

ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ತಂಡ ತನ್ನ ಜೈತ್ರಯಾತ್ರೆ ಮುಂದುವರೆಸಿದ್ದು, ಉತ್ತರ ಪ್ರದೇಶ ವಿರುದ್ಧ 9 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿ ಅತ್ಯಪರೂಪದ ದಾಖಲೆ ನಿರ್ಮಿಸಿದೆ.
ನಿನ್ನೆ ನವೀ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ದದ ಪಂದ್ಯದಲ್ಲಿ ಆರ್ ಸಿಬಿ 9 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಯುಪಿ ವಾರಿಯರ್ಸ್ ತಂಡ ನಿಗಧಿತ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 143 ಗಳಿಸಿ ಆರ್ ಸಿಬಿಗೆ ಗೆಲಲ್ಲು 144 ರನ್ ಗಳ ಸಾಧಾರಣ ಗುರಿ ನೀಡಿತು.
ಈ ಗುರಿಯನ್ನು ಬೆನ್ನು ಹತ್ತಿದ ಆರ್ ಸಿಬಿ ನಾಯಕಿ ಸ್ಮೃತಿ ಮಂಧಾನ (ಅಜೇಯ 47) ಮತ್ತು ಗ್ರೇಸ್ ಹ್ಯಾರಿಸ್ (85)ರ ಸ್ಫೋಟಕ ಅರ್ಧಶತಕಗಳ ನೆರವಿನಿಂದ ಕೇವಲ 12 ಓವರ್ ನಲ್ಲಿಯೇ ಆರ್ ಸಿಬಿ 145 ರನ್ ಗಳಿಸಿ 9 ವಿಕೆಟ್ ಅಂತರದಲ್ಲಿ ಜಯಭೇರಿ ಭಾರಿಸಿತು.
ಕೇವಲ 12 ಓವರ್ ನಲ್ಲೇ ಪಂದ್ಯ ಮುಕ್ತಾಯ
ಇನ್ನು ಯುಪಿ ವಾರಿಯರ್ಸ್ ನೀಡಿದ ಗುರಿಯನ್ನು ಬೆನ್ನು ಹತ್ತಿದ ಆರ್ ಸಿಬಿ ಆರಂಭದಿಂದಲೂ ಆಕ್ರಮಣಕಾರಿ ಪ್ರದರ್ಶನ ನೀಡಿತು. ಮೊದಲ ವಿಕೆಟ್ ಗೆ ಗ್ರೇಸ್ ಹ್ಯಾರಿಸ್ ಮತ್ತು ಸ್ಮೃತಿ ಮಂಧಾನ ಜೋಡಿ 137 ರನ್ ಪೇರಿಸಿತು. ಈ ಹಂತದಲ್ಲಿ ಬಹುತೇಕ ಆರ್ ಸಿಬಿ ಗೆಲುವು ಖಚಿತವಾಗಿತ್ತು.
ಆದರೆ 85 ರನ್ ಗಳಿಸಿದ್ದ ಗ್ರೇಸ್ ಹ್ಯಾರಿಸ್ ಶಿಖಾ ಪಾಂಡೇ ಬೌಲಿಂಗ್ ನಲ್ಲಿ ಔಟಾದರು. ಗ್ರೇಸ್ ಹ್ಯಾರಿಸ್ ಕೇವಲ 40 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 10 ಬೌಂಡರಿ ಸಹಿತ 85 ರನ್ ಪೇರಿಸಿದರು. ಬಳಿಕ ಸ್ಮೃತಿ ಮಂಧಾನ ಮತ್ತು ರಿಚಾ ಘೋಷ್ ಗೆಲುವಿನ ಔಪಚಾರಿಕತೆ ಮುಗಿಸಿದರು. ಸ್ಮೃತಿ ಮಂಧಾನ 32 ಎಸೆತಗಳಲ್ಲಿ 9 ಬೌಂಡರಿ ಸಹಿತ ಅಜೇಯ 47 ರನ್ ಕಲೆಹಾಕಿದರೆ, ರಿಚಾ ಘೋಷ್ 2 ಎಸೆತದಲ್ಲಿ 1 ಬೌಂಡರ್ ಸಹಿತ 4 ರನ್ ಕಲೆಹಾಕಿದರು.
ದಾಖಲೆ ನಿರ್ಮಾಣ
ಇನ್ನು ಈ ಪಂದ್ಯದಲ್ಲಿ ಆರ್ ಸಿಬಿ ಮಹಿಳಾ ಪ್ರೀಮಿಯರ್ ಲೀಗ್ ನ 3ನೇ ಅತೀ ದೊಡ್ಡ ಗೆಲುವು ಸಾಧಿಸಿತು. ಅಂದರೆ ಆರ್ ಸಿಬಿ ಇನ್ನೂ 47 ಎಸೆತಗಳು ಬಾಕಿ ಇರುವಂತೆಯೇ ಗೆಲುವು ಸಾಧಿಸಿ ಈ ಸಾಧನೆ ಮಾಡಿದೆ. ಇದಕ್ಕೂ ಮೊದಲು 2023ರ ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ದೆಹಲಿ ತಂಡ ಗುಜರಾತ್ ಜೈಂಟ್ಸ್ ತಂಡ 77 ಎಸೆತಗಳು ಬಾಕಿ ಇರುವಂತೆಯೇ ಗೆಲುವು ಸಾಧಿಸಿತ್ತು. ಆ ಮೂಲಕ ಅತೀ ಹೆಚ್ಚು ಎಸೆತಗಳು ಬಾಕಿ ಇರುವಂತೆಯೇ ಗೆಲುವು ಸಾಧಿಸಿದ ಮೊದಲ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ.
Winning with most balls to spare (WPL)
77 DC vs GG Navi Mumbai 2023
66 DC vs MI Navi Mumbai 2023
47 RCB vs UPW Navi Mumbai 2026 *
45 RCB vs GG Bengaluru 2024
ಮಹಿಳಾ ಪ್ರೀಮಯಕ್ ಲೀಗ್ ನಲ್ಲಿ ವೈಯುಕ್ತಿಕ ಗರಿಷ್ಠ ರನ್
ಇದೇ ವೇಳೆ ಆರ್ ಸಿಬಿ ಪರ ಆರಂಭಿಕ ಆಟಗಾರ್ತಿ ಗ್ರೇಸ್ ಹ್ಯಾರಿಸ್ 85 ರನ್ ಕಲೆಹಾಕಿದ್ದು, ಇದು ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ದಾಖಲಾದ 3ನೇ ಗರಿಷ್ಠ ವೈಯುಕ್ತಿಕ ರನ್ ಗಳಿಕೆಯಾಗಿದೆ. ಈ ಹಿಂದೆ 2023ರಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಆರ್ ಸಿಬಿಯ ಸೋಫಿ ಡಿವೈನ್ 36 ಎಸೆತಗಳಲ್ಲಿ 99 ರನ್ ಕಲೆಹಾಕಿದ್ದರು. ಇದು ಆರ್ ಸಿಬಿ ಪರ ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ದಾಖಲಾದ ವೈಯುಕ್ತಿಕ ಗರಿಷ್ಟ ರನ್ ಗಳಿಕೆಯಾಗಿದೆ.
Highest individual score for RCB (WPL)
99(36) Sophie Devine vs GG Brabourne 2023
90*(56) Ellyse Perry vs UPW Bengaluru 2025
85(40) Grace Harris vs UPW Navi Mumbai 2026 *
81(43) Ellyse Perry vs MI Bengaluru 2025
81(47) Smriti Mandhana vs DC Vadodara 2025
Advertisement