

ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರ ಸೂಪರ್ 8 ಸುತ್ತಿನ ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಮಣಿಸಿ ದಕ್ಷಿಣ ಆಫ್ರಿಕಾ ಅಮೋಘ 76 ರನ್ ಗಳಿಂದ ಜಯ ಸಾಧಿಸಿತ್ತು.
ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದು ದಕ್ಷಿಣ ಆಫ್ರಿಕಾ 187 ರನ್ ಪೇರಿಸಿತ್ತು. 188 ರನ್ ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 111 ರನ್ ಗಳಿಗೆ ಆಲೌಟ್ ಆಗಿ ಹೀನಾಯ ಸೋಲು ಅನುಭವಿಸಿತ್ತು. ಹೀಗೆ ಭಾರತ ಹೀನಾಯ ಸೋಲು ಅನುಭವಿಸುತ್ತಿದ್ದಂತೆ ಪಂದ್ಯ ಆರಂಭಕ್ಕೂ ಮುನ್ನ ನಾಯಕ ಸೂರ್ಯಕುಮಾರ್ ಯಾದವ್ ತಂಡದ ಬದಲಾವಣೆ ಕುರಿತು ಪತ್ರಿಕಾಗೋಷ್ಠಿಯಲ್ಲಿ ಎದುರಾದ ಪ್ರಶ್ನೆಗೆ ಉತ್ತರಿಸುವಾಗ ನೀಡಿದ ಹೇಳಿಕೆ ವೈರಲ್ ಆಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರಿಗೆ ಸ್ಥಾನ ನೀಡುತ್ತೀರಾ ಎಂಬ ಪತ್ರಕರ್ತರೊಬ್ಬರು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ನಾಯಕ ಸೂರ್ಯಕುಮಾರ್ ಯಾದವ್ ಸಂಜು ಸ್ಯಾಮ್ಸನ್ ಅವರನ್ನು ಆಡಿಸಲು ಅಭಿಷೇಕ್ ಶರ್ಮರನ್ನು ಕೂರಿಸಬೇಕ? ಅಥವಾ ತಿಲಕ್ ವರ್ಮಾ ಅವರನ್ನು ಕೈಬಿಡಬೇಕಾ? ಎಂದು ನಕ್ಕಿದ್ದರು. ಆದರೆ ಪಂದ್ಯದಲ್ಲಿ ರನ್ ಕಲೆಹಾಕಲು ಇಬ್ಬರು ಪರದಾಡಿದ್ದರು. ತಿಲಕ್ ವರ್ಮಾ ಕೇವಲ 1 ರನ್ ಗಳಿಸಿ ಔಟಾಗದೇ ಅಭಿಷೇಕ್ ಶರ್ಮಾ ಪರದಾಡಿ 15 ರನ್ ಗಳಿಸಿ ಔಟಾದರು. ಇದು ಪತ್ರಿಕಾಗೋಷ್ಠಿಯಲ್ಲಿ ಅತಿಯಾದ ವಿಶ್ವಾಸ ವ್ಯಕ್ತಪಡಿಸಿದ್ದ ಸೂರ್ಯಕುಮಾರ ಯಾದವ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಗಳಿಗೆ ಗುರಿಯಾಗುವಂತೆ ಮಾಡಿದೆ.
Advertisement