

ವಿಜಯ್ ಹಜಾರೆ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಕರ್ನಾಟಕ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಕರ್ನಾಟಕ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಬ್ಯಾಟಿಂಗ್ ಆರಂಭಿಸಿದ ಮುಂಬೈ ತಂಡ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 254 ರನ್ ಪೇರಿಸಿತು.
ಮುಂಬೈ ನೀಡಿದ 255 ರನ್ ಗಳ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ಪರ ಮಾಯಾಂಕ್ ಅಗರವಾಲ್ 12 ರನ್ ಗಳಿಸಿ ಔಟಾದರು. ನಂತರ ಜೊತೆಯಾದ ದೇವದತ್ ಪಡಿಕ್ಕಲ್ ಅಜೇಯ 81 ಹಾಗೂ ಕರುಣ್ ನಾಯರ್ ಅಜೇಯ 74 ರನ್ ಗಳಿಸಿದ್ದರು. ಇಬ್ಬರೂ 143 ರನ್ ಗಳ ಜೊತೆಯಾಟವಾಡಿದರು. ಕರ್ನಾಟಕ ತಂಡ 33 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 187 ರನ್ ಪೇರಿಸಿತ್ತು. ಈ ವೇಳೆ ಮಳೆಯಾಗಿದ್ದರಿಂದ ಪಂದ್ಯ ಸ್ಥಗಿತಗೊಂಡಿತ್ತು. ಅಂತಿಮವಾಗಿ ವಿಜೆಡಿ ನಿಯಮದಡಿ ಕರ್ನಾಟಕ ತಂಡ 55 ರನ್ ಗಳಿಂದ ಗೆಲುವು ಸಾಧಿಸಿದೆ. ಗ್ರೂಪ್ ಎ ತಂಡದಲ್ಲಿದ್ದ ಕರ್ನಾಟಕ ಇದೀಗ ಸೆಮಿಫೈನಲ್ ಗೆ ಪ್ರವೇಶಿಸಿದೆ.
ಮುಂಬೈ ಪರ ಬ್ಯಾಟಿಂಗ್ ನಲ್ಲಿ ರಘುವಂಶಿ 27, ಇಶಾನ್ 20, ಸಿದ್ದೇಶ್ ಲಾಡ್ 38, ಶಮ್ಸ್ ಮೌಲಾನಿ 86 ಮತ್ತು ಸಾಯಿರಾಜ್ ಪಾಟೀಲ್ ಅಜೇಯ 33 ರನ್ ಗಳಿಸಿದ್ದು ತಂಡದ ಮೊತ್ತ 254 ರನ್ ಗೆ ತಲುಪಲು ಸಾಧ್ಯವಾಯಿತು. ಕರ್ನಾಟಕ ಪರ ಬೌಲಿಂಗ್ ನಲ್ಲಿ ವಿದ್ಯಾಧಾರ್ ಪಾಟೀಲ್ 3, ವಿಧ್ವತ್ ಕಾವೇರಪ್ಪ, ಅಭಿಲಾಶ್ ಶೆಟ್ಟಿ ತಲಾ 2 ವಿಕೆಟ್ ಪಡೆದರೆ ವಿಜಯ್ ಕುಮಾರ್ ವ್ಯಾಸಕ್ 1 ವಿಕೆಟ್ ಪಡೆದಿದ್ದಾರೆ.
Advertisement