ಗುರುವಾರ ಜಿಂಬಾಬ್ವೆ ವಿರುದ್ಧದ ಟಿ20 ವಿಶ್ವಕಪ್ ಸೂಪರ್ 8 ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡದ ಆಲ್‌ರೌಂಡರ್ ಶಿವಂ ದುಬೆ ಎಸೆದ ಎಸೆತವೊಂದು ವಿಚಿತ್ರವಾದ ನೋ-ಬಾಲ್ ಆಗಿದ್ದು, ಅಭಿಮಾನಿಗಳನ್ನು ಕೆರಳಿಸಿದೆ. ಜಿಂಬಾಬ್ವೆ ಇನಿಂಗ್ಸ್‌ನ 15ನೇ ಓವರ್‌ನಲ್ಲಿ ಬ್ರಿಯಾನ್ ಬೆನೆಟ್‌ಗೆ ವೈಡ್ ಔಟ್‌ಸೈಡ್ ಆಫ್-ಸ್ಟಂಪ್ ಬೌಲಿಂಗ್ ಮಾಡುವ ದುಬೆ ಅವರ ತಂತ್ರವು ದುಬಾರಿಯಾಗಿ ಪರಿಣಮಿಸಿತು.
ಬಳಿಕ ಬೆನೆಟ್ ಅವರು ದುಬೆ ಅವರನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ದುಬೆ ಔಟ್‌ಸೈಡ್ ಆಫ್ ಸ್ಟಂಪ್ ಮಾಡಲು ನಿರ್ಧರಿಸಿದರು. ಈ ತಂತ್ರವು ಮೂರು ವೈಡ್‌ಗಳಿಗೆ ಕಾರಣವಾಯಿತು. ಮುಂದಿನ ಎಸೆತವು ಕೂಡ ವೈಡ್ ಆಗಿತ್ತು. ಔಟ್‌ಸೈಡ್ ದ ಪಿಚ್ ಆಗಿತ್ತು ಮತ್ತು ಆನ್-ಫೀಲ್ಡ್ ಅಂಪೈರ್ ತಕ್ಷಣವೇ ನೋ-ಬಾಲ್ ನೀಡಿದರು. ಯಾವುದೇ ಎಸೆತವನ್ನು ಕಾನೂನುಬದ್ಧವೆಂದು ಪರಿಗಣಿಸಲು, ಅದು ಪಿಚ್‌ನ ರೇಖೆಯೊಳಗೆ ಇರಬೇಕು. ಆದರೆ, ಈ ಎಸೆತ ಪಿಚ್ ಇಂದ ಹೊರಗೆ ಹುಲ್ಲಿನ ಮೇಲೆ ಬೌನ್ಸ್ ಆಯಿತು.
ಎಂಸಿಸಿ ಆಟದ ನಿಯಮ 21.7ರ ಪ್ರಕಾರ 'ಚೆಂಡು, ಬ್ಯಾಟ್ ಅಥವಾ ಸ್ಟ್ರೈಕರ್‌ನ ವ್ಯಕ್ತಿಯನ್ನು ಮುಟ್ಟದೆ, ಒಂದಕ್ಕಿಂತ ಹೆಚ್ಚು ಬಾರಿ ಬೌನ್ಸ್ ಆದರೆ ಅಥವಾ ಪಾಪಿಂಗ್ ಕ್ರೀಸ್ ತಲುಪುವ ಮೊದಲು ನೆಲದ ಮೇಲೆ ಉರುಳುತ್ತಿದ್ದರೆ ಅಥವಾ ಸ್ಟ್ರೈಕರ್‌ನ ವಿಕೆಟ್‌ನ ರೇಖೆಯನ್ನು ತಲುಪುವ ಮೊದಲು ನಿಯಮ 6.1 (ಪಿಚ್‌ನ ಪ್ರದೇಶ) ದಲ್ಲಿ ವ್ಯಾಖ್ಯಾನಿಸಲಾದ ಪಿಚ್‌ನಿಂದ ಸಂಪೂರ್ಣವಾಗಿ ಅಥವಾ ಭಾಗಶಃ ಹೊರಗೆ ಬಿದ್ದರೆ, ಅಂಪೈರ್ ಅದನ್ನು ನೋ ಬಾಲ್ ಎಂದು ಕರೆದು ಸಿಗ್ನಲ್ ನೀಡಬೇಕು. ಟರ್ಫ್ ಅಲ್ಲದ ಪಿಚ್ ಅನ್ನು ಬಳಸುತ್ತಿರುವಾಗ, ಕೃತಕ ಮೇಲ್ಮೈಯಿಂದ ಸಂಪೂರ್ಣವಾಗಿ ಅಥವಾ ಭಾಗಶಃ ಹೊರಗೆ ಬಿದ್ದ ಯಾವುದೇ ಚೆಂಡಿಗೆ ಸಹ ಇದು ಅನ್ವಯಿಸುತ್ತದೆ'.
ಶಿವಂ ದುಬೆ ಅವರ ಎಸೆತವನ್ನು ನೋ ಬಾಲ್ ಎಂದು ನೀಡಿದ್ದು, ಪಂದ್ಯ ವೀಕ್ಷಿಸುತ್ತಿದ್ದ ಅಭಿಮಾನಿಗಳಿಗೆ ಅಚ್ಚರಿಯಾಯಿತು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಭಿನ್ನ ಅಭಿಪ್ರಾಯಗಳಿಗೆ ಕಾರಣವಾಯಿತು.
ಅಭಿಷೇಕ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಭರ್ಜರಿ ಅರ್ಧಶತಕಗಳನ್ನು ಗಳಿಸಿದರು ಮತ್ತು ಅರ್ಶದೀಪ್ ಸಿಂಗ್ 3 ವಿಕೆಟ್ ಪಡೆದು ಕೇವಲ 24 ರನ್ ನೀಡಿದ್ದು ತಂಡಕ್ಕೆ ನೆರವಾಯಿತು. ಗುರುವಾರ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ 2026ರ ಸೂಪರ್ 8 ಪಂದ್ಯದಲ್ಲಿ ಭಾರತ ತಂಡ ಜಿಂಬಾಬ್ವೆ ವಿರುದ್ಧ 72 ರನ್‌ಗಳ ಜಯ ಸಾಧಿಸಿತು.
ಈ ಫಲಿತಾಂಶದಿಂದಾಗಿ ಜಿಂಬಾಬ್ವೆ ತಂಡವು ಪಂದ್ಯಾವಳಿಯಿಂದ ಹೊರಬಿದ್ದಿದ್ದು, ದಕ್ಷಿಣ ಆಫ್ರಿಕಾ ಸೆಮಿಫೈನಲ್‌ಗೆ ಪ್ರವೇಶ ಪಡೆದಿದೆ. ಟೀಂ ಇಂಡಿಯಾ ಮಾರ್ಚ್ 1 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ವಿರುದ್ಧ ಸೆಣಸಲಿದೆ.
Advertisement