ಟೆಸ್ಟ್ ಕ್ರಿಕೆಟ್​ನಲ್ಲಿ ಮಿಂಚಿದ ಕನ್ನಡಿಗ: ಶ್ರೀಲಂಕಾ ವಿರುದ್ಧ ಮತ್ತೆ ಅಬ್ಬರಿಸಿದ ದೇವದತ್ ಪಡಿಕ್ಕಲ್; ಮತ್ತೊಂದು ಶತಕ!

ಇಂದು ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ನಡೆದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಕನ್ನಡಿಗ ದೇವದತ್ ಪಡಿಕ್ಕಲ್ ಅವರು 117 ರನ್‌ಗಳ ಭರ್ಜರಿ ಶತಕ ಸಿಡಿಸಿ ಭಾರತವನ್ನು ಸುರಕ್ಷಿತ ಸ್ಥಿತಿಗೆ ತಲುಪಿಸಿದ್ದಾರೆ.
Devdutt Padikkal brings up another century, continues sublime form vs Sri Lanka
ದೇವದತ್ ಪಡಿಕ್ಕಲ್
Updated on

ಕೊಲಂಬೊ: ಕೊಲಂಬೊದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲೂ ಭಾರತ ತಂಡದ ಯುವ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ ಅಬ್ಬರಿಸಿದ್ದು, ಭಾನುವಾರ ಮತ್ತೊಂದು ಶತಕ ಬಾರಿಸಿದ್ದಾರೆ.

ಇಂದು ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ನಡೆದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಕನ್ನಡಿಗ ದೇವದತ್ ಪಡಿಕ್ಕಲ್ ಅವರು 117 ರನ್‌ಗಳ ಭರ್ಜರಿ ಶತಕ ಸಿಡಿಸಿ ಭಾರತವನ್ನು ಸುರಕ್ಷಿತ ಸ್ಥಿತಿಗೆ ತಲುಪಿಸಿದ್ದಾರೆ.

ದೇವದತ್ ಪಡಿಕ್ಕಲ್ ಅವರ ಶತಕದ ನೆರವಿನಿಂದ ಟೀಂ ಇಂಡಿಯಾ 250 ರನ್​ಗಳ ಗಡಿ ದಾಟಿದ್ದು, ದೊಡ್ಡ ಮೊತ್ತ ಪೇರಿಸುವತ್ತ ಹೆಜ್ಜೆ ಇಟ್ಟಿದೆ.

Devdutt Padikkal brings up another century, continues sublime form vs Sri Lanka
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರಿಂದಲೂ ಸಾಧ್ಯವಾಗದ ದೊಡ್ಡ ದಾಖಲೆ ನಿರ್ಮಿಸಿದ ನಾಯಕ ಶುಭಮನ್ ಗಿಲ್!

ಮೊದಲು ಬ್ಯಾಟಿಂಗ್‌ ಆರಂಭಿಸಿದ ಭಾರತ ಮೊದಲ ವಿಕೆಟ್​ಗೆ ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ 37 ರನ್​ಗಳ ಜೊತೆಯಾಟ ನೀಡಿದರು. 18 ರನ್​ ಬಾರಿಸಿ ರಾಹುಲ್ ಔಟಾದ ಬಳಿಕ ಬ್ಯಾಟಿಂಗ್​ಗೆ ಬಂದ ಪಡಿಕ್ಕಲ್, ಮೊದಲ ಟೆಸ್ಟ್​ನಲ್ಲಿ ಎಲ್ಲಿಗೆ ನಿಲ್ಲಿಸಿದ್ದರೋ ಅಲ್ಲಿಂದಲೇ ತಮ್ಮ ಆಟವನ್ನು ಮುಂದುವರೆಸಿದರು. ಇದರ ಫಲವಾಗಿ ಪಡಿಕ್ಕಲ್ ದಿನದಾಟದ ಎರಡನೇ ಸೆಷನ್​ನಲ್ಲಿ 90 ಎಸೆತಗಳಲ್ಲಿ ಅರ್ಧಶತಕದ ಗಡಿ ದಾಟಿದರು. ಇದರ ಜೊತೆಗೆ ಪಡಿಕ್ಕಲ್ ನಾಯಕ ಶುಭ್​ಮನ್ ಗಿಲ್ ಜೊತೆಗೆ ಮೂರನೇ ವಿಕೆಟ್​ಗೆ 120 ರನ್​ಗಳ ಜೊತೆಯಾಟವನ್ನು ನಿರ್ಮಿಸಿದರು.

193 ಎಸೆತಗಳನ್ನು ಎದುರಿಸಿದ ದೇವದತ್ ಪಡಿಕ್ಜಲ್ 12 ಬೌಂಡರಿಗಳ ಸಹಿತ 117 ರನ್​ಗಳಿಸಿ ಕೇಶರಾ ನುವಾಂತಹೆ ವಿಕೆಟ್ ಒಪ್ಪಿಸಿದರು.

ದೇವದತ್ ಪಡಿಕ್ಕಲ್ ಇದಕ್ಕೂ ಮುನ್ನ ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 167 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಈಗ ಎರಡನೇ ಟೆಸ್ಟ್‌ನಲ್ಲೂ ಶತಕ (117) ಬಾರಿಸುವ ಮೂಲಕ ಸರಣಿಯಲ್ಲಿ ಸತತ ಎರಡನೇ ಶತಕ ದಾಖಲಿಸಿದ್ದಾರೆ. ಇದರೊಂದಿಗೆ ಭಾರತದ ಪರ ಟೆಸ್ಟ್ ಕ್ರಿಕೆಟ್‌ನ 3ನೇ ಕ್ರಮಾಂಕದಲ್ಲಿ ಬ್ಯಾಕ್-ಟು-ಬ್ಯಾಕ್ ಶತಕ ಸಿಡಿಸಿದ ಕೇವಲ ಎರಡನೇ ಎಡಗೈ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಡಿಕ್ಕಲ್ ಪಾತ್ರರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com