ನ್ಯೂಜಿಲೆಂಡ್ ವಿರುದ್ಧದ ODI ಸರಣಿ ಸೋಲು: ರೋಹಿತ್ ಶರ್ಮಾ 'ಕಳಪೆ ಫಾರ್ಮ್' ಶುಭಮನ್ ಗಿಲ್ ಏನಂದ್ರು ಗೊತ್ತಾ?

ಭಾನುವಾರ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ರನ್ ಮೆಷಿನ್ ವಿರಾಟ್ ಕೊಹ್ಲಿ ಅವರ ಭರ್ಜರಿ ಶತಕದ ಹೊರತಾಗಿಯೂ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ 41 ರನ್‌ಗಳಿಂದ ಸೋಲು ಅನುಭವಿಸಿತು.
Shubman Gill
ಶುಭಮನ್ ಗಿಲ್
Updated on

ಇಂದೋರ್: ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಸೋತ ಬಳಿಕ ರೋಹಿತ್ ಶರ್ಮಾ ಅವರ ಕೆಟ್ಟ ಪ್ರದರ್ಶನದ ಹೊರತಾಗಿಯೂ ಅವರನ್ನು ಭಾರತ ತಂಡದ ನಾಯಕ ಶುಭಮನ್ ಗಿಲ್ ಬೆಂಬಲಿಸಿದ್ದಾರೆ.

ಭಾನುವಾರ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ರನ್ ಮೆಷಿನ್ ವಿರಾಟ್ ಕೊಹ್ಲಿ ಅವರ ಭರ್ಜರಿ ಶತಕದ ಹೊರತಾಗಿಯೂ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ 41 ರನ್‌ಗಳಿಂದ ಸೋಲು ಅನುಭವಿಸಿತು.

ಈ ಸರಣಿಯಲ್ಲಿ ರೋಹಿತ್ ಶರ್ಮಾ 20.33 ಸರಾಸರಿಯಲ್ಲಿ ಕೇವಲ 61 ರನ್ ಮಾತ್ರ ಗಳಿಸಿದ್ದು, ಅರ್ಧ ಶತಕ ದಾಖಲಿಸುವಲ್ಲಿಯೂ ವಿಫಲರಾಗಿದ್ದಾರೆ.

ಪಂದ್ಯ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ರೋಹಿತ್ ಶರ್ಮಾ, ಆಸ್ಟ್ರೇಲಿಯಾ ಸರಣಿ ನಂತರ ಶರ್ಮಾ ಅದ್ಭುತ ಫಾರ್ಮ್‌ನಲ್ಲಿದ್ದರು. ಆದಾಗ್ಯೂ, ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ತನ್ನ ಆರಂಭಿಕ ಆಟ ಆಡುವಲ್ಲಿ ವಿಫಲರಾಗಿದ್ದಾರೆ ಎಂದರು.

ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಸರಣಿಯಿಂದಲೂ ರೋಹಿತ್ ಶರ್ಮಾ ಅದ್ಭುತ ಫಾರ್ಮ್‌ನಲ್ಲಿದ್ದಾರೆ ಅಂತಾ ಭಾವಿಸುತ್ತೇನೆ. ಆದರೆ ಅದೇ ರೀತಿ ಯಾವಾಗಲೂ ಆರಂಭಿಕ ಆಟ ಆಡುವುದು ಸಾಧ್ಯವಿಲ್ಲ. ನ್ಯೂಜಿಲೆಂಡ್ ಸರಣಿಯಲ್ಲೂ ರೋಹಿತ್ ಉತ್ತಮ ಆರಂಭ ನೀಡಿದ್ದಾರೆ ಎಂದು ಸಮರ್ಥಿಸಿಕೊಂಡರು.

Shubman Gill
3rd ODI: ಕೊಹ್ಲಿಯ 85ನೇ ಶತಕ ವ್ಯರ್ಥ; ಏಕದಿನ ಸರಣಿ ಗೆದ್ದು ಬೀಗಿದ ನ್ಯೂಜಿಲೆಂಡ್

ಬ್ಯಾಟ್ಸ್‌ಮನ್ ಆಗಿ ಯಾವಾಗಲೂ ಉತ್ತಮ ಆರಂಭ ನೀಡಬೇಕು ಅಂತಾನೆ ಬಯಸುತ್ತೀರಾ. ಆದರೆ ಎಲ್ಲಾ ವೇಳೆಯಲ್ಲಿ ಆ ರೀತಿಯ ಆರಂಭ ನೀಡುವುದು ಅಸಾಧ್ಯ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com