RCB ಖರೀದಿಗೆ 'ಆದಾರ್‌ ಪೂನಾವಾಲಾ' ತೀವ್ರ ಕಸರತ್ತು!

ಯುನೈಟಡ್‌ ಸ್ಪಿರಿಟ್ಸ್‌ ಲಿ. (ಯುಎಸ್‌ಎಲ್‌) ಒಡೆತನದಲ್ಲಿರುವ ಆರ್ ಸಿಬಿ ತಂಡವನ್ನು 2 ಬಿಲಿಯನ್ ಡಾಲರ್ ಗೆ ಮಾರಾಟಕ್ಕೆ ಇಡಲಾಗಿದೆ ಎಂದು ವರದಿಗಳು ಹೇಳಿವೆ.
Adar Poonawalla
ಆದಾರ್‌ ಪೂನಾವಾಲಾ
Updated on

ಮುಂಬೈ: ಔಷಧ ತಯಾರಕ ಕಂಪನಿ ಸೀರಮ್‌ ಇನ್ಸ್‌ಟಿಟ್ಯೂಟ್‌ನ ಸಿಇಒ ಆದಾರ್‌ ಪೂನವಾಲಾ ಐಪಿಎಲ್ ಪ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಖರೀದಿಸಲು ತೀವ್ರ ಪ್ರಯತ್ನ ನಡೆಸುತ್ತಿರುವುದು ದೃಢಪಟ್ಟಿದೆ.

ಯುನೈಟಡ್‌ ಸ್ಪಿರಿಟ್ಸ್‌ ಲಿ. (ಯುಎಸ್‌ಎಲ್‌) ಒಡೆತನದಲ್ಲಿರುವ ಆರ್ ಸಿಬಿ ತಂಡವನ್ನು 2 ಬಿಲಿಯನ್ ಡಾಲರ್ ಗೆ ಮಾರಾಟಕ್ಕೆ ಇಡಲಾಗಿದೆ ಎಂದು ವರದಿಗಳು ಹೇಳಿವೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಗುರುವಾರ ಫೋಸ್ಟ್ ಮಾಡಿರುವ ಆದಾರ್‌ ಪೂನವಾಲಾ, ಐಪಿಎಲ್ ನ ಅತ್ಯುತ್ತಮ ತಂಡಗಳಲ್ಲಿ ಒಂದಾದ RCB ಖರೀದಿಸಲು ಮುಂದಿನ ಕೆಲವು ತಿಂಗಳು ಬಲವಾದ ಮತ್ತು ಸ್ಪರ್ಧಾತ್ಮಕವಾದ ಪ್ರಯತ್ನ ನಡೆಸುವುದಾಗಿ ಬರೆದುಕೊಂಡಿದ್ದಾರೆ.

ಪೂನಾವಾಲಾ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ "ಸರಿಯಾದ ಮೌಲ್ಯಮಾಪನದಲ್ಲಿ, ಆರ್‌ಸಿಬಿ ಒಂದು ಉತ್ತಮ ತಂಡ. ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಕುತೂಹಲವನ್ನು ಹೆಚ್ಚಿಸಿದ್ದು, ಇದೀಗ ಮತ್ತೆ ಪೋಸ್ಟ್ ಮಾಡಿದ್ದು, ತಂಡವನ್ನು ಖರೀದಿಸಲು ತೀವ್ರ ಪ್ರಯತ್ನ ನಡೆಸುತ್ತಿರುವುದಾಗಿ ಖಚಿತಪಡಿಸಿದ್ದಾರೆ.

ಇತ್ತೀಚಿಗೆ ಮಾಜಿ ಐಪಿಎಲ್ ಕಮಿಷನರ್ ಲಲಿತ್ ಮೋದಿ, ಆರ್ ಸಿಬಿ ಪ್ರಮುಖ ಹೂಡಿಕೆ ಮಾಡಬಹುದಾದ ಪ್ರಾಂಚೈಸಿ ಎಂದು ಹೇಳುವ ಮೂಲಕ ಜಾಗತಿಕ ಮಟ್ಟದಲ್ಲಿ ಪ್ರಾಂಚೈಸಿಯ ಮೌಲ್ಯವನ್ನು ಹೆಚ್ಚಿಸಿದ್ದರು. ಒಂದು ವೇಳೆ $2 ಶತಕೋಟಿಗೆ ಸೇಲ್ ಆದರೆ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಹೆಚ್ಚಿನ ಹಣ ಹೊಂದಿರುವ ತಂಡವಾಗಲಿದೆ. ಸಂಭಾವ್ಯ ಮಾರಾಟದ ಮೇಲ್ವಿಚಾರಣೆಗಾಗಿ global investment bank Citi ಯನ್ನು ವಹಿವಾಟು ಸಲಹೆಗಾರರಾಗಿ ನೇಮಿಸಲಾಗಿದೆ ಎಂದು ವರದಿಗಳು ಹೇಳುತ್ತವೆ.

ಒಂದು ವೇಳೆ 2 ಬಿಲಿಯನ್ ಡಾಲರ್ ಗೆ ಆರ್ ಸಿಬಿ ಖರೀದಿಯಾದರೆ RPSG ಗ್ರೂಪ್‌ನಿಂದ ಇತ್ತೀಚಿಗೆ 7,090 ಕೋಟಿ ರೂ.ಗೆ ಖರೀದಿಸಿದ ಫ್ರ್ಯಾಂಚೈಸ್ ಲಕ್ನೋ ಸೂಪರ್ ಜೈಂಟ್ಸ್‌ಗಿಂತ ಎರಡು ಪಟ್ಟು ಹೆಚ್ಚು ಮೌಲ್ಯ ಹೊಂದಿರುತ್ತದೆ. RCB ಅನ್ನು ಮೂಲತಃ 2008 ರ IPL ಹರಾಜಿನಲ್ಲಿ ವಿಜಯ್ ಮಲ್ಯರ UB ಗ್ರೂಪ್ ಸುಮಾರು $111.6 ಮಿಲಿಯನ್‌ ಡಾಲರ್ ಗೆ ಖರೀದಿಸಿತು. ಮುಂದಿನ ದಶಕದಲ್ಲಿ ಯುನೈಟಡ್‌ ಸ್ಪಿರಿಟ್ಸ್‌ ಲಿ ಆರ್ ಸಿಬಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು.

RCB ಐಪಿಎಲ್‌ನ ಹಾಲಿ ಚಾಂಪಿಯನ್ ಆಗಿದ್ದು, ಕಳೆದ ವರ್ಷ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ (PBKS) ಅನ್ನು ಸೋಲಿಸಿದ ನಂತರ ತನ್ನ ಚೊಚ್ಚಲ ಪ್ರಶಸ್ತಿ ಎತ್ತಿಹಿಡಿದಿತ್ತು.

Adar Poonawalla
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಪಂದ್ಯ ನಡೆಸಲು ನಾವು ರೆಡಿ, ಆದರೆ RCB ಹಿಂಜರಿಯುತ್ತಿದೆ: ವೆಂಕಟೇಶ್ ಪ್ರಸಾದ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com