

ನವದೆಹಲಿ: ಭಾರತೀಯ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ 45ನೇ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗರಾದ ಸುರೇಶ್ ರೈನಾ, ಮುನಾಫ್ ಪಟೇಲ್ ಮತ್ತು ಆಕಾಶ್ ಚೋಪ್ರಾ ಶುಭಾಶಯ ಕೋರಿದ್ದಾರೆ.
ಧೋನಿ ಅವರ ಕ್ರಿಕೆಟ್ ಜೀವನ ಸ್ಪೂರ್ತಿದಾಯಕವಾಗಿದೆ. ಹಿಂದೊಮ್ಮೆ ಟಿಕೆಟ್ ಕಲೆಕ್ಟರ್ ಆಗಿ ಕೆಲಸ ಮಾಡಿದ್ದ ಅವರು, ಭಾರತಕ್ಕೆ ಹೆಚ್ಚಿನ ಟ್ರೋಫಿ ತಂದುಕೊಟ್ಟ ಯಶಸ್ವಿ ನಾಯಕರಾಗಿದ್ದರು. ಅವರ ನಾಯಕತ್ವದ ತಂಡ 2007ರ ಐಸಿಸಿ ವಿಶ್ವಕಪ್, 2011 ಐಸಿಸಿ ವಿಶ್ವಕಪ್, 2013 ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು.
ಅಸಂಖ್ಯಾತ ಜನರಿಗೆ ಸ್ಫೂರ್ತಿ ಮತ್ತು ಅಸಂಖ್ಯಾತ ದಾಖಲೆಯನ್ನು ಬಿಟ್ಟು ಹೋಗಿದ್ದಕ್ಕಾಗಿ ಸುರೇಶ್ ರೈನಾ ಅವರು ಧೋನಿಯನ್ನು ಶ್ಲಾಘಿಸಿದ್ದಾರೆ. ಧೋನಿ ಜೊತೆ ಆಡುವುದನ್ನು ಅವರು ನೆನಪಿಸಿಕೊಂಡಿಸಿದ್ದಾರೆ.
ಜನ್ಮದಿನದ ಶುಭಾಶಯಗಳು, ಮಹಿ ಭಾಯ್! ನಿಮ್ಮ ದಾಖಲೆಯನ್ನು ವ್ಯಾಖ್ಯಾನಿಸಲಾಗುವುದಿಲ್ಲ, ಆದರೆ ಅಸಂಖ್ಯಾತ ಜನರಿಗೆ ನೀವು ಸ್ಫೂರ್ತಿಯಾಗಿದ್ದೀರಿ. ನಿಮ್ಮೊಂದಿಗೆ ಈ ಜರ್ನಿ ಹಂಚಿಕೊಂಡಿದ್ದಕ್ಕೆ ಸಂತೋಷವಾಗುತ್ತಿದೆ. ಯಾವಾಗಲೂ ಸಂತೋಷ, ಉತ್ತಮ ಆರೋಗ್ಯ ಹಾಗೂ ಸುಖವಾಗಿರಿ ಎಂದು ರೈನಾ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
ಇನ್ನೂ ಆಕಾಶ್ ಚೋಪ್ರಾ, "ಥಾಲಾ" ಎಂದು ಕರೆಯುವ ಮೂಲಕ ಶುಭ ಹಾರೈಸಿದ್ದಾರೆ. ಪಂದ್ಯಗಳು ಮತ್ತು ಟ್ರೋಫಿಗಳನ್ನು ಗೆದ್ದಿದ್ದಲ್ಲದೆ, ಕ್ರಿಕೆಟ್‌ನ ಇಡೀ ಒಂದು ಯುಗವನ್ನೇ ಗೆದಿದ್ದಾರೆ ಎಂದು ಅವರು ಶ್ಲಾಘಿಸಿದ್ದಾರೆ. ಕೆಲವು ಆಟಗಾರರು ಪಂದ್ಯ ಗೆಲ್ತಾರೆ, ಕೆಲವರು ಟ್ರೋಫಿ ಗೆಲ್ತಾರೆ, ಎಂಎಸ್ ಧೋನಿ ಒಂದು ಯುಗವನ್ನೆ ಗೆದಿದ್ದಾರೆ ಎಂದು ಚೋಪ್ರಾ ಬರೆದಿದ್ದಾರೆ.