'9 ರಲ್ಲಿ 5 ಏಕದಿನ ಪಂದ್ಯಗಳಲ್ಲಿ ಸೋಲು': ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ವಿರುದ್ಧ ಅಜಿಂಕ್ಯ ರಹಾನೆ ಕಿಡಿ

ಇದು ನ್ಯೂಜಿಲೆಂಡ್ ವಿರುದ್ಧದ ತವರಿನಲ್ಲಿ ಕಂಡ ಮೊದಲ ಏಕದಿನ ಸರಣಿ ಸೋಲು ಮತ್ತು ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧದ ಹಿಂದಿನ ಸೋಲುಗಳ ನಂತರ ಗೌತಮ್ ಗಂಭೀರ್ ಅಡಿಯಲ್ಲಿ ಭಾರತ ಅನುಭವಿಸಿದ ಮೂರನೇ ಸೋಲು.
Ajinkya Rahane
ಅಜಿಂಕ್ಯ ರಹಾನೆ
Updated on

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಸೋಲಿನ ನಂತರ ಮುಖ್ಯ ಕೋಚ್ ಗೌತಮ್ ಗಂಭೀರ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. 1-0 ಮುನ್ನಡೆ ಸಾಧಿಸಿದ ನಂತರ, ಶುಭಮನ್ ಗಿಲ್ ಮತ್ತು ತಂಡವು ಬಲವಾದ ಆರಂಭ ಪಡೆದುಕೊಳ್ಳುವಲ್ಲಿ ವಿಫಲವಾಯಿತು ಮತ್ತು ಅಂತಿಮವಾಗಿ ಸರಣಿಯನ್ನು 1-2 ಅಂತರದಿಂದ ಕಳೆದುಕೊಂಡಿತು. ಇಂದೋರ್‌ನಲ್ಲಿ ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯವು ಅತ್ಯಂತ ನೋವಿನಿಂದ ಕೂಡಿದ ಸೋಲು ಎಂದು ಸಾಬೀತಾಯಿತು. ನ್ಯೂಜಿಲೆಂಡ್ ನೀಡಿದ್ದ 338 ರನ್‌ಗಳ ಗುರಿ ಬೆನ್ನಟ್ಟಿದ ಭಾರತ 41 ರನ್‌ಗಳ ಅಂತರದಿಂದ ಸೋತಿತು. ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ 124 ರನ್‌ಗಳನ್ನು ಗಳಿಸಿದರೂ, ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.

ಇದು ನ್ಯೂಜಿಲೆಂಡ್ ವಿರುದ್ಧದ ತವರಿನಲ್ಲಿ ಕಂಡ ಮೊದಲ ಏಕದಿನ ಸರಣಿ ಸೋಲು ಮತ್ತು ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧದ ಹಿಂದಿನ ಸೋಲುಗಳ ನಂತರ ಗೌತಮ್ ಗಂಭೀರ್ ಅಡಿಯಲ್ಲಿ ಭಾರತ ಅನುಭವಿಸಿದ ಮೂರನೇ ಸೋಲು. ಹೆಚ್ಚುತ್ತಿರುವ ಟೀಕೆಗಳ ನಡುವೆ, ಭಾರತದ ಅನುಭವಿ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಗಂಭೀರ್‌ಗೆ ಒಂದು ಪ್ರಮುಖ ಸಲಹೆ ನೀಡಿದ್ದಾರೆ.

ಕ್ರಿಕ್‌ಬಜ್‌ನಲ್ಲಿ ಮಾತನಾಡಿದ ರಹಾನೆ, ಪ್ಲೇಯಿಂಗ್ XI ನಲ್ಲಿ ಆಗಾಗ್ಗೆ ಮಾಡುವ ಬದಲಾವಣೆಗಳೇ ಭಾರತ ತಂಡದ ಸಂಕಷ್ಟಗಳಿಗೆ ಪ್ರಮುಖ ಕಾರಣವಾಗಿದೆ. 2027ರ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಆಟಗಾರರಿಗೆ ತಮ್ಮ ಪಾತ್ರಗಳ ಬಗ್ಗೆ ಸ್ಪಷ್ಟತೆ ಮತ್ತು ಭದ್ರತೆ ಒದಗಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.

'ನೋಡಿ, ಕಠಿಣ ಪ್ರಶ್ನೆಗಳು ಇರುತ್ತವೆ. ಕಳೆದ ಒಂಬತ್ತು ಪಂದ್ಯಗಳಲ್ಲಿ ಭಾರತ ಐದು ಏಕದಿನ ಪಂದ್ಯಗಳನ್ನು ಸೋತಿದೆ. ತಂಡದೊಳಗಿನ ಹಲವಾರು ಬದಲಾವಣೆಗಳಿಂದಾಗಿಯೇ ಇದು ಸಂಭವಿಸಿದೆ. ಮುಂಬರುವ ವಿಶ್ವಕಪ್‌ಗಾಗಿ, ಆಟಗಾರರಿಗೆ ಸ್ಥಿರತೆ ಮತ್ತು ಯಾರು ಆಡುತ್ತಾರೆ ಎಂಬುದರ ಕುರಿತು ಸ್ಪಷ್ಟ ಸಂವಹನದ ಅಗತ್ಯವಿದೆ. ಇದರಿಂದ ಅವರು ಆತ್ಮವಿಶ್ವಾಸದಿಂದ ಪ್ರದರ್ಶನ ನೀಡಬಹುದು' ಎಂದು ರಹಾನೆ ಹೇಳಿದರು.

Ajinkya Rahane
ನ್ಯೂಜಿಲೆಂಡ್ ವಿರುದ್ಧ ಸೋಲು: ತವರಿನಲ್ಲೇ ಭಾರತಕ್ಕೆ ಮತ್ತೆ ಮುಖಭಂಗ; ಗೌತಮ್ ಗಂಭೀರ್ ವಿರುದ್ಧ ಸಿಡಿದೆದ್ದ ಫ್ಯಾನ್ಸ್!

'ಹೌದು, ಕಠಿಣ ಪ್ರಶ್ನೆಗಳನ್ನು ಕೇಳಲಾಗುತ್ತದೆ, ಅದು ತುಂಬಾ ಸಹಜ ಎಂದು ನಾನು ಭಾವಿಸುತ್ತೇನೆ. ಏಕೆಂದರೆ, ಅಭಿಮಾನಿಗಳು ಭಾರತೀಯ ಕ್ರಿಕೆಟ್‌ನೊಂದಿಗೆ ತುಂಬಾ ಸಂಪರ್ಕ ಹೊಂದಿದ್ದಾರೆ. ಎಲ್ಲರೂ ಭಾರತ ಉತ್ತಮವಾಗಿ ಆಡಬೇಕೆಂದು ಬಯಸುತ್ತಾರೆ. ಪಂದ್ಯಗಳನ್ನು ಗೆಲ್ಲುವುದು ಮತ್ತು ಸರಣಿಯನ್ನು ಗೆಲ್ಲುವುದು, ವಿಶೇಷವಾಗಿ ತವರಿನಲ್ಲಿ ಉತ್ತಮ ಪ್ರದರ್ಶನ ನೀಡಲಿ ಎಂದೇ ಬಯಸುತ್ತಾರೆ. ಭಾರತ ನ್ಯೂಜಿಲೆಂಡ್ ವಿರುದ್ಧ ಆಡಿದಾಗ, ಅವರು ಎದುರಿಸಿದ ತಂಡವು ಅವರ ಪೂರ್ಣ ಪ್ರಮಾಣದ ತಂಡವಾಗಿರಲಿಲ್ಲ (ಬಹುಶಃ ನ್ಯೂಜಿಲೆಂಡ್ ಎ ಅಥವಾ ಬಿ ತಂಡ). ಇದನ್ನು ಗಮನಿಸಿದರೆ, 3-0 ಸರಣಿ ಫಲಿತಾಂಶದೊಂದಿಗೆ ಭಾರತ ಆರಾಮವಾಗಿ ಗೆಲ್ಲುತ್ತದೆ ಎಂದು ಜನರು ನಿರೀಕ್ಷಿಸಿದ್ದರು' ಎಂದರು.

ಭಾರತದ ಮುಂದಿನ ಏಕದಿನ ಪಂದ್ಯಕ್ಕೆ ಕನಿಷ್ಠ ಆರು ತಿಂಗಳು ಬಾಕಿ ಇದೆ. ಈ ವಿರಾಮದ ಸಮಯದಲ್ಲಿ, ಆಡಳಿತ ಮಂಡಳಿಯು ದೀರ್ಘಾವಧಿಯ ಸೆಟಪ್‌ನಲ್ಲಿ ತಮಗೆ ಬೇಕಾದ ಆಟಗಾರರನ್ನು ನಿರ್ಣಯಿಸಿ, ಬೆಂಬಲಿಸಬೇಕು ಎಂದು ರಹಾನೆ ಸಲಹೆ ನೀಡಿದರು.

'ಆದರೆ, ನ್ಯೂಜಿಲೆಂಡ್ ಆಡಿದ ರೀತಿ ಅದ್ಭುತವಾಗಿತ್ತು. ಆದ್ದರಿಂದ ಪ್ರಶ್ನೆಗಳು ಇರುತ್ತವೆ, ಅವು ಕಠಿಣ ಪ್ರಶ್ನೆಗಳಾಗಿರುತ್ತವೆ. ಭಾರತದ ದೃಷ್ಟಿಕೋನದಿಂದ, ಅವರು ಪ್ರಕ್ರಿಯೆಯನ್ನು ಅನುಸರಿಸಬೇಕು ಎಂದು ನಾನು ಭಾವಿಸುತ್ತೇನೆ. ನೀವು ಯಾವ ಆಟಗಾರರನ್ನು ಬೆಂಬಲಿಸುತ್ತೀರಿ ಎಂಬುದನ್ನು ಗುರುತಿಸಿ, ಏಕೆಂದರೆ ಆರು ತಿಂಗಳ ನಂತರ ನೀವು ಮತ್ತೆ ಏಕದಿನ ಕ್ರಿಕೆಟ್ ಆಡಲಿದ್ದೀರಿ. ನಿಮಗೆ ಸಮಯವಿದೆ. ಟಿ20ಗಳ ನಂತರ, ಏನೂ ಇಲ್ಲ' ಎಂದು ರಹಾನೆ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com