'ಇನ್ನೇಕೆ ತಡ, ಲಗೇಜ್ ಪ್ಯಾಕ್ ಮಾಡಿ ಮನೆಗೆ ಹೊರಡಿ': ಟೀಂ ಇಂಡಿಯಾ ಸ್ಟಾರ್ ಆಟಗಾರನಿಗೆ ಮೊಹಮ್ಮದ್ ಕೈಫ್ ಸಂದೇಶ!

ಜಸ್ಪ್ರೀತ್ ಬುಮ್ರಾ, ವಾಷಿಂಗ್ಟನ್ ಸುಂದರ್ ಮತ್ತು ವರುಣ್ ಚಕ್ರವರ್ತಿ ಅವರಂತಹ ಪ್ರಮುಖ ಆಟಗಾರರು ಈಗಾಗಲೇ ತಂಡದಲ್ಲಿ ಇಲ್ಲದಿರುವಾಗಲೂ ಕುಲದೀಪ್ ಅವರನ್ನು ಕೈಬಿಟ್ಟಿರುವ ಬಗ್ಗೆ ಕೈಫ್ ಆಶ್ಚರ್ಯ ವ್ಯಕ್ತಪಡಿಸಿದರು.
Team India Players
ಟೀಂ ಇಂಡಿಯಾ ಆಟಗಾರರು
Updated on

ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯಕ್ಕೆ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಪ್ಲೇಯಿಂಗ್ XIನಿಂದ ಕೈಬಿಟ್ಟಿದ್ದಕ್ಕಾಗಿ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಸರಣಿಯಲ್ಲಿ ಒಂದು ಪಂದ್ಯವನ್ನೂ ಆಡದ ಕುಲದೀಪ್ ಅವರನ್ನು ಗೌತಮ್ ಗಂಭೀರ್ ನಡೆಸಿಕೊಂಡ ರೀತಿಯನ್ನು ಕೈಫ್ ಟೀಕಿಸಿದರು. ತಂಡದ ಆಡಳಿತ ಮಂಡಳಿ ಅವರನ್ನು ನಿರ್ಲಕ್ಷಿಸುವುದನ್ನು ಮುಂದುವರಿಸಿದರೆ ಎಡಗೈ ಸ್ಪಿನ್ನರ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಅವರ ನಿವೃತ್ತಿಯನ್ನು ಪರಿಗಣಿಸಬೇಕು ಎಂದು ಸೂಚಿಸಿದರು.

ಈ ಕುರಿತು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, 'ಕುಲದೀಪ್ ಯಾದವ್ ತಮ್ಮ ವಸ್ತುಗಳನ್ನು ಪ್ಯಾಕ್ ಮಾಡಿಕೊಂಡು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಬಗ್ಗೆ ಯೋಚಿಸಬೇಕು. ಇಂದು ತಂಡದಲ್ಲಿ ಜಸ್ಪ್ರೀತ್ ಬುಮ್ರಾ, ವಾಷಿಂಗ್ಟನ್ ಸುಂದರ್ ಅಥವಾ ವರುಣ್ ಚಕ್ರವರ್ತಿ ಇರಲಿಲ್ಲವಾದರೂ, ಕುಲದೀಪ್ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗಲಿಲ್ಲ. ಲಾರ್ಡ್ಸ್‌ನಲ್ಲಿ ಭಾರತದ ಬೌಲಿಂಗ್ ವಿಭಾಗವು ಏಕಮುಖವಾಗಿದ್ದು, ಅದರಲ್ಲಿ ವೈವಿಧ್ಯತೆಯ ಕೊರತೆಯಿದೆ. ಎಡಗೈ ರಿಸ್ಟ್ ಸ್ಪಿನ್ನರ್ ಒಬ್ಬರು ತಂಡಕ್ಕೆ ಉಪಯುಕ್ತವಾಗುತ್ತಿದ್ದರು. ಅವರು 118 ಏಕದಿನ ಪಂದ್ಯಗಳಲ್ಲಿ 194 ವಿಕೆಟ್‌ಗಳನ್ನು ಪಡೆದಿದ್ದಾರೆ ಎಂಬುದನ್ನು ನೆನಪಿಡಿ. ಆದರೆ, ಈ ಅಂಕಿಅಂಶಗಳಿಗೆ ಯಾವುದೇ ಮಹತ್ವವಿಲ್ಲದಂತಿದೆ' ಎಂದು ಬರೆದಿದ್ದಾರೆ.

ಜಸ್ಪ್ರೀತ್ ಬುಮ್ರಾ, ವಾಷಿಂಗ್ಟನ್ ಸುಂದರ್ ಮತ್ತು ವರುಣ್ ಚಕ್ರವರ್ತಿ ಅವರಂತಹ ಪ್ರಮುಖ ಆಟಗಾರರು ಈಗಾಗಲೇ ತಂಡದಲ್ಲಿ ಇಲ್ಲದಿರುವಾಗಲೂ ಕುಲದೀಪ್ ಅವರನ್ನು ಕೈಬಿಟ್ಟಿರುವ ಬಗ್ಗೆ ಕೈಫ್ ಆಶ್ಚರ್ಯ ವ್ಯಕ್ತಪಡಿಸಿದರು.

ಇದೇ ವೇಳೆ, ಕುಲದೀಪ್ ಅವರನ್ನು ಪದೇ ಪದೆ ಆಡುವ ಹನ್ನೊಂದರ ಬಳಗದಿಂದ ಹೊರಗಿಡುವ ತಂಡದ ಆಡಳಿತ ಮಂಡಳಿಯ ನಿರ್ಧಾರವನ್ನು ಆರ್. ಅಶ್ವಿನ್ ಕೂಡ ಪ್ರಶ್ನಿಸಿದರು.

Team India Players
ಇಷ್ಟೊಂದು ಗೊಂದಲಮಯ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಅನ್ನು ಹಿಂದೆಂದೂ ನೋಡಿಲ್ಲ: ಮೊಹಮ್ಮದ್ ಕೈಫ್

'ಸಾಮಾನ್ಯವಾಗಿ ಕುಲದೀಪ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡದಿರಲು ನೀಡುವ ಏಕೈಕ ಸಮರ್ಥನೆಯೆಂದರೆ, ಬ್ಯಾಟಿಂಗ್ ಕ್ರಮಾಂಕವು 7ನೇ ಸ್ಥಾನಕ್ಕೆ ಕೊನೆಗೊಳ್ಳುತ್ತದೆ ಎಂಬುದು; ಆದರೆ ಇಂದು 8ನೇ ಸ್ಥಾನದಲ್ಲಿ ಅರ್ಶದೀಪ್ ಇರುವುದನ್ನು ನೋಡಿದರೆ ಹೇಗನಿಸುತ್ತದೆ! ಇದರೊಂದಿಗೆ ಬುಮ್ರಾ ಅವರ ಅನುಪಸ್ಥಿತಿಯನ್ನೂ ಪರಿಗಣಿಸಿದರೆ, ಕುಲದೀಪ್ ಬಗ್ಗೆ ಸಹಾನುಭೂತಿ ಮೂಡುತ್ತದೆ. ನನ್ನ ಮಾತನ್ನು ನಂಬಿ, ಇದು ಬೌಲರ್‌ನ ಲಯ ಮತ್ತು ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರಬಹುದು' ಎಂದು ಅಶ್ವಿನ್ ಭಾನುವಾರ ತಮ್ಮ 'X' ಖಾತೆಯಲ್ಲಿ ತಿಳಿಸಿದ್ದಾರೆ.

T20 ಸರಣಿ ಬಳಿಕ ವಿಶ್ರಾಂತಿ ಪಡೆದ ನಂತರ, ಇಂಗ್ಲೆಂಡ್‌ನಲ್ಲಿ ಭಾರತ ಆಡಿದ ಎಲ್ಲ ಮೂರು ಏಕದಿನ ಪಂದ್ಯಗಳ ಪೈಕಿ ಮೂರರಲ್ಲಿ ಕುಲದೀಪ್ ಯಾದವ್ ಅವರು ಆಡುವ ಹನ್ನೊಂದರ ಬಳಗದಿಂದ ಹೊರಗುಳಿದಿದ್ದಾರೆ.

ಭಾರತೀಯ ತಂಡದ ಆಡಳಿತ ಮಂಡಳಿಯು ಸಾಮಾನ್ಯವಾಗಿ ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಅವರಿಗೆ ಆದ್ಯತೆ ನೀಡುತ್ತಾ ಬಂದಿದೆ. ಏಕೆಂದರೆ ಅವರು ತಂಡದ ಬ್ಯಾಟಿಂಗ್ ಆಳವನ್ನು ಹೆಚ್ಚಿಸುತ್ತಾರೆ. ಅಕ್ಷರ್ ಮತ್ತು ವಾಷಿಂಗ್ಟನ್ ತಮ್ಮ ಆಲ್‌ರೌಂಡ್ ಪ್ರದರ್ಶನದ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದರೂ, ಕುಲದೀಪ್ ಅವರ ಕೆಳಕ್ರಮಾಂಕದ ಬ್ಯಾಟಿಂಗ್ ಮಿತಿಗಳಿಂದಾಗಿ ಅವರ ಪ್ರಮುಖ ಕೌಶಲವನ್ನು ಕಡೆಗಣಿಸಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com