ಗರ್ಲ್‌ಫ್ರೆಂಡ್ ಜೊತೆ ತಿರುಮಲಕ್ಕೆ ಹಾರ್ದಿಕ್ ಪಾಂಡ್ಯ ಭೇಟಿ; ವೆಂಕಟೇಶ್ವರ ಸ್ವಾಮಿಗೆ ಮುಡಿ ಅರ್ಪಿಸಿದ ಸ್ಟಾರ್ ಕ್ರಿಕೆಟಿಗ!

ಪಾಂಡ್ಯ ಅವರ ಹೊಸ ರೂಪವು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸಿದೆ; ಸಾಮಾನ್ಯವಾಗಿ ಭಕ್ತರು ಶ್ರದ್ಧೆ ಮತ್ತು ಕೃತಜ್ಞತೆಯ ಸಂಕೇತವಾಗಿ ದೇವಸ್ಥಾನದಲ್ಲಿ ತಮ್ಮ ಕೂದಲನ್ನು ಅರ್ಪಿಸುವುದು ವಾಡಿಕೆ.
Hardik Pandya with Mahieka Sharma
ಮಹಿಕಾ ಶರ್ಮಾ ಜೊತೆ ಹಾರ್ದಿಕ್ ಪಾಂಡ್ಯ
Updated on

ತಿರುಮಲ: ಟೀಂ ಇಂಡಿಯಾದ ಸ್ಟಾರ್ ಆಲ್-ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಭಾನುವಾರ ತಿರುಮಲದ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಭಗವಾನ್ ವೆಂಕಟೇಶ್ವರನ ಆಶೀರ್ವಾದ ಪಡೆದ ಅವರು, ಮುಡಿ ಅರ್ಪಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಅವರೊಂದಿಗೆ ಅವರ ಗರ್ಲ್‌ಫ್ರೆಂಡ್ ಮಹಿಕಾ ಶರ್ಮಾ ಕೂಡ ಇದ್ದರು.

ತಮ್ಮ ಭೇಟಿಯ ಸಂದರ್ಭದಲ್ಲಿ ಪಾಂಡ್ಯ ಮತ್ತು ಮಹಿಕಾ ಸಾಂಪ್ರದಾಯಿಕ ಬಿಳಿ ಉಡುಪನ್ನು ಧರಿಸಿದ್ದರು. ದೇವಾಲಯದಲ್ಲಿ ಅವರಿಬ್ಬರೂ ಇರುವ ಫೋಟೊಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡವು.

ಪಾಂಡ್ಯ ಅವರ ಹೊಸ ರೂಪವು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸಿದೆ; ಸಾಮಾನ್ಯವಾಗಿ ಭಕ್ತರು ಶ್ರದ್ಧೆ ಮತ್ತು ಕೃತಜ್ಞತೆಯ ಸಂಕೇತವಾಗಿ ದೇವಸ್ಥಾನದಲ್ಲಿ ತಮ್ಮ ಕೂದಲನ್ನು ಅರ್ಪಿಸುವುದು ವಾಡಿಕೆ. ಈ ಅನುಭವಿ ಆಲ್‌ರೌಂಡರ್ ತಾವು ಏಕೆ ಮುಡಿ ಅರ್ಪಿಸಿದ್ದಾರೆ ಎಂಬುದನ್ನು ಬಹಿರಂಗಪಡಿಸದಿದ್ದರೂ, ಅವರ ದೇವಸ್ಥಾನದ ಭೇಟಿಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Hardik Pandya with Mahieka Sharma
ಹಾರ್ದಿಕ್ ಪಾಂಡ್ಯ ಟ್ರೇಡಿಂಗ್‌ಗೆ ಹೊಸ ತಿರುವು: CSK ಜೊತೆಗಿನ ಮಾತುಕತೆ ನಿರಾಕರಿಸಿದ ಮುಂಬೈ ಇಂಡಿಯನ್ಸ್!

ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳುವ ಪ್ರಕ್ರಿಯೆಯಲ್ಲಿರುವ ಪಾಂಡ್ಯ ಅವರ ವೃತ್ತಿಜೀವನದ ಒಂದು ಪ್ರಮುಖ ಹಂತದಲ್ಲಿ ಅವರು ದೇವಾಲಯಕ್ಕೆ ಭೇಟಿ ನೀಡುವುದಲ್ಲದೆ ತಮ್ಮ ಮುಡಿಯನ್ನು ಅರ್ಪಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಗಾಯದಿಂದಾಗಿ ಈ ಆಲ್‌ರೌಂಡರ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿಯ ನಂತರ ಆಟದಿಂದ ದೂರ ಉಳಿದಿದ್ದಾರೆ.

ಅಫ್ಘಾನಿಸ್ತಾನ ವಿರುದ್ಧದ ಸೀಮಿತ ಓವರ್‌ಗಳ ಸರಣಿ, ಇಂಗ್ಲೆಂಡ್ ಪ್ರವಾಸದ ಏಕದಿನ ಮತ್ತು ಟಿ20 ಸರಣಿಗಳು ಹಾಗೂ ಜಿಂಬಾಬ್ವೆ ವಿರುದ್ಧದ ಸರಣಿಗಳಿಂದಲೂ ಪಾಂಡ್ಯ ಹೊರಗುಳಿದಿದ್ದರು. ಐಪಿಎಲ್ 2026ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ ನಂತರ ಅವರು ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯವನ್ನು ಆಡಿಲ್ಲ; ಆ ಆವೃತ್ತಿಯಲ್ಲಿ ಐದು ಬಾರಿ ಚಾಂಪಿಯನ್ ಆಗಿದ್ದ ಆ ತಂಡವು ಪ್ಲೇಆಫ್‌ಗೆ ತಲುಪುವಲ್ಲಿ ವಿಫಲವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com