1st ODI: Shubman Gill ಎಡವಟ್ಟು, ಆಫ್ಘನ್ ಬ್ಯಾಟರ್ ಗೆ ಜೀವದಾನ, Rahmanullah Gurbaz ಐತಿಹಾಸಿಕ ದಾಖಲೆ

ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ಆರಂಭಿಕ ಬ್ಯಾಟರ್ ರಹ್ಮಾನುಲ್ಲಾ ಗುರ್ಬಾಜ್ ಅವರ ಸ್ಫೋಟಕ ಶತಕದ ನೆರವಿನಿಂದ 195 ರನ್ ಗಳ ಬೃಹತ್ ಮೊತ್ತ ಪೇರಿಸಿತು.
Rahmanullah Gurbaz
ರೆಹಮಾನುಲ್ಲಾ ಗುರ್ಬಾಜ್
Updated on

ಧರ್ಮಶಾಲಾ: ಅಫ್ಘಾನಿಸ್ತಾನ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ಶುಭ್ ಮನ್ ಗಿಲ್ ಅವರ ಎಡವಟ್ಟೊಂದು ತಂಡಕ್ಕೆ ದುಬಾರಿಯಾಗಿ ಪರಿಣಮಿಸಿದ್ದು, ಜೀವದಾನದ ಲಾಭ ಪಡೆದ ಆಫ್ಘನ್ ಬ್ಯಾಟರ್ ದಾಖಲೆಯ ಶತಕಸಿಡಿಸಿದರು.

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯ ಮಳೆಯಿಂದಾಗಿ 25 ಓವರ್‌ಗಳನ್ನು ಕಡಿತಗೊಳಿಸಲಾಯಿತು.

ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ಆರಂಭಿಕ ಬ್ಯಾಟರ್ ರಹ್ಮಾನುಲ್ಲಾ ಗುರ್ಬಾಜ್ ಅವರ ಸ್ಫೋಟಕ ಶತಕದ ನೆರವಿನಿಂದ 195 ರನ್ ಗಳ ಬೃಹತ್ ಮೊತ್ತ ಪೇರಿಸಿತು.

ಭಾರತದ ಪ್ರಬಲ ಬೌಲಿಂಗ್ ದಾಳಿಯ ಹೊರತಾಗಿಯೂ ಆಫ್ಘನ್ ಬ್ಯಾಟರ್ ಗುರ್ಬಾಜ್ ಸ್ಫೋಟಕ ಇನ್ನಿಂಗ್ಸ್ ಆಡಿದರು. ಕೇವಲ 48 ಎಸೆತಗಳಲ್ಲಿ ಶತಕ ಸಿಡಿಸಿದ ಗುರ್ಬಾಜ್ ಬಳಿಕ 51 ಎಸೆತಗಳಲ್ಲಿ 102 ರನ್ ಗಳಿಸಿ ಔಟಾದರು.

Rahmanullah Gurbaz
1st ODI: 48 ಎಸೆತಗಳಲ್ಲಿ ಶತಕ ಚಚ್ಚಿದ Gurbaz, ಭಾರತಕ್ಕೆ 195 ರನ್ ಟಾರ್ಗೆಟ್ ಕೊಟ್ಟ ಅಫ್ಘಾನಿಸ್ತಾನ!

ಐತಿಹಾಸಿಕ ದಾಖಲೆ

ಮಳೆಯಿಂದಾಗಿ ಪಂದ್ಯವನ್ನು ತಲಾ 25 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಟಾಸ್ ಗೆದ್ದ ಭಾರತ ತಂಡದ ನಾಯಕ ಶುಭಮನ್ ಗಿಲ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆರಂಭಿಕ ಬೌಲರ್‌ಗಳಾದ ಅರ್ಶದೀಪ್ ಸಿಂಗ್ ಮತ್ತು ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಗುರ್ನೂರ್ ಬ್ರಾರ್ ಅಫ್ಘಾನಿಸ್ತಾನಕ್ಕೆ ಆರಂಭದಲ್ಲೇ ಮೂರು ಆಘಾತಗಳನ್ನು ನೀಡಿದರು. ಆದರೆ ನಂತರ ಗುರ್ಬಾಜ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿ, ನಂತರ 48 ಎಸೆತಗಳಲ್ಲಿ ಶತಕ ದಾಖಲಿಸಿದರು. ಆ ಮೂಲಕ ಗುರ್ಬಾಜ್ ಆಫ್ಘಾನಿಸ್ತಾನ ಪರ ವೇಗದ ಶತಕ ಸಿಡಿಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾದರು. ಇದಕ್ಕೂ ಮೊದಲು 2010ರಲ್ಲಿ ಸ್ಕಾಟ್ಲೆಂಡ್ ವಿರುದ್ಧ ಮಹಮದ್ ಶಹ್ಜಾದ್ 72 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದು ಈ ವರೆಗೂ ಆಫ್ಘನ್ ಪರ ದಾಖಲಾಗಿದ್ದ ವೇಗದ ಶತಕವಾಗಿತ್ತು. ಇಂದು ಈ ದಾಖಲೆಯನ್ನು ಗುರ್ಬಾಜ್ ಮುರಿದರು.

Fastest ODI hundreds for Afghanistan (by balls faced)

  • 48 - Rahmanullah Gurbaz vs IND, Dharamsala, 2026

  • 72 - Mohammad Shahzad vs SCOT, Alloway, 2010

  • 72 - Karim Sadiq vs NED, Sharjah, 2012

  • 85 - Nawroz Mangal vs SCOT, Sharjah, 2013

  • 85 - Mohammad Shahzad vs IRE, Belfast, 2019

ಭಾರತದ ವಿರುದ್ಧ 2ನೇ ವೇಗದ ಶತಕ

ಅಂತೆಯೇ ಇದು ಭಾರತದ ವಿರುದ್ಧ ಬಂದ 2ನೇ ವೇಗದ ಶತಕವೂ ಕೂಡ ಆಗಿದೆ. ಈ ಹಿಂದೆ 2005ರಲ್ಲಿ ಕಾನ್ಪುರದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನದ ಶಾಹಿದ್ ಅಫ್ರಿದಿ 45 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದು ಭಾರತದ ಏಕದಿನ ಕ್ರಿಕೆಟ್ ನಲ್ಲಿ ದಾಖಲಾದ ಮೊದಲ ವೇಗದ ಶತಕವಾಗಿದೆ.

Fastest ODI hundreds vs India (by balls faced)

  • 45 - Shahid Afridi (PAK), Kanpur, 2005

  • 48 - Rahmanullah Gurbaz (AFG), Dharamsala, 2026

  • 57 - James Faulkner (AUS), Bengaluru, 2013

  • 57 - AB de Villiers (SA), Mumbai WS, 2015

  • 57 - Michael Bracewell (NZ), Hyderabad, 2023

ಸಿಕ್ಸರ್ ಗಳಲ್ಲೂ ದಾಖಲೆ

ಇನ್ನು ಇಂದು ಗುರ್ಬಾಜ್ ಒಟ್ಟು 8 ಸಿಕ್ಸರ್ ಗಳಿಸಿದ್ದು, ಇದು ಏಕದಿನ ಪಂದ್ಯವೊಂದರಲ್ಲಿ ಆಫ್ಘಾನಿಸ್ತಾನ ಪರ ಬ್ಯಾಟರ್ ಒಬ್ಬರು ಸಿಡಿಸಿದ 2ನೇ ಗರಿಷ್ಠ ಸಿಕ್ಸರ್ ಗಳಾಗಿವೆ. ಈ ಹಿಂದೆ 2021ರಲ್ಲಿ ಐರ್ಲೆಂಡ್ ವಿರುದ್ಧ ಇದೇ ಗುರ್ಬಾಜ್ 9 ಸಿಕ್ಸರ್ ಸಿಡಿಸಿದ್ದರು.

Most sixes for AFG in an ODI innings

  • 9 - Rahmanullah Gurbaz vs IRE, Abu Dhabi, 2021

  • 8 - Mohammad Shahzad vs ZIM, Sharjah, 2015

  • 8 - Rahmanullah Gurbaz vs BAN, Chattogram, 2023

  • 8 - Rahmanullah Gurbaz vs IND, Dharamsala, 2026

  • 7 - Mohammad Shahzad vs IND, Dubai, 2018

  • 7 - Rahmanullah Gurbaz vs BAN, Sharjah, 2024

Rahmanullah Gurbaz
ಮೊದಲ ಏಕದಿನ ಪಂದ್ಯ: ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ, ಮಳೆಯಿಂದಾಗಿ 25 ಓವರ್ ಗೆ ಸೀಮಿತ! ಇಬ್ಬರ ಪದಾರ್ಪಣೆ

ನಿತೀಶ್ ರೆಡ್ಡಿ ಅದ್ಭುತ ಬೌಲಿಂಗ್

ಅವರ ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್‌ಗಳು ಸೇರಿದ್ದವು. ಭಾರತದ ಯಾವುದೇ ಬೌಲರ್ ಅವರ ದಾಳಿಯಿಂದ ಪಾರಾಗಲಿಲ್ಲ. ಎಡಗೈ ಸ್ಪಿನ್ನರ್ ಹಾಗೂ ಪದಾರ್ಪಣೆ ಪಂದ್ಯವಾಡುತ್ತಿದ್ದ ಹರ್ಷ ದುಬೆ ಅವರ ಮೊದಲ ಓವರ್‌ನಲ್ಲೇ 16 ರನ್ ಚಚ್ಚಿದ ಗುರ್ಬಾಜ್, ನಂತರ ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ವಿರುದ್ಧ 19 ರನ್ ಸಿಡಿಸಿದರು. ಅವರ ಬ್ಯಾಟಿಂಗ್ ಎಷ್ಟರ ಮಟ್ಟಿಗೆ ಪ್ರಭಾವಶಾಲಿಯಾಗಿತ್ತೆಂದರೆ, ಅವರು ಶತಕ ತಲುಪುವ ವೇಳೆಗೆ ಅಫ್ಘಾನಿಸ್ತಾನದ ಮೊತ್ತ 135/3 ಆಗಿದ್ದು, ಉಳಿದ ಬ್ಯಾಟರ್‌ಗಳಿಂದ ಬಂದಿದ್ದ ರನ್‌ಗಳು 40ಕ್ಕೂ ಕಡಿಮೆಯಾಗಿದ್ದವು.

ಕೊನೆಗೆ 51 ಎಸೆತಗಳಲ್ಲಿ 102 ರನ್ ಗಳಿಸಿದ್ದ ಗುರ್ಬಾಜ್ ಅವರನ್ನು ನಿತೀಶ್ ಕುಮಾರ್ ರೆಡ್ಡಿ ಅದ್ಭುತ ಯಾರ್ಕರ್ ಮೂಲಕ ಬೌಲ್ಡ್ ಮಾಡಿದರು. ಮಧ್ಯದ ಸ್ಟಂಪ್‌ನ್ನು ಉರುಳಿಸಿದ ಆ ಎಸೆತದೊಂದಿಗೆ ನಿತೀಶ್ ತಮ್ಮ ಮೊದಲ ಏಕದಿನ ವಿಕೆಟ್ ಪಡೆದರು.

ಶುಭ್ ಮನ್ ಗಿಲ್ ಎಡವಟ್ಟು

ಇನ್ನು ಈ ಪಂದ್ಯದಲ್ಲಿ ಭಾರತ ತಂಡದ ನಾಯಕ ಶುಭ್ ಮನ್ ಗಿಲ್ ಮಾಡಿದ ಎಡವಟ್ಟೊಂದು ದುಬಾರಿಯಾಗಿ ಪರಿಣಮಿಸಿತು. ಆಫ್ಘನ್ ಇನ್ನಿಂಗ್ಸ್ ನ 3ನೇ ಓವರ್ ನಲ್ಲಿ ಗುರ್ಬಾಜ್ ಜೀವದಾನ ಪಡೆದದರು. ಅರ್ಶ್ ದೀಪ್ ಸಿಂಗ್ ಎಸೆದ 5ನೇ ಎಸೆತದಲ್ಲಿ ಗುರ್ಬಾಜ್ ಎಲ್ ಬಿ ಬಲೆಗೆ ಬಿದ್ದಿದ್ದರು. ಈ ವೇಳೆ ಗುರ್ಬಾಜ್ ಕೇವಲ 12 ರನ್ ಗಳನ್ನಷ್ಟೇ ಗಳಿಸಿದ್ದರು. ಅರ್ಶ್ ದೀಪ್ ಸಿಂಗ್ ಬಲವಾಗಿ ಅಪೀಲ್ ಮಾಡಿದರೂ ಭಾರತ ತಂಡದ ನಾಯಕ ಶುಭ್ ಮನ್ ಗಿಲ್ ಬ್ಯಾಟ್ ಎಡ್ಜ್ ಆಗಿದೆ ಎಂದು ರೀವ್ಯೂ ಪಡೆಯಲಿಲ್ಲ. ಆದರೆ ಬಳಿಕ ರಿಪ್ಲೇ ನಲ್ಲಿ ಚೆಂಡು ಬ್ಯಾಟ್ ಗೆ ಟಚ್ ಆಗಿರಲೇ ಇಲ್ಲ. ಒಂದು ವೇಳೆ ಗಿಲ್ ರಿವ್ಯೂ ಪಡೆದಿದ್ದರೆ ಗುರ್ಬಾಜ್ ಔಟಾಗಿರುತ್ತಿದ್ದರು.

ಆದರೆ ಗಿಲ್ ನೀಡಿದ ಜೀವದಾನದ ಲಾಭ ಪಡೆದ ಗುರ್ಬಾಜ್ ಸ್ಫೋಟಕ ಶತಕ ಸಿಡಿಸಿ ಅಫ್ಘಾನ್ ನ ಬೃಹತ್ ಮೊತ್ತಕ್ಕೆ ಕಾರಣರಾದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com