

ಭಾರತದೊಂದಿಗಿನ ಸಂಘರ್ಷವು ಬಾಂಗ್ಲಾದೇಶಕ್ಕೆ ತೊಂದರೆದಾಯಕ ಪರಿಸ್ಥಿತಿಗಳನ್ನು ಸೃಷ್ಟಿಸುತ್ತಿದ್ದು, ದೇಶವು ಮತ್ತೊಂದು ದೊಡ್ಡ ಆರ್ಥಿಕ ಹೊಡೆತವನ್ನು ಅನುಭವಿಸಲಿದೆ ಎಂದು ವರದಿಯೊಂದು ಹೇಳಿದೆ. ಕೆಲವು ದಿನಗಳ ಹಿಂದೆ, ಭಾರತದೊಂದಿಗಿನ ಸದ್ಯದ ಪ್ರಸ್ತುತ ಜಕೀಯ ಉದ್ವಿಗ್ನತೆಯ ಮಧ್ಯೆ ಬಾಂಗ್ಲಾದೇಶದ ಕೆಲವು ಉನ್ನತ ಆಟಗಾರರು ತಮ್ಮ ಪ್ರಾಯೋಜಕತ್ವದ ಒಪ್ಪಂದಗಳನ್ನು ಕಳೆದುಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತು. ಕ್ರಿಕೆಟ್ ಸಲಕರಣೆಗಳ ತಯಾರಕ ಎಸ್‌ಜಿ ಬಾಂಗ್ಲಾದೇಶದ ಆಟಗಾರರೊಂದಿಗೆ ಪ್ರಾಯೋಜಕತ್ವ ನವೀಕರಣಗಳನ್ನು ಸ್ಥಗಿತಗೊಳಿಸಿದ ನಂತರ, ಮತ್ತೊಂದು ಭಾರತೀಯ ಕ್ರೀಡಾ ಉಡುಪು ಬ್ರಾಂಡ್ ಸರೀನ್ ಸ್ಪೋರ್ಟ್ಸ್ ತನ್ನ ಉತ್ಪನ್ನಗಳನ್ನು ಬಾಂಗ್ಲಾದೇಶದಲ್ಲಿ ತಯಾರಿಸದಿರಲು ನಿರ್ಧರಿಸಿದೆ ಎಂದು ವರದಿಯಾಗಿದೆ.
ನಾಯಕ ಲಿಟ್ಟನ್ ದಾಸ್ ಸೇರಿದಂತೆ ಕೆಲವು ಉನ್ನತ ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ಗಳಿಗೆ ಎಸ್‌ಜಿ ಪ್ರಾಯೋಜಕತ್ವ ನೀಡಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ರಾಜಕೀಯ ಸಂಬಂಧ ಹದಗೆಟ್ಟಂತೆ, ಎಸ್‌ಜಿ ಒಪ್ಪಂದ ನವೀಕರಣಗಳನ್ನು ತಡೆಹಿಡಿದಿದೆ ಎಂದು ಹೇಳಲಾಗಿದೆ. ಬಾಂಗ್ಲಾದೇಶದಲ್ಲಿ ತನ್ನ ಸರಕುಗಳನ್ನು ಉತ್ಪಾದಿಸುವ ಭಾರತೀಯ ಕಂಪನಿಯಾದ ಎಸ್‌ಎಸ್ ಕೂಡ ಇನ್ಮುಂದೆ ಆ ದೇಶದಿಂದ ಸೇವೆಗಳನ್ನು ಪಡೆಯುವುದಿಲ್ಲ ಎಂದಿದೆ ಎಂದು ವರದಿಯಾಗಿದೆ.
'ಅವರ ಪ್ರಾಯೋಜಕತ್ವ ಒಪ್ಪಂದಗಳ ನವೀಕರಣ ಸ್ವಲ್ಪ ದಿನದಲ್ಲೇ ಬರುತ್ತಿದ್ದವು. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸದ್ಯದ ಹೆಚ್ಚುತ್ತಿರುವ ರಾಜಕೀಯ ಮತ್ತು ಕ್ರಿಕೆಟ್ ಉದ್ವಿಗ್ನತೆಗಳ ನಡುವೆ ಆ ಪ್ರಕ್ರಿಯೆಯು ನಿಧಾನಗೊಂಡಿದೆ' ಎಂದು ಮೂಲವೊಂದು ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದೆ.
'ವಾಸ್ತವವಾಗಿ, ಭಾರತದ ಮತ್ತೊಂದು ಪ್ರಮುಖ ಕ್ರೀಡಾ ಸಲಕರಣೆಗಳ ಉತ್ಪಾದನಾ ಕಂಪನಿಯಾದ ಸರೀನ್ ಸ್ಪೋರ್ಟ್ಸ್ ಇಂಡಸ್ಟ್ರೀಸ್ (SS) ಕಳೆದ ವರ್ಷ ಬಾಂಗ್ಲಾದೇಶದಲ್ಲಿ ಸಮಸ್ಯೆ ಪ್ರಾರಂಭವಾದಾಗ ನಾಲ್ಕೈದು ಪ್ರಮುಖ ಬಾಂಗ್ಲಾದೇಶ ಕ್ರಿಕೆಟಿಗರ ಪ್ರಾಯೋಜಕತ್ವ ಒಪ್ಪಂದಗಳನ್ನು ರದ್ದುಗೊಳಿಸಿತ್ತು. ಆದಾಗ್ಯೂ, ಎರಡೂ ದೇಶಗಳ ನಡುವಿನ ಸಂಬಂಧಗಳು ಸುಧಾರಿಸಿದರೆ ವಿಷಯಗಳು ಬದಲಾಗಬಹುದು' ಎಂದು ಮತ್ತೊಂದು ಮೂಲ ತಿಳಿಸಿದೆ.
ಭಾರತ ಮತ್ತು ಬಾಂಗ್ಲಾದೇಶದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯು, ಆರ್ಥಿಕ ತೊಂದರೆಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ.
'ಇದು ಕೇವಲ ಆಟಗಾರರ ಒಪ್ಪಂದಗಳನ್ನು ನವೀಕರಿಸದಿರುವುದು ಮಾತ್ರವಲ್ಲ. ಬಾಂಗ್ಲಾದೇಶದಲ್ಲಿನ ರಾಜಕೀಯ ಅಸ್ಥಿರತೆ ಮತ್ತು ಅನಿಶ್ಚಿತತೆಯಿಂದಾಗಿ ಕಳೆದ ಆರು ತಿಂಗಳಿನಿಂದ ಬಾಂಗ್ಲಾದೇಶದಲ್ಲಿ ಎಸ್‌ಜಿ ತನ್ನ ಕ್ರಿಕೆಟ್ ಉಪಕರಣಗಳ ವಿತರಣೆಯನ್ನು ನಿಲ್ಲಿಸಿದೆ'.
ವಾಸ್ತವವಾಗಿ, ಬಾಂಗ್ಲಾದೇಶದ ಕಾರ್ಖಾನೆಗಳಲ್ಲಿ ತಯಾರಿಸಲ್ಪಟ್ಟ ಕ್ರೀಡಾ ಉಡುಪುಗಳು ಬಹಳಷ್ಟು ಇವೆ. ನಂತರ ಅವುಗಳನ್ನು ಎಸ್‌ಜಿ ಮತ್ತು ಭಾರತದ ಇತರ ಕ್ರೀಡಾ ಸಲಕರಣೆಗಳ ತಯಾರಕರಿಗೆ ಸರಬರಾಜು ಮಾಡಲಾಗುತ್ತಿತ್ತು. ಆ ಸರಬರಾಜು ಮಾರ್ಗವೂ ಕಳೆದ ಒಂದು ವರ್ಷದಿಂದ ಬತ್ತಿಹೋಗಿದೆ' ಎಂದು ವರದಿಯಾಗಿದೆ.
Advertisement