

ಗುವಾಹಟಿ: ನ್ಯೂಜಿಲ್ಯಾಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ 60 ಎಸೆತಗಳಲ್ಲಿ 155 ರನ್ ಬಾರಿಸುವ ಮೂಲಕ ಭಾರತ ದಾಖಲೆಯ ಗೆಲುವು ಸಾಧಿಸಿದೆ.
ಒಂದೇ ಪಂದ್ಯದಲ್ಲಿ ಹಲವು ದಾಖಲೆ ಬರೆದ ಭಾರತ
* ಭಾರತ ಕೇವಲ 3.1 ಓವರ್‌ಗಳಲ್ಲಿ 50 ರನ್ ತಲುಪಿದೆ. ಇದು ಭಾರತದ ಅತ್ಯಂತ ವೇಗದ ಟಿ20 ಅರ್ಧಶತಕ. 2023ರಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 3.4 ಓವರ್‌ಗಳಲ್ಲಿ ಅರ್ಧಶತಕ ಬಾರಿಸಿತ್ತು.
* ಭಾರತವು ಸತತ ಐದನೇ ಟಿ20 ಸರಣಿಯಲ್ಲಿ ನ್ಯೂಜಿಲೆಂಡ್ ಅನ್ನು ಸೋಲಿಸಿ, ಅಜೇಯ ಮುನ್ನಡೆ ಸಾಧಿಸಿದೆ. ನ್ಯೂಜಿಲೆಂಡ್ ಕೊನೆಯ ಬಾರಿಗೆ 2019ರಲ್ಲಿ ತಮ್ಮ ತವರು ನೆಲದಲ್ಲಿ ಭಾರತವನ್ನು ಸೋಲಿಸಿತು. ನ್ಯೂಜಿಲ್ಯಾಂಡ್ ಭಾರತದಲ್ಲಿ ಒಂದೇ ಒಂದು ಟಿ20 ಸರಣಿಯನ್ನು ಗೆದ್ದಿಲ್ಲ.
* ಟೀಮ್ ಇಂಡಿಯಾ ಕೊನೆಯ ಬಾರಿಗೆ ಡಿಸೆಂಬರ್ 2023ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 2-2 ಅಂತರದಲ್ಲಿ ಸರಣಿಯನ್ನು ಡ್ರಾ ಮಾಡಿಕೊಂಡಿತ್ತು. ಅಂದಿನಿಂದ, ತಂಡವು 9 ದ್ವಿಪಕ್ಷೀಯ ಸರಣಿಗಳು ಮತ್ತು 2 ಪಂದ್ಯಾವಳಿಗಳನ್ನು ಗೆದ್ದಿದೆ. ಭಾರತದ ಕೊನೆಯ ಸರಣಿ ಸೋಲು ಜುಲೈ 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧವಾಗಿತ್ತು. ಅಂದಿನಿಂದ ಭಾರತ ಸತತ 15 ಟಿ20 ಸರಣಿಗಳಲ್ಲಿ ಅಜೇಯವಾಗಿ ಉಳಿದಿದೆ.
ನ್ಯೂಜಿಲ್ಯಾಂಡ್ ವಿರುದ್ಧದ ಮೂರನೇ ಟಿ20 ಗೆಲ್ಲುವ ಮೂಲಕ, ಭಾರತ 5 ಪಂದ್ಯಗಳ ಸರಣಿಯಲ್ಲಿ ಅಜೇಯ 3-0 ಮುನ್ನಡೆ ಸಾಧಿಸಿದ್ದು ಸರಣಿ ಕೈವಶ ಮಾಡಿಕೊಂಡಿದೆ. ನಾಲ್ಕನೇ ಪಂದ್ಯ ಜನವರಿ 28ರಂದು ವಿಶಾಖಪಟ್ಟಣದಲ್ಲಿ ನಡೆಯಲಿದೆ.
Advertisement