T20 World Cup 2026: 27 ಬಾಲ್ ಗಳಲ್ಲಿ ಅರ್ಧಶತಕ ಹೊಡೆದು, ಭಾರತದ ಸ್ಕೋರ್ ಹೆಚ್ಚಿಸಿದ ಇಶಾನ್ ಕಿಶಾನ್!

ಪಾಕಿಸ್ತಾನ ಬೌಲರ್ ಗಳ ಬೆವರಿಳಿಸಿದ ಇಶಾನ್ ಕಿಶಾನ್ 27 ಎಸೆತಗಳಲ್ಲಿ ವೇಗವಾಗಿ ಅರ್ಧ ಶತಕ ಬಾರಿಸಿದರು.
Ishan Kishan
ಇಶಾನ್ ಕಿಶಾನ್
Updated on

ಕೊಲಂಬೊ: ಇಲ್ಲಿನ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿ ಗುಂಪು ಹಂತದ ಪಂದ್ಯದಲ್ಲಿ ಭಾರತ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿದ ಭಾರತದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಡಕ್ ಔಟ್ ಆದರು.

ಪಾಕಿಸ್ತಾನ ನಾಯಕ ಸಲ್ಮಾನ್ ಆಘಾ ಅವರ ಮೊದಲ ಓವರ್ ನ ಆರನೇ ಎಸೆತದಲ್ಲಿ ಮಾಸ್ಟರ್‌ಸ್ಟ್ರೋಕ್ ಎಂದು ಸಾಬೀತಾಯಿತು. ಅಭಿಷೇಕ್ ಶರ್ಮಾ ಇಂದು ದೊಡ್ಡ ಇನ್ನಿಂಗ್ಸ್ ಆಡುತ್ತಾರೆಂದು ನಿರೀಕ್ಷಿಸಲಾಗಿತ್ತು. ಆದರೆ ಡಕೌಟ್ ಆಗುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.

ಆದಾಗ್ಯೂ ಪಾಕಿಸ್ತಾನ ಬೌಲರ್ ಗಳ ಬೆವರಿಳಿಸಿದ ಇಶಾನ್ ಕಿಶಾನ್ 27 ಎಸೆತಗಳಲ್ಲಿ ವೇಗವಾಗಿ ಅರ್ಧ ಶತಕ ಬಾರಿಸಿದರು.

40 ಎಸೆತಗಳನ್ನು ಎದುರಿಸಿದ ಇಶಾನ್, ಮೂರು ಸಿಕ್ಸರ್, 10 ಬೌಂಡರಿಗಳೊಂದಿಗೆ 77 ರನ್ ಗಳಿಸಿದರು. ಉಳಿದಂತೆ ತಿಲಕ್ ವರ್ಮಾ, 25, ನಾಯಕ ಸೂರ್ಯ ಕುಮಾರ್ ಯಾದವ್ 32, ಶಿವಂ ದುಬೆ 27, ರಿಂಕ್ ಸಿಂಗ್ ಔಟಾಗದೇ 11 ರನ್ ಗಳಿಸಿದರು.

ಇಶಾನ್ ಕಿಶಾನ್ ಅವರ 77 ರನ್ ಗಳ ನೆರವಿನಿಂದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು.

Ishan Kishan
T20 World Cup: ಪಾಕ್ ವಿರುದ್ಧ ಡಕೌಟ್ ಆದ ಅಭಿಷೇಕ್ ಶರ್ಮಾ; ರೋಹಿತ್ ಶರ್ಮಾ ಗರಂ, Video!

ಪಾಕಿಸ್ತಾನ ಪರ ಸೈಮ್ ಅಯುಬ್ 3 ವಿಕೆಟ್ ಪಡೆದರೆ, ಸಲ್ಮಾನ್ ಆಘಾ, ಶಹೀನ್ ಶಾ ಆಫ್ರಿದಿ, ಉಶ್ಮನ್ ತಾರಿಖ್ ತಲಾ ಒಂದು ವಿಕೆಟ್ ಪಡೆದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com