

ಮುಂಬೈ: ಈ ಹಿಂದೆ ಮಹಿಳಾ ಏಕದಿನ ವಿಶ್ವಕಪ್ ವೇಳೆ ಭಾರತ ತಂಡದ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಗೆ ನೀಡಿದ್ದ ಮಾತನ್ನು ಕೊನೆಗೂ ಭಾರತದ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಉಳಿಸಿಕೊಂಡಿದ್ದಾರೆ.
ಮಹಿಳಾ ಕ್ರಿಕೆಟ್ ತಂಡದ ತಾರೆ ಜೆಮಿಮಾ ರೊಡ್ರಿಗಸ್ ಅವರಿಗೆ ಬ್ಯಾಟ್ ಆಕಾರದ ಗಿಟಾರ್ ಅನ್ನು ಉಡುಗೊರೆಯಾಗಿ ನೀಡುವ ಮೂಲಕ ಭಾರತೀಯ ಕ್ರಿಕೆಟ್ ತಂಡದ ದಂತಕಥೆ ಸುನಿಲ್ ಗವಾಸ್ಕರ್ ಅವರ ಅದ್ಭುತ ಕ್ಷಣವನ್ನು ಹಂಚಿಕೊಂಡರು.
ಅಲ್ಲದೆ ಇದೇ ವೇಳೆ ಗವಾಸ್ಕರ್ ಜೆಮಿಮಾ ಜೊತೆ ಸೇರಿ ಒಂದು ಹಾಡು ಕೂಡ ಹಾಡುವ ಮೂಲಕ ಈ ಹಿಂದೆ ತಾವು ನೀಡಿದ್ದ ಮಾತನ್ನು ಉಳಿಸಿಕೊಂಡಿದ್ದಾರೆ.
ಈ ಹಿಂದೆ ಗವಾಸ್ಕರ್ ಭಾರತ ಮಹಿಳಾ ಏಕದಿನ ವಿಶ್ವಕಪ್ ಗೆದ್ದರೆ ಜೆಮಿಮಾ ಅವರೊಂದಿಗೆ ಒಟ್ಟಿಗೆ ಹಾಡು ಹಾಡುವುದಾಗಿ ದಂತಕಥೆ ಕ್ರಿಕೆಟಿಗ ಈ ಹಿಂದೆ ಭರವಸೆ ನೀಡಿದ್ದರು. ಅದರಂತೆ ಅವರು ತಮ್ಮ ಭರವಸೆಯನ್ನು ಉಳಿಸಿಕೊಂಡರು. ಅಲ್ಲದೆ ಈ ಕುರಿತ ವಿಡಿಯೋವನ್ನು ಜೆಮೀಮಾ ಹಂಚಿಕೊಂಡಿದ್ದಾರೆ.
ವಿಡಿಯೋ ವೈರಲ್
ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಜೆಮಿಮಾ ಅವರನ್ನು ಸ್ವಾಗತಿಸುತ್ತಾ ಕ್ರಿಕೆಟ್ ಬ್ಯಾಟ್‌ನ ಆಕಾರದಲ್ಲಿರುವ ಕಸ್ಟಮೈಸ್ ಮಾಡಿದ ಗಿಟಾರ್ ಅನ್ನು ಗವಾಸ್ಕರ್ ಅವರಿಗೆ ಉಡುಗೊರೆಯಾಗಿ ನೀಡುತ್ತಿರುವುದು ಕಂಡುಬಂದಿದೆ.
ಅಲ್ಲದೆ ಜೆಮಿಮಾ ಮತ್ತು ಗವಾಸ್ಕರ್ ಜೋಡಿ ಕಿಶೋರ್ ಕುಮಾರ್ ಮತ್ತು ಮನ್ನಾ ಡೇ ಹಾಡಿದ 'ಶೋಲೆ' ಚಿತ್ರದ ಪ್ರಸಿದ್ಧ ಹಾಡನ್ನು ಹಾಡಿದರು.
ಇದೇ ವಿಚಾರವಾಗಿ ಪೋಸ್ಟ್ ಮಾಡಿರುವ ಜೆಮೀಮಾ, 'ಸುನಿಲ್ ಸರ್ ತಮ್ಮ ಭರವಸೆಯನ್ನು ಉಳಿಸಿಕೊಂಡರು. ನಾವು ಇದುವರೆಗೆ ಕಂಡಿರದಷ್ಟು ತಂಪಾದ ಬ್ಯಾಟ್-ಆರ್‌ನೊಂದಿಗೆ ಜಾಮ್ ಮಾಡಿದ್ದೇವೆ. ಇದು ವಿಶೇಷವಾಗಿತ್ತು" ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement