WPL 2026: ಎಲಿಮಿನೇಟರ್‌ನಲ್ಲಿ ಗುಜರಾತ್ ಜೈಂಟ್ಸ್ ಸೋಲಿಸಿದ ಡೆಲ್ಲಿ ಕ್ಯಾಪಿಟಲ್ಸ್; ಫೈನಲ್‌ನಲ್ಲಿ RCB ಜೊತೆ ಮುಖಾಮುಖಿ

ಕಳೆದ ಮೂರು ಆವೃತ್ತಿಗಳಲ್ಲಿಯೂ ಫೈನಲ್ ಪ್ರವೇಶಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಎರಡು ಬಾರಿ ಮುಂಬೈ ವಿರುದ್ಧ ಮತ್ತು ಒಂದು ಆರ್‌ಸಿಬಿ ವಿರುದ್ಧ ಸೋಲು ಕಂಡಿದೆ.
Delhi Capitals
ಫೈನಲ್ ತಲುಪಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ
Updated on

WPL 2026ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಕ್ಕೆ ವಿಶೇಷವಾಗಿ ನಾಯಕಿ ಜೆಮಿಮಾ ರೊಡ್ರಿಗಸ್‌ಗೆ ಇದು ಸ್ಮರಣೀಯ ದಿನವಾಗಿತ್ತು. ಏಕೆಂದರೆ, ತಂಡವು ಮಂಗಳವಾರ ಸತತ ನಾಲ್ಕನೇ ಬಾರಿಗೆ ಫೈನಲ್ ಪ್ರವೇಶಿಸಿತು. ವಡೋದರಾದಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಡೆಲ್ಲಿ ತಂಡ ಗುಜರಾತ್ ಜೈಂಟ್ಸ್ (GG) ವಿರುದ್ಧ 7 ವಿಕೆಟ್‌ ಅಂತರದ ಭರ್ಜರಿ ಜಯ ಗಳಿಸಿತು. ಈ ಮೂಲಕ ಗುರುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ದೆಹಲಿ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಎದುರಿಸಲಿದೆ.

ಕಳೆದ ಮೂರು ಆವೃತ್ತಿಗಳಲ್ಲಿಯೂ ಫೈನಲ್ ಪ್ರವೇಶಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸೋತು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಎರಡು ಬಾರಿ ಮುಂಬೈ ವಿರುದ್ಧ ಮತ್ತು ಒಂದು ಆರ್‌ಸಿಬಿ ವಿರುದ್ಧ ಸೋಲು ಕಂಡಿದೆ. ನಾಲ್ಕನೇ ಬಾರಿಯೂ ಫೈನಲ್ ಪ್ರವೇಶಿಸಿದ್ದು, ಚೊಚ್ಚಲ ಟ್ರೋಫಿ ಗೆಲ್ಲುವ ತವಕದಲ್ಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹಲವು ಆಟಗಾರ್ತಿಯರು ಈ ಬಾರಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಲಾರಾ ವೋಲ್ವಾರ್ಡ್ಟ್ 250 ರನ್‌ ಗಳಿಸಿದ್ದಾರೆ. ಲಿಜೆಲ್ ಲೀ ಅವರ ಹೆಸರಿನಲ್ಲಿ 240 ರನ್‌ಗಳಿವೆ. ಅಸ್ಥಿರತೆಯ ಹೊರತಾಗಿಯೂ ಶಫಾಲಿ ವರ್ಮಾ ಈ ಆವೃತ್ತಿಯಲ್ಲಿ 206 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ನಂದನಿ ಶರ್ಮಾ 14 ವಿಕೆಟ್‌ಗಳೊಂದಿಗೆ ಮಿಂಚಿದ್ದಾರೆ. ಜೊತೆಗೆ ಶ್ರೀ ಚರಣಿ ಕೂಡ ಅಷ್ಟೇ ವಿಕೆಟ್‌ಗಳನ್ನು ಪಡೆದಿದ್ದಾರೆ. ಮಾರಿಜಾನ್ ಕಾಪ್ ಕೂಡ ಉತ್ತಮವಾಗಿ ಪ್ರದರ್ಶನ ನೀಡಿದ್ದಾರೆ.

Delhi Capitals
WPL 2026: ನೇರವಾಗಿ ಫೈನಲ್ ಪ್ರವೇಶಿಸಿದ ಸ್ಮೃತಿ ಮಂದಾನ ನಾಯಕತ್ವದ RCB ಪಡೆ!

DC vs GG, WPL 2026 ಎಲಿಮಿನೇಟರ್

ಗುಜರಾತ್ ಜೈಂಟ್ಸ್ ತಂಡವು ಬೆತ್ ಮೂನಿ ಅವರ 51 ಎಸೆತಗಳಲ್ಲಿ 62 ರನ್ ಗಳಿಕೆ ಮೂಲಕ 168 ರನ್‌ಗಳ ಗುರಿಯನ್ನು ನೀಡಿತ್ತು. ಡೆಲ್ಲಿ ಕ್ಯಾಪಿಟಲ್ಸ್ ಪರ ಚಿನೆಲ್ಲೆ ಹೆನ್ರಿ ಮೂರು ವಿಕೆಟ್‌ಗಳನ್ನು ಪಡೆದರೆ, ನಂದನಿ ಶರ್ಮಾ ಎರಡು ವಿಕೆಟ್‌ಗಳನ್ನು ಪಡೆದರು.

ಈ ಗುರಿಯನ್ನು ಬೆನ್ನಟ್ಟಿದ ಡಿಸಿ ಪರ ಪ್ರತಿಯೊಬ್ಬ ಬ್ಯಾಟ್ಸ್‌ಮನ್‌ ಕೊಡುಗೆ ನೀಡಿದರು. ಲೀ (24 ಎಸೆತಗಳಲ್ಲಿ 43 ರನ್) ತಂಡಕ್ಕೆ ರೋಮಾಂಚಕ ಆರಂಭ ನೀಡಿದರು. ನಂತರ ಶಫಾಲಿ 21 ಎಸೆತಗಳಲ್ಲಿ 31 ರನ್ ಗಳಿಸಿದರು. ಜೆಮಿಮಾ ಮತ್ತು ವೋಲ್ವಾರ್ಡ್ (32) ಅವರು ಪಂದ್ಯವನ್ನು ಪೂರ್ಣಗೊಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com