತು 300ಕ್ಕೂ ಹೆಚ್ಚು ಎಸೆತಗಳನ್ನು ಎದುರಿಸುತ್ತೇನೆ. ಅದು ನನಗೆ ಏನು ಕೆಲಸ ಮಾಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ನಾನು ಸ್ಥಿರ ಮಾದರಿಯನ್ನು ಅನುಸರಿಸುವುದಿಲ್ಲ. ನಾನು ಮಿಡಲ್‌ಗೆ ಹೆಚ್ಚಿನ ಸಮಯವನ್ನು ನೀಡುತ್ತೇನೆ ಮತ್ತು ಸೈಡ್ ಆರ್ಮ್ ಥ್ರೋಗಳನ್ನು ಮಾತ್ರವಲ್ಲ, ನಿಜವಾದ ಬೌಲರ್‌ಗಳನ್ನು ಎದುರಿಸುತ್ತೇನೆ. ನಾನು ಬೌಲರ್‌ಗಳನ್ನು ಹೆಚ್ಚು ಎದುರಿಸುತ್ತೇನೆ, ನನ್ನ ಚಲನೆ ಸ್ಪಷ್ಟವಾಗುತ್ತದೆ. ನಾನು ರಿದಮ್ ರಚಿಸುವತ್ತ ಗಮನಹರಿಸುತ್ತೇನೆ. ಬೌಲರ್ ಎಸೆಯುವ ಮೊದಲು, ನಾನು ಬೇಗನೆ ನನ್ನ ಸ್ಥಾನಕ್ಕೆ ಬರಲು ಪ್ರಯತ್ನಿಸುತ್ತೇನೆ. ಅದು ಹರಿವನ್ನು ಸೃಷ್ಟಿಸುತ್ತದೆ. ಎಬಿ ಡಿವಿಲಿಯರ್ಸ್ ಹಾಗೆ ಮಾಡುವುದನ್ನು ನೀವು ನೋಡಿರಬೇಕು. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೂಡ ತಮ್ಮ ಹೊಡೆತಗಳನ್ನು ಆಡುವ ಮೊದಲು ಆ ರಿದಮ್ ಹೊಂದಿದ್ದಾರೆ. ನಾನು ಅದೇ ರೀತಿ ಮಾಡಲು ಪ್ರಯತ್ನಿಸುತ್ತೇನೆ' ಎಂದು ಅಯ್ಯರ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com