ನ್ಯೂಜಿಲೆಂಡ್ ವಿರುದ್ದ ODI ಸರಣಿ ಸೋಲು: ಭಾರತಕ್ಕೆ ಇವರೇ 'ವಿಲನ್' ಗಳು!

ಈ ಸೋಲಿಗೆ ಬ್ಯಾಟಿಂಗ್ ಕ್ರಮಾಂಕದ ಅಗ್ರಸ್ಥಾನದಲ್ಲಿರುವ ರೋಹಿತ್ ಶರ್ಮಾ ಅವರ ಪರಿಣಾಮಕಾರಿಯಲ್ಲದ ಬ್ಯಾಟಿಂಗ್ ಯಿಂದ ಹಿಡಿದು ಬೌಲರ್ ಮತ್ತು ಬ್ಯಾಟರ್ ಆಗಿರುವ ರವೀಂದ್ರ ಜಡೇಜಾ ಅವರ ವೈಫಲ್ಯಗಳವರೆಗೆ ಅನೇಕ ಅನೇಕ ಚರ್ಚೆಗಳನ್ನು ಮಾಡಲಾಗುತ್ತಿದೆ.
Rohit Sharma, Ravindra Jadeja
ರೋಹಿತ್ ಶರ್ಮಾ, ರವೀಂದ್ರ ಜಡೇಜಾ
Updated on

ನವದೆಹಲಿ: ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ODI ಸರಣಿಯ ಗೆಲುವಿನ ಹೊರತಾಗಿಯೂ ತವರಿನಲ್ಲಿ ನ್ಯೂಜಿಲೆಂಡ್ ಸವಾಲನ್ನು ಎದುರಿಸುವಲ್ಲಿ ಭಾರತ ವಿಫಲವಾಯಿತು. 3 ಪಂದ್ಯಗಳ ಸರಣಿಯನ್ನು 2-1 ಅಂತರಿಂದ ಕಿವೀಸ್ ಗೆದ್ದುಕೊಂಡಿತು.

ಈ ಸೋಲಿಗೆ ಬ್ಯಾಟಿಂಗ್ ಕ್ರಮಾಂಕದ ಅಗ್ರಸ್ಥಾನದಲ್ಲಿರುವ ರೋಹಿತ್ ಶರ್ಮಾ ಅವರ ಪರಿಣಾಮಕಾರಿಯಲ್ಲದ ಬ್ಯಾಟಿಂಗ್ ಯಿಂದ ಹಿಡಿದು ಬೌಲರ್ ಮತ್ತು ಬ್ಯಾಟರ್ ಆಗಿರುವ ರವೀಂದ್ರ ಜಡೇಜಾ ಅವರ ವೈಫಲ್ಯಗಳವರೆಗೆ ಅನೇಕ ಅನೇಕ ಚರ್ಚೆಗಳನ್ನು ಮಾಡಲಾಗುತ್ತಿದೆ.

ಭಾರತದ ಸೋಲಿಗೆ ಪ್ರಮುಖ ಕಾರಣಗಳು ಇಂತಿವೆ: ರೋಹಿತ್ ಶರ್ಮಾರ 'ಪವರ್‌ಪ್ಲೇ ಠುಸ್

ಪವರ್ ಪ್ಲೇ ನಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ ವಿಲನ್ ಆದರು. ಎಲ್ಲಾ ಮೂರು ಪಂದ್ಯಗಳಲ್ಲಿ ಇವರು ಹೋರಾಟ ನಡೆಸಿದ್ದೇ ಆಯಿತು. ಹೊಡಿ ಬಡಿ ಆಟಕ್ಕೆ ಹೆಸರಾದ ಇವರು, ಅದಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡುವಲ್ಲಿ ಎಡವಿದರು. ಸ್ಫೋಟಕ ಆರಂಭ ಒದಗಿಸಲು ವಿಫಲರಾದರು. ಆಕ್ರಮಣಕಾರಿ ಆಟಕ್ಕೆ ಮುಂದಾಗಲೇ ಇಲ್ಲ. ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಮೇಲೆ ಅಪಾರ ಒತ್ತಡವನ್ನು ಹಾಕಿದರು ಎಂದು ಸಹಾಯಕ ತರಬೇತುದಾರ ರಯಾನ್ ಟೆನ್ ಡೋಸ್ಕೇಟ್ ಅಭಿಪ್ರಾಯಪಟ್ಟಿದ್ದಾರೆ.

ರವೀಂದ್ರ ಜಡೇಜಾ ಕಾಣಿಸಲಿಲ್ಲ: ಭಾರತದ ಅತ್ಯಂತ ವಿಶ್ವಾಸಾರ್ಹ ಆಲ್‌ರೌಂಡರ್ ಎಂಬ ಖ್ಯಾತಿ ಪಡೆದಿರುವ ಜಡೇಜಾ ಈ ಸರಣಿಲ್ಲಿ ಬ್ಯಾಟ್ ಮತ್ತು ಬೌಲಿಂಗ್ ಎರಡರಲ್ಲೂ ಪ್ರಭಾವ ಬೀರದಿರುವುದು ಸರಣಿ ಸ್ಲಿಪ್‌ಗೆ ದೊಡ್ಡ ಕಾರಣಗಳಲ್ಲಿ ಒಂದಾಗಿದೆ. ಜಡೇಜಾ ಮಧ್ಯಮ ಓವರ್‌ಗಳಲ್ಲಿ ಪರಿಣಾಮಕಾರಿ ಅಲ್ಲದ ಬೌಲಿಂಗ್ ಮಾಡಿದರು. ವಿಶೇಷವಾಗಿ ನ್ಯೂಜಿಲೆಂಡ್ ಆಟಗಾರರಾದ ಡ್ಯಾರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್‌ನಿಂದ ರನ್ ಹೊಳೆ ಹರಿಯದಂತೆ ತಡೆಯುವಲ್ಲಿ ವಿಫಲರಾದರು.

ಅಂತಿಮ ODIನಲ್ಲಿ ಕೇವಲ 6 ಓವರ್‌ಗಳಲ್ಲಿ ವಿಕೆಟ್ ಪಡೆಯದೆಯೇ 41 ರನ್‌ಗಳನ್ನು ಬಿಟ್ಟುಕೊಟ್ಟರು. ಇದು ಸರಣಿ ಕೈ ಚೆಲ್ಲುವಲ್ಲಿ ಪ್ರಮುಖ ಕಾರಣವಾಯಿತು.

Rohit Sharma, Ravindra Jadeja
3rd ODI: ಕೊಹ್ಲಿಯ 85ನೇ ಶತಕ ವ್ಯರ್ಥ; ಏಕದಿನ ಸರಣಿ ಗೆದ್ದು ಬೀಗಿದ ನ್ಯೂಜಿಲೆಂಡ್

ಕೈಕೊಟ್ಟ ಮಧ್ಯಮ ಕ್ರಮಾಂಕ: ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಅವರಂತವರು ರನ್ ಗಳಿಸಲು ಹೆಣಗಾಡುತ್ತಿರುವಾಗ ಮಧ್ಯಮ ಕ್ರಮಾಂಕದಲ್ಲಿ ಯಾರೂ ಕೂಡಾ ಉತ್ತಮ ಆಟ ಆಡಲಿಲ್ಲ. ಇದರಿಂದಾಗಿ ನಿರ್ಣಾಯಕ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಕೇವಲ ಒಂಬತ್ತು ಓವರ್‌ಗಳ ಅಂತರದಲ್ಲಿ 28/0 ರಿಂದ 71/4 ಕ್ಕೆ ಕುಸಿಯಿತು.

ಕೈಲ್ ಜೇಮಿಸನ್ ಮತ್ತು ಝಾಕ್ ಫೌಲ್ಕ್ಸ್ ಬೌಲಿಂಗ್ ಎದುರಿಸುವಲ್ಲಿ ಅಯ್ಯರ್ ಮತ್ತು ರಾಹುಲ್ ವಿಫಲವಾದರು. ಇದರಿಂದಾಗಿ ವಿರಾಟ್ ಕೊಹ್ಲಿ ಅವರ ಅದ್ಭುತ 124 ಏಕಾಂಗಿ ಪ್ರಯತ್ನವು ವ್ಯರ್ಥವಾಯಿತು. ನಿತೀಶ್ ಕುಮಾರ್ ರೆಡ್ಡಿ ಅವರು ತಮ್ಮ 43 ಎಸೆತಗಳಲ್ಲಿ 52 ರನ್ ಗಳಿಸಿ ನೆರವಾಗಲು ಯತ್ನಿಸಿದರು. ಆದರೆ ಭಾರತಕ್ಕೆ ಇತರರ ಅಗತ್ಯವಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com