

ವಡೋದರ: ಆತಿಥೇಯ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 4 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ವಡೋದರಾದಲ್ಲಿ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 300 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತ 49 ಓವರ್‌ಗಳಲ್ಲಿ 6 ವಿಕೆಟ್‌ಗೆ 306 ರನ್ ಗಳಿಸಿ ಪಂದ್ಯವನ್ನು ಗೆದ್ದಿದ್ದು ಭಾರತ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಭಾರತದ ಪರ ವಿರಾಟ್ ಕೊಹ್ಲಿ 93, ಶುಭಮನ್ ಗಿಲ್ 56 ಮತ್ತು ಶ್ರೇಯಸ್ ಅಯ್ಯರ್ 49 ರನ್ ಗಳಿಸಿದರು. ನಂತರ ಹರ್ಷಿತ್ ರಾಣಾ ಮತ್ತು ಕೆಎಲ್ ರಾಹುಲ್ ಉಪಯುಕ್ತ ಇನ್ನಿಂಗ್ಸ್ ಆಡಿದ್ದು ಭಾರತವನ್ನು ಗೆಲುವಿನತ್ತ ಮುನ್ನಡೆಸಿದರು. ಕೆಎಲ್ ರಾಹುಲ್ 21 ಎಸೆತಗಳಲ್ಲಿ 29 ರನ್‌ಗಳ ಸಣ್ಣ ಇನ್ನಿಂಗ್ಸ್ ಆಡಿದರು. ಆದರೆ ಭಾರತವನ್ನು ತೊಂದರೆಯಿಂದ ಪಾರು ಮಾಡಿ 49ನೇ ಓವರ್‌ಗಳಲ್ಲಿ ಗೆಲುವು ಸಾಧಿಸಿದರು. ಹರ್ಷಿತ್ ರಾಣಾ ಕೂಡ 23 ಎಸೆತಗಳಲ್ಲಿ 29 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರು. ವಾಷಿಂಗ್ಟನ್ ಸುಂದರ್ 7 ರನ್‌ಗಳಲ್ಲಿ ಅಜೇಯರಾಗಿ ಉಳಿದರು. ನ್ಯೂಜಿಲೆಂಡ್ ಪರ ಕೈಲ್ ಜೇಮಿಸನ್ 4 ವಿಕೆಟ್ ಪಡೆದರು.
ಇದಕ್ಕೂ ಮೊದಲು, ಕಿವೀಸ್ ತಂಡದ ಆರಂಭಿಕರಾದ ಡೆವೊನ್ ಕಾನ್ವೇ ಮತ್ತು ಹೆನ್ರಿ ನಿಕೋಲ್ಸ್ ಅರ್ಧಶತಕಗಳನ್ನು ಗಳಿಸಿದರು. ಹೆನ್ರಿ ನಿಕೋಲ್ಸ್ 62 ರನ್ ಮತ್ತು ಕಾನ್ವೇ 56 ರನ್ ಗಳಿಸಿದರು. ಡ್ಯಾರಿಲ್ ಮಿಚೆಲ್ ಅವರ 84 ರನ್‌ಗಳು ಸ್ಕೋರ್ 300 ತಲುಪಲು ಸಹಾಯ ಮಾಡಿತು. ಭಾರತದ ಪರ ಸಿರಾಜ್, ಪ್ರಸಿದ್ಧ್ ಮತ್ತು ಹರ್ಷಿತ್ ರಾಣಾ ತಲಾ ಎರಡು ವಿಕೆಟ್ ಪಡೆದರು. ಸರಣಿಯ ಎರಡನೇ ಪಂದ್ಯ ಜನವರಿ 14 ರಂದು ನಡೆಯಲಿದೆ.
Advertisement