ನ್ಯೂಜಿಲೆಂಡ್ ವಿರುದ್ಧ ಟಿ20ಯಲ್ಲಿ ಅತೀ ದೊಡ್ಡ ಜಯ, ಹಲವು ದಾಖಲೆ ಬರೆದ ಭಾರತ! ಪಾಕ್ ರೆಕಾರ್ಡ್ ಸಮ!

ಭಾರತ 8 ವಿಕೆಟ್‌ಗಳ ಗೆಲುವು ಸಾಧಿಸಿದ್ದು, ಐದು ಪಂದ್ಯಗಳ ಟಿ20 ಸರಣಿಯನ್ನು ಇನ್ನೂ 2 ಪಂದ್ಯ ಬಾಕಿ ಇರುವಂತೆಯೇ ತನ್ನದಾಗಿಸಿಕೊಂಡಿದೆ.
Team India Creates Many Records After Huge win Against New Zealand
ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್
Updated on

ಗುವಾಹತಿ: ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ 8 ವಿಕೆಟ್ ಗಳ ಅಮೋಘ ಜಯ ಭಾರಿಸಿದ ಭಾರತ ತಂಡ ಹಲವು ದಾಖಲೆಗಳ ಬರೆದಿದೆ.

ಗುವಾಹಟಿಯ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯವು ಸಂಪೂರ್ಣವಾಗಿ ಅಭಿಷೇಕ್ ಶರ್ಮಾ ಅವರದ್ದಾಗಿತ್ತು. ಭಾರತ 8 ವಿಕೆಟ್‌ಗಳ ಗೆಲುವು ಸಾಧಿಸಿದ್ದು, ಐದು ಪಂದ್ಯಗಳ ಟಿ20 ಸರಣಿಯನ್ನು ಇನ್ನೂ 2 ಪಂದ್ಯ ಬಾಕಿ ಇರುವಂತೆಯೇ ತನ್ನದಾಗಿಸಿಕೊಂಡಿದೆ.

154 ರನ್‌ಗಳ ಗುರಿಯನ್ನು ಬೆನ್ನುಹತ್ತಿದ ಭಾರತ ತಂಡ ಕೇವಲ 10 ಓವರ್‌ಗಳಲ್ಲೇ ಬೆನ್ನಟ್ಟಿತು. ಆ ಮೂಲಕ ಇನ್ನೂ 10 ಓವರ್ ಗಳು ಬಾಕಿ ಇರುವಂತೆಯೇ ಭಾರತ 8 ವಿಕೆಟ್ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು.

Team India Creates Many Records After Huge win Against New Zealand
ತೂಚ್... 'ಕ್ರಿಕೆಟ್ ಆಡಿ ಅಂದ್ರೆ ವಿಡಿಯೋ ಗೇಮ್ ಆಡ್ತೀರಲ್ರೋ'; ಅಭಿಷೇಕ್ ಶರ್ಮಾ ಬ್ಯಾಟ್ ಚೆಕ್ ಮಾಡಿದ ಕಿವೀಸ್ ಆಟಗಾರರು!

ಅತೀ ಹೆಚ್ಚು ಎಸೆತಗಳ ಅಂತರದಲ್ಲಿ ಜಯ

ನಿನ್ನೆಯ ಪಂದ್ಯದಲ್ಲಿ ಭಾರತ ತಂಡ ಇನ್ನೂ 10 ಓವರ್ ಗಳು ಬಾಕಿ ಇರುವಂತೆಯೇ ಜಯಭೇರಿ ಭಾರಿಸಿದ್ದು, ಅಂದರೆ 150 ಅಥವಾ ಅದಕ್ಕಿಂತ ಹೆಚ್ಚಿನ ರನ್ ಗಳನ್ನು ಬೆನ್ನತ್ತುವಾಗ ಇನ್ನೂ 60 ಎಸೆತಗಳು ಬಾಕಿ ಇರುವಂತೆಯೇ ಜಯ ಗಳಿಸಿದ್ದು ಇದೇ ಮೊದಲು.

ಈ ಹಿಂದೆ 2024ರಲ್ಲಿ ವಿಂಡೀಸ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಇನ್ನೂ 37 ಎಸೆತ ಬಾಕಿ ಇರುವಂತೆ ಜಯಭೇರಿ ಭಾರಿಸಿತ್ತು. ಇದು ಇಷ್ಟು ದಿನ ಅಗ್ರಸ್ಥಾನದಲ್ಲಿತ್ತು. ಇದೀಗ ಭಾರತ ಈ ದಾಖಲೆಯನ್ನು ಹಿಂದಿಕ್ಕಿದೆ.

ಅಂತೆಯೇ ನ್ಯೂಜಿಲೆಂಡ್ ವಿರುದ್ಧ ಯಾವುದೇ ತಂಡ 10 ಓವರ್ ನಲ್ಲೇ ಗುರಿ ಬೆನ್ನಟ್ಟಿರಲಿಲ್ಲ.

Winning with most balls to spare vs a FM team chasing 150+ targets

  • 60 balls Ind vs NZ Guwahati 2026 *

  • 37 balls WI vs SA Kingston 2024

  • 33 balls Eng vs Pak Lahore 2022

  • 32 balls SA vs Eng Joburg 2016

Also, the biggest margin of win against NZ chasing any target no side has chased down a target inside 10 overs vs them.

ಸತತ 11ನೇ ಟಿ20 ಸರಣಿ ಜಯ, ಪಾಕ್ ದಾಖಲೆ ಸಮ

ಇನ್ನು ಭಾರತಕ್ಕೆ ಇದು 11ನೇ ಟಿ20 ಸರಣಿ ಜಯವಾಗಿದೆ. 2024ರಲ್ಲಿ ಆರಂಭವಾದ ಭಾರತದ ಟಿ20 ಸರಣಿ ಜಯ ಹಾಲಿ ಸರಣಿ ಸೇರಿ 11 ಸರಣಿ ಜಯವಾಗಿದೆ. ಈ ಹಿಂದೆ ಇದೇ ರೀತಿಯ ದಾಖಲೆ ಪಾಕಿಸ್ತಾನ ಕೂಡ ಮಾಡಿತ್ತು. 2016ರಿಂದ 2018ರವರೆಗೆ ಪಾಕಿಸ್ತಾನ 11 ಟಿ20 ಸರಣಿ ಜಯಿಸಿತ್ತು.

Most consecutive T20I series wins (FM teams)

  • 11* India (2024 – ongoing)

  • 11 Pakistan (2016-18)

  • 7 India (2017-18)

  • 6 India (2019-21)

Team India Creates Many Records After Huge win Against New Zealand
ಯುವರಾಜ್ ಸಿಂಗ್ 'ವಿಶ್ವ ದಾಖಲೆ' ಮುರಿಯುವಲ್ಲಿ ಜಸ್ಟ್ ಮಿಸ್! ಅಭಿಷೇಕ್ ಶರ್ಮಾ ಹೇಳಿದ್ದೇನು?

ತವರಿನಲ್ಲಿ ಅತೀ ಹೆಚ್ಚು ಸರಣಿ ಜಯ

ಇದೇ ವೇಳೆ ಭಾರತ ಈ ಸರಣಿ ಗೆಲುವಿನ ಬಳಿಕ ತವರಿನಲ್ಲಿ ಅತೀ ಹೆಚ್ಚು ಸರಣಿ ಜಯ ಗಳಿಸಿದ ತಂಡ ಎಂಬ ಕೀರ್ತಿಗೆ ಭಾರತ ಭಾಜನವಾಗಿದೆ. 2022ರಿಂದ 2026ರವರೆಗೂ ಭಾರತ 10 ಟಿ20 ಸರಣಿಗಳನ್ನು ಭಾರತದಲ್ಲಿ ಜಯಿಸಿದೆ. 2ನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ಇದ್ದು 2006ರಿಂದ 2010ರವರೆಗೂ 8 ತವರು ಸರಣಿಗಳನ್ನು ಜಯಿಸಿದೆ.

Most consecutive series wins at home (FM teams)

  • 10 India (2022-26) *

  • 8 Australia (2006-10)

  • 7 India (2019-22)

  • 5 Pakistan (2008-18)

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com