IPL 2026: RCB ಬ್ಯಾಟಿಂಗ್ ವೈಫಲ್ಯ, 4 ವಿಕೆಟ್ ಗಳಿಂದ ಗೆದ್ದ ಗುಜರಾತ್ ಟೈಟನ್ಸ್!

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ಆರಂಭಿಕ ಆಟಗಾರರಾದ ಜಾಕೊಬ್ ಬೆಥೆಲ್ ಕೇವಲ 5 ರನ್ ಗಳಿಸಿದಾಗ ಮೊಹಮ್ಮದ್ ಸಿರಾಜ್ ಬೌಲಿಗ್ ನಲ್ಲಿ ರಶೀದ್ ಖಾನ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
Virat Kohli and GT Players
ವಿರಾಟ್ ಕೊಹ್ಲಿ ವಿಕೆಟ್ ಬಿದ್ದ ಸಂಭ್ರಮದಲ್ಲಿ ಗುಜರಾತ್ ಆಟಗಾರರು
Updated on

ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಐಪಿಎಲ್ ಟೂರ್ನಿಯ 42ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 4 ವಿಕೆಟ್ ಗಳಿಂದ ಗುಜರಾತ್ ಟೈಟನ್ಸ್ ಸೋಲಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ಆರಂಭಿಕ ಆಟಗಾರರಾದ ಜಾಕೊಬ್ ಬೆಥೆಲ್ ಕೇವಲ 5 ರನ್ ಗಳಿಸಿದಾಗ ಮೊಹಮ್ಮದ್ ಸಿರಾಜ್ ಬೌಲಿಗ್ ನಲ್ಲಿ ರಶೀದ್ ಖಾನ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ಬಳಿಕ ವಿರಾಟ್ ಕೊಹ್ಲಿ ಕೂಡಾ 28 ರನ್ ಗಳಿಸಿದಾಗ ರಶೀದ್ ಖಾನ್ ಗೆ ಕ್ಯಾಚ್ ನೀಡಿ ಫೆವಿಲಿಯನ್ ಗೆ ತೆರಳಿದರು. ದೇವದತ್ತ ಪಡಿಕ್ಕಲ್ 24 ಎಸತೆಗಳಲ್ಲಿ 40 ರನ್ ಗಳಿಸುವ ಮೂಲಕ ಗಮನ ಸೆಳೆದರಾದರೂ ರಶೀದ್ ಖಾನ್ ಬೌಲಿಂಗ್ ನಲ್ಲಿ ಔಟ್ ಆದರು.

ನಾಯಕ ರಜತ್ ಪಾಟಿದಾರ್ 19 ರನ್ ಗಳಿಸಿದಾಗ ಹೊಲ್ಡರ್ ಗೆ ಕ್ಯಾಚ್ ನೀಡಿದರೆ, ಜಿತೇಶ್ ಶರ್ಮಾ ಕೇವಲ 1 ರನ್ ಗಳಿಗೆ ಔಟ್ ಆದರು. ಟೀಮ್ ಡೇವಿಡ್ ಕೂಡಾ ಕೇವಲ 9 ರನ್ ಗಳಿಗೆ ರಶೀದ್ ಬೌಲಿಂಗ್ ನಲ್ಲಿ ಔಟ್ ಆದರೆ, ಕೃಣಾಲ್ ಪಾಂಡ್ಯ ಅರ್ಷದ್ ಖಾನ್ ಬೌಲಿಂಗ್ ನಲ್ಲಿ ಹೋಲ್ಡರ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ನಂತರ ರೊಮರಿಯೊ ಕೂಡಾ ನಿಂತು ಆಡಲಿಲ್ಲ. 17ರನ್ ಗಳಿಗೆ ಔಟ್ ಆದರೆ, ವೆಂಕಟೇಶ್ ಅಯ್ಯರ್ 12, ರನ್ ಗಳಿಸಾದಗ ಅರ್ಷದ್ ಖಾನ್ ಬೌಲಿಂಗ್ ನಲ್ಲಿ ಸಾಯಿ ಸುದರ್ಶನ್ ಗೆ ಕ್ಯಾಚ್ ನೀಡಿ ಔಟ್ ಆದರು. ಭುವನೇಶ್ವರ್ ಕುಮಾರ್ 15 ರನ್ ಗಳಿಸಿದರೆ ಹೇಜಲ್ ವುಡ್ ಶೂನ್ಯಕ್ಕೆ ರನೌಟ್ ಆದರು. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 19.2 ಓವರ್ ಗಳಲ್ಲಿ ಮೊದಲ ಸಲ ಆಲೌಟ್ ಆಗುವ ಮೂಲಕ ಕೇವಲ 155 ರನ್ ಗಳಿಸಲಷ್ಟೇ ಶಕ್ತವಾಯಿತು.

ಗುಜರಾತ್ ಟೈಟನ್ಸ್ ಪರ ಮೊಹಮ್ಮದ್ ಸಿರಾಜ್, ರಬಾಡ ತಲಾ 1 ವಿಕೆಟ್ ಪಡೆದರೆ, ಅರ್ಷದ್ ಖಾನ್ 3, ರಶೀದ್ ಖಾನ್ ಹಾಗೂ ಹೋಲ್ಡರ್ ತಲಾ 2 ವಿಕೆಟ್ ಪಡೆದರು. ಆರ್ ಸಿಬಿ ನೀಡಿದ 156 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಗುಜರಾತ್ ಟೈಟನ್ಸ್ ತಂಡ ಇನ್ನೂ 25 ಎಸೆತಗಳು ಇರುವಂತೆಯೇ 4 ವಿಕೆಟ್ ಗಳಿಂದ ಗೆಲುವಿನ ನಗೆ ಬೀರಿತು.

Virat Kohli and GT Players
IPL 2026: ಡ್ರೆಸಿಂಗ್ ರೂಮ್‌ನಲ್ಲಿ ನಿಷೇಧಿತ ಇ-ಸಿಗರೇಟ್ ಸೇದಿದ ರಿಯಾನ್ ಪರಾಗ್​​ಗೆ ದಂಡ ಫಿಕ್ಸ್!

ನಾಯಕ ಶುಭ್ ಮನ್ ಗಿಲ್ 43, ಜೋಸ್ ಬಟ್ಲರ್ 39, ವಾಷಿಂಗ್ಟನ್ ಸುಂದರ್ 12, ಎಂ ಶಾರುಖ್ ಖಾನ್ 8, ರಾಹುಲ್ ತೇವಾಟಿಯಾ 27, ಜಾಸನ್ ಹೋಲ್ಡರ್ 12, ರಶೀದ್ ಖಾನ್ 7 ರನ್ ಗಳಿಸುವುದರೊಂದಿಗೆ 15. 5 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 158 ರನ್ ಗಳಿಸುವುದರೊಂದಿಗೆ ಗುಜರಾತ್ ಭರ್ಜರಿ ಗೆಲುವು ದಾಖಲಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com