ಭಾರತಕ್ಕೆ ಹೊಸ T20 ಕೋಚ್?: ಆಶಿಶ್ ನೆಹ್ರಾರನ್ನು ಗೌತಮ್ ಗಂಭೀರ್ ಉತ್ತರಾಧಿಕಾರಿಯನ್ನಾಗಿ ಮಾಡಿ; ಮಾಜಿ ಆಟಗಾರ ಸಂಜಯ್ ಮಂಜ್ರೇಕರ್

ನೆಹ್ರಾ ಐಪಿಎಲ್‌ನಲ್ಲಿ ಅಪರೂಪದ ದಾಖಲೆ ಹೊಂದಿದ್ದಾರೆ. ಇತ್ತೀಚೆಗೆ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿ ಸದ್ದಿಲ್ಲದೆ ಬೆಳೆದ ಗುಜರಾತ್ ಟೈಟಾನ್ಸ್ (GT) ತಂಡದ ಮುಖ್ಯ ತರಬೇತುದಾರರಾಗಿದ್ದಾರೆ.
File photo of India captain Shubman Gill and Gautam Gambhir
ಶುಭಮನ್ ಗಿಲ್ ಜೊತೆಗೆ ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್Photo | AFP
Updated on: 

ಐಪಿಎಲ್ 2026ರ ನಂತರ, ಅಫ್ಘಾನಿಸ್ತಾನ ವಿರುದ್ಧದ ಸರಣಿ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಸಮಯ ಕೂಡಿ ಬಂದಿದೆ. ಗೌತಮ್ ಗಂಭೀರ್ ನೇತೃತ್ವದಲ್ಲಿ, ಭಾರತವು ಈಗಾಗಲೇ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದೆ. ಭಾರತ ಹಾಲಿ ಚಾಂಪಿಯನ್ಸ್ ಟ್ರೋಫಿ ಮತ್ತು ಟಿ20 ವಿಶ್ವಕಪ್ ಚಾಂಪಿಯನ್‌ಗಳಾಗಿದ್ದು, 2027ರ ಏಕದಿನ ವಿಶ್ವಕಪ್‌ಗೆ ನೆಚ್ಚಿನ ತಂಡವಾಗಿ ಮುಂದುವರಿಯಲಿದೆ. ಒಂದು ವೇಳೆ ಭಾರತಕ್ಕೆ ಹೊಸ ಟಿ20 ಕೋಚ್ ಅಗತ್ಯವಿದ್ದರೆ? ಸೂಕ್ತ ಅಭ್ಯರ್ಥಿ ಯಾರು? ಎಂಬುದಕ್ಕೆ ಭಾರತದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಅವರು ಆಶಿಶ್ ನೆಹ್ರಾ ಎಂದು ನಂಬುತ್ತಾರೆ.

ನೆಹ್ರಾ ಐಪಿಎಲ್‌ನಲ್ಲಿ ಅಪರೂಪದ ದಾಖಲೆ ಹೊಂದಿದ್ದಾರೆ. ಇತ್ತೀಚೆಗೆ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿ ಸದ್ದಿಲ್ಲದೆ ಬೆಳೆದ ಗುಜರಾತ್ ಟೈಟಾನ್ಸ್ (GT) ತಂಡದ ಮುಖ್ಯ ತರಬೇತುದಾರರಾಗಿದ್ದಾರೆ. 2022ರಲ್ಲಿ ಅಸ್ತಿತ್ವಕ್ಕೆ ಬಂದ ನಂತರ, ಜಿಟಿ ಒಮ್ಮೆ ಐಪಿಎಲ್ ಗೆದ್ದಿದೆ. ಎರಡು ಬಾರಿ ಫೈನಲ್‌ಗೆ ಪ್ರವೇಶಿಸಿದೆ ಮತ್ತು ಇನ್ನೊಂದು ಬಾರಿ ಪ್ಲೇಆಫ್‌ನಲ್ಲಿ ಮುಗಿಸಿದೆ. ನೆಹ್ರಾ ಆರಂಭದಿಂದಲೂ ಜಿಟಿಯ ಮುಖ್ಯ ತರಬೇತುದಾರರಾಗಿದ್ದಾರೆ.

'ಆಶಿಶ್ ನೆಹ್ರಾ ಕಠಿಣ ಮನಸ್ಸಿನ, ಬುದ್ಧಿವಂತ ಕ್ರಿಕೆಟಿಗ. ನೀವು ಅವರೊಂದಿಗೆ ಕ್ರಿಕೆಟ್ ಬಗ್ಗೆ ಮಾತನಾಡಿದರೆ, ಅವರು ಅದರ ಬಗ್ಗೆ ಹೆಚ್ಚು ಭಾವನಾತ್ಮಕರಾಗುವ ವ್ಯಕ್ತಿಯಲ್ಲ; ಇದರಿಂದಾಗಿ ಅವರು ತಮ್ಮ ತಂಡ ಹೊಂದಿರುವ ಸಮಸ್ಯೆಗಳನ್ನು ನೋಡಲು ಸಾಧ್ಯವಾಗುತ್ತದೆ' ಎಂದು ಸ್ಪೋರ್ಟ್‌ಸ್ಟಾರ್‌ನಲ್ಲಿ ಮಂಜ್ರೇಕರ್ ಹೇಳಿದರು.

File photo of India captain Shubman Gill and Gautam Gambhir
'ರಣಜಿ ಟ್ರೋಫಿ ರದ್ದುಗೊಳಿಸಿ'; BCCIಗೆ ಒತ್ತಾಯ; ಔಕಿಬ್ ನಬಿ ಕೈಬಿಟ್ಟಿದ್ದಕ್ಕೆ ಸಂಜಯ್ ಮಂಜ್ರೇಕರ್ ತೀವ್ರ ಆಕ್ರೋಶ

'ತುಂಬಾ ವಸ್ತುನಿಷ್ಠ ಮತ್ತು ಪ್ರಾಯೋಗಿಕವಾಗಿರುವ ತರಬೇತುದಾರರನ್ನು ನಾನು ಇಷ್ಟಪಡುತ್ತೇನೆ. ಅವರು ಆಟವನ್ನು ಆಳವಾಗಿ ಅರ್ಥಮಾಡಿಕೊಳ್ಳುತ್ತಾರೆ ಮತ್ತು ರಾಜಕೀಯ, ಪಕ್ಷಪಾತ ಅಥವಾ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಕೆಲವು ಜನರನ್ನು ಸಂತೋಷವಾಗಿಡಲು ಪ್ರಯತ್ನಿಸುವುದಿಲ್ಲ. ಆಟಗಾರರು ಆ ಪ್ರಾಮಾಣಿಕತೆ ಮತ್ತು ಸ್ಪಷ್ಟತೆಯನ್ನು ಮೆಚ್ಚುತ್ತಾರೆ. ಅವರು ವಿಷಯಗಳನ್ನು ಸರಳವಾಗಿ ಇಡುತ್ತಾರೆ ಮತ್ತು ವಿಷಯಗಳನ್ನು ಹೆಚ್ಚು ಸಂಕೀರ್ಣಗೊಳಿಸುವುದಿಲ್ಲ. ಹೆಚ್ಚು ಸಂಕೀರ್ಣತೆಯಿಂದಲೂ ಕೂಡಿಲ್ಲ' ಎಂದು ಹೇಳಿದರು.

'ತರಬೇತುದಾರನಾಗಿ ಅವರ ಯಶಸ್ಸು ಅವರ ಮೇಲೆ ಪರಿಣಾಮ ಬೀರುವುದಿಲ್ಲ ಎಂಬುದನ್ನು ನೀವು ನೋಡಬಹುದು. ಅವರು ಹೆಚ್ಚು ಕ್ರೆಡಿಟ್ ತೆಗೆದುಕೊಳ್ಳಲು ಬಯಸುವುದಿಲ್ಲ; ಅವರು ಕಠಿಣ ವಿಚಾರಗಳನ್ನು ಸುಲಭವಾಗಿ ಬಗೆಹರಿಸುವ ಸರಳ ವ್ಯಕ್ತಿ ಮತ್ತು ಅದನ್ನು ಇಷ್ಟಪಡುವಂತೆ ತೋರುತ್ತದೆ' ಎಂದು ಮಂಜ್ರೇಕರ್ ಹೇಳಿದರು.

'ಭಾರತ ಟಿ20 ಕೋಚ್‌ಗಾಗಿ ಹುಡುಕುತ್ತಿದ್ದರೆ, ಇವರು ಫಲಿತಾಂಶಗಳನ್ನು ನೀಡಿದ ವ್ಯಕ್ತಿಯಾಗಿದ್ದಾರೆ. ಅವರು ಅದ್ಭುತ ದಾಖಲೆಯನ್ನು ಹೊಂದಿದ್ದಾರೆ. ಅವರು ಸ್ವಲ್ಪ ವಿಭಿನ್ನವಾಗಿ ಆಡುತ್ತಿದ್ದಾರೆ. ಆಟಗಾರರು ಸಹ ಕೋಚ್ ಆಶಿಶ್ ನೆಹ್ರಾ ಅವರನ್ನು ಒಪ್ಪಿಕೊಳ್ಳಬೇಕು. ಅವರು ಬೌಲಿಂಗ್ ಕೋಚ್ ಆಗಿ ಬರಬಾರದು ಅಂತ ನಾನು ಭಾವಿಸುತ್ತೇನೆ. ಏಕೆಂದರೆ, ಅವರು ಮುಖ್ಯ ಕೋಚ್ ಆಗಿ ಬರಬೇಕು' ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com