

ವಡೋದರ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯ ಸಾಕಷ್ಟು ವಿಚಾರಗಳಿಂದ ಸುದ್ದಿಗೆ ಗ್ರಾಸವಾಗಿದ್ದು, ಈ ಪೈಕಿ ವಿರಾಟ್ ಕೊಹ್ಲಿ ವಿಚಾರವಾಗಿಯೂ ಸುದ್ದಿಯಲ್ಲಿದೆ.
ಅಂದಿನ ಪಂದ್ಯದಲ್ಲಿ ಕೊಹ್ಲಿ ಕೇವಲ 7 ರನ್ ಗಳ ಅಂತರದಲ್ಲಿ ಶತಕ ಮಿಸಿ ಮಾಡಿಕೊಂಡು ದಾಖಲೆ ಮಿಸ್ ಮಾಡಿಕೊಂಡಿದ್ಜರು. ಆ ಮೂಲಕ ಅವರ ಶತಕ ಕಣ್ತುಂಬಿಕೊಳ್ಳಬೇಕು ಎಂಬ ಸಾವಿರಾರು ಅಭಿಮಾನಿಗಳ ಆಸೆಗೆ ತಣ್ಣೀರು ಬಿತ್ತು. ಇದೇ ಅಭಿಮಾನಿಗಳ ಸಾಲಿನಲ್ಲಿ ಅವರ ತದ್ರೂಪಿ ಬಾಲಕನೂ ಇದ್ದ..
ಅಚ್ಚರಿಯಾದರೂ ಇದು ನಿಜ.. ಈ ಮಾತನ್ನು ಸ್ವತಃ ವಿರಾಟ್ ಕೊಹ್ಲಿ ಹೇಳಿದ್ದಾರೆ. ವಡೋದರಾದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯಕ್ಕೂ ಮೊದಲು ನಡೆದ ಪ್ರ್ಯಾಕ್ಟೀಸ್ ಸೆಶನ್ ವೇಳೆ ವಿರಾಟ್ ಕೊಹ್ಲಿಯ ಬಾಲ್ಯದ ಪ್ರತಿರೂಪದಂತಿದ್ದ ಬಾಲಕನೊಬ್ಬ ಎಲ್ಲರ ಗಮನ ಸೆಳೆದ.
ನೆರೆದಿದ್ದ ಜನರೆಲ್ಲರೂ ಈತನನ್ನು ಮಿನಿ ಕೊಹ್ಲಿ ಎಂದರೆ ಕೆಲವರಂತೂ ಕೊಹ್ಲಿ ಪುತ್ರ ಅಕಾಯ್ ಏನಾದ್ರೂ ಮೈದಾನಕ್ಕೆ ಬಂದನಾ ಎಂದೇ ಪ್ರಶ್ನಿಸಿದರು. ಆ ಬಾಲಕನನ್ನು ನೋಡಿ ಸ್ವತಃ ವಿರಾಟ್ ಕೊಹ್ಲಿ ಅವರೇ ಖುಷಿಪಟ್ಟರು. ಈ ಅಪರೂಪದ ಘಟನೆಯ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಅಲ್ ನೋಡು ನನ್ನ ಡೂಪ್ಲಿಕೇಟ್ ಕೂತಿದ್ದಾನೆ
ಇನ್ನು ತರಬೇತಿ ವೇಳೆ ಫೋಟೋ ಸೆಷನ್ ಮುಗಿಸಿದ ಕೊಹ್ಲಿ ನೇರವಾಗಿ ರೋಹಿತ್ ಶರ್ಮಾ ಹತ್ತಿರ ಬಂದು ಅಲ್ಲಿ ನೋಡು ನನ್ನ ಡೂಪ್ಲಿಕೇಟ್ ಕೂತಿದ್ದಾನೆ ಎಂದು ತನ್ನದೇ ತದ್ರೂಪಿ ಬಾಲಕನನ್ನು ತೋರಿಸಿದ್ದಾರೆ. ರೋಹಿತ್ ಕೂಡ ಬಾಲಕನನ್ನು ನೋಡಿ ನಕ್ಕಿದ್ದಾರೆ.
ಮೈದಾನದಲ್ಲಿದ್ದ ಸ್ಟಾರ್ ಆಟಗಾರರ ಜೂನಿಯರ್ ಗಳು
ಇನ್ನು ಅಂದು ವಡೋದರಾದಲ್ಲಿ ವಿರಾಟ್ ಕೊಹ್ಲಿ ಜೂನಿಯರ್ ಮಾತ್ರವಲ್ಲ.. ಅರ್ಶ್ ದೀಪ್ ಸಿಂಗ್ ಸೇರಿದಂತೆ ಹಲವು ಆಟಗಾರರ ಜೂನಿಯರ್ ಆಟಗಾರರು ಕಾಣಿಸಿಕೊಂಡಿದ್ದರು. ಎಲ್ಲರೊಂದಿಗೂ ಕೊಹ್ಲಿ ಫೋಟೋ ತೆಗೆಸಿಕೊಂಡರು.
ಇನ್ನು ಟೀಂ ಇಂಡಿಯಾದ ಜರ್ಸಿಯಲ್ಲಿದ್ದ ಈ ಬಾಲಕನ ಹೆಸರು ಇತ್ಯಾದಿ ವಿವರಗಳು ಈವರೆಗೂ ಲಭಿಸಿಲ್ಲ. ಆದರೆ ಈಗಾಗಲೇ ಮಿನಿ ಕೊಹ್ಲಿ ಎಂದೇ ಫೇಮಸ್ ಆಗಿದ್ದಾನೆ. ಆತ ಮತ್ತು ಉಳಿದ ಕೆಲ ಚಿಣ್ಣರೊಂದಿಗೆ ಎಡಗೈವೇಗಿ ಅರ್ಶದೀಪ್ ಸಿಂಗ್ ಅವರು ರೀಲ್ ಮಾಡಿದರು. ಈ ರೀಲ್ ಸಹ ಈಗ ವೈರಲ್ ಆಗಿದೆ.
Advertisement