T20 World Cup 2026: ಎರಡು ಸೂಪರ್ ಓವರ್ ಥ್ರಿಲ್ಲರ್; ಅಫ್ಘಾನಿಸ್ತಾನ ವಿರುದ್ಧ ಗೆದ್ದು ಬೀಗಿದ ದಕ್ಷಿಣ ಆಫ್ರಿಕಾ! Video

188 ರನ್ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ ತಂಡ 19.4 ಓವರ್‌ಗಳಲ್ಲಿ 187 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಪಂದ್ಯವು ಮೊದಲ ಸೂಪರ್ ಓವರ್‌ ಪ್ರವೇಶಿಸಿತು.
ದಕ್ಷಿಣ ಆಫ್ರಿಕಾ ತಂಡ
South Africa Team
Updated on

ಅಹಮದಾಬಾದ್: ಬುಧವಾರ ನಡೆದ ಟಿ20 ವಿಶ್ವಕಪ್‌ನ ರೋಮಾಂಚಕ ಗ್ರೂಪ್ ಡಿ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎರಡು ಸೂಪರ್ ಓವರ್‌ಗಳ ನಂತರ ಅಫ್ಘಾನಿಸ್ತಾನವನ್ನು ಸೋಲಿಸಿತು.

ಟಾಸ್ ಗೆದ್ದ ಅಫ್ಘಾನಿಸ್ತಾನ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಕ್ವಿಂಟನ್ ಡಿ ಕಾಕ್ (41 ಎಸೆತಗಳಲ್ಲಿ 59) ಮತ್ತು ರಿಯಾನ್ ರಿಕಲ್ಟನ್ (28 ಎಸೆತಗಳಲ್ಲಿ 61) ಅವರ 114 ರನ್‌ಗಳ ಜೊತೆಯಾಟದೊಂದಿಗೆ 6 ವಿಕೆಟ್‌ ನಷ್ಟಕ್ಕೆ 187 ರನ್‌ ಗಳಿಸಿತು.

ಡೆವಾಲ್ಡ್ ಬ್ರೆವಿಸ್ 23, ಡೇವಿಡ್ ಮಿಲ್ಲರ್ 20 ಮತ್ತು ಮಾರ್ಕೊ ಯಾನ್ಸನ್ 16 ರನ್ ಗಳಿಸುವ ಮೂಲಕ ತಂಡಕ್ಕೆ ನೆರವಾದರು.

ಅಫ್ಘಾನಿಸ್ತಾನ ಪರ, ಅಜ್ಮತುಲ್ಲಾ ಒಮರ್ಜೈ 3, ಫಜಲ್ಹಕ್ ಫಾರೂಕಿ ಒಂದು ಮತ್ತು ರಶೀದ್ ಖಾನ್ ಎರಡು ವಿಕೆಟ್ ಕಬಳಿಸಿದರು.

188 ರನ್ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ ತಂಡದ ಆರಂಭಿಕ ಆಟಗಾರ ರಹಮಾನುಲ್ಲ ಗುರ್ಬಾಜ್ 42 ಎಸೆತಗಳಲ್ಲಿ 84 ರನ್ ಗಳಿಸಿ ತಂಡಕ್ಕೆ ಅಡಿಪಾಯ ಹಾಕಿದರು. ಆದರೆ, ಅಫ್ಘಾನಿಸ್ತಾನ 19.4 ಓವರ್‌ಗಳಲ್ಲಿ 187 ರನ್‌ಗಳಿಗೇ ಆಲೌಟ್ ಆಯಿತು. ಈ ಮೂಲಕ ಪಂದ್ಯವು ಮೊದಲ ಸೂಪರ್ ಓವರ್‌ ಪ್ರವೇಶಿಸಿತು.

ಎರಡು ಸೂಪರ್ ಓವರ್

ಸೂಪರ್ ಓವರ್‌ನಲ್ಲಿ ಲುಂಗಿ ಎನ್‌ಗಿಡಿ ಎಸೆತದಲ್ಲಿ ಒಮರ್‌ಜೈ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸುವ ಮೂಲಕ ಅಫ್ಘಾನಿಸ್ತಾನ ವಿಕೆಟ್ ನಷ್ಟವಿಲ್ಲದೆ 17 ರನ್ ಗಳಿಸಿತು. ದಕ್ಷಿಣ ಆಫ್ರಿಕಾ ತಂಡವು ಅಂತಿಮ ಎಸೆತದಲ್ಲಿ ಸಿಕ್ಸರ್ ಬಾರಿಸಿ ಪಂದ್ಯವನ್ನು ಸಮಬಲಗೊಳಿಸುವ ಮೂಲಕ ಎರಡನೇ ಸೂಪರ್ ಓವರ್‌ಗೆ ಕೊಂಡೊಯ್ದಿತು.

ಎರಡನೇ ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಅವರ 16 ರನ್‌ಗಳ ಬಲದಿಂದ 23 ರನ್ ಗಳಿಸಿತು.

ಬಳಿಕ ರಹಮಾನುಲ್ಲಾ ಗುರ್ಬಾಜ್ ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ಆದರೆ, ಅಫ್ಘಾನಿಸ್ತಾನ ಗುರಿಯನ್ನು ತಲುಪುವಲ್ಲಿ ವಿಫಲವಾಯಿತು. 19-2 ಅಂಕಗಳನ್ನು ಗಳಿಸಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲೊಪ್ಪಿಕೊಂಡಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com