

ಡಾಂಬುಲ್ಲಾ: ತ್ರಿಕೋನ ಸರಣಿಯ ನಾಲ್ಕನೇ ಪಂದ್ಯವನ್ನು ಶ್ರೀಲಂಕಾ ಎ ಮತ್ತು ಭಾರತ ಎ ನಡುವೆ ಡಂಬುಲ್ಲಾದ ರಂಗಿರಿ ಡಂಬುಲ್ಲಾ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಸಲಾಯಿತು. ಶ್ರೀಲಂಕಾ ತಂಡವು ಸೂಪರ್ ಓವರ್‌ನಲ್ಲಿ ಭಾರತವನ್ನು ಸೋಲಿಸಿದೆ. ಆದಾಗ್ಯೂ, ಪಂದ್ಯವು ತೀವ್ರ ನಾಟಕೀಯತೆಯಿಂದ ಕೂಡಿತ್ತು. ಕೊನೆಯ ಎಸೆತದಲ್ಲಿ ಪಂದ್ಯವು ಟೈ ಆಗುತ್ತದೆಯೇ ಅಥವಾ ಸೂಪರ್ ಓವರ್ ಆಗುತ್ತದೆಯೇ ಎಂಬ ಬಗ್ಗೆ ಆರಂಭದಲ್ಲಿ ವಿವಾದವಿತ್ತು. ಭಾರತದ ನಾಯಕ ತಿಲಕ್ ವರ್ಮಾ ಮೈದಾನದಲ್ಲಿರುವ ಅಂಪೈರ್ ಜೊತೆ ವಾಗ್ವಾದ ನಡೆಸುತ್ತಿದ್ದರು.
ಇದರ ನಂತರ, ಮೂರನೇ ಅಂಪೈರ್ ಪಂದ್ಯವನ್ನು ಸೂಪರ್ ಓವರ್ ಮೂಲಕ ನಿರ್ಧರಿಸಲಾಗುತ್ತದೆ ಎಂದು ತಿಳಿಸಿದರು. ಶ್ರೀಲಂಕಾ ಸೂಪರ್ ಓವರ್‌ನಲ್ಲಿ 16 ರನ್ ಗಳಿಸಿತು. ಭಾರತಕ್ಕೆ 17 ರನ್‌ಗಳ ಗುರಿಯನ್ನು ನಿಗದಿಪಡಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತ ಮೊದಲ ಮೂರು ಎಸೆತಗಳಲ್ಲಿ 3 ರನ್ ಗಳಿಸಿತು. ವೈಭವ್ ಕೊನೆಯ ಮೂರು ಎಸೆತಗಳಲ್ಲಿ 14 ರನ್ ಗಳಿಸಬೇಕಾಗಿತ್ತು. ಆದರೆ ಕೇವಲ 7 ರನ್ ಗಳಿಸಿದ್ದು ಇದರ ಪರಿಣಾಮವಾಗಿ ಭಾರತದ ಸೋಲು ಅನುಭವಿಸಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 265 ರನ್ ಗಳಿಗೆ ಆಲೌಟ್ ಆಗಿತ್ತು. 266 ರನ್ ಗುರಿ ಬೆನ್ನಟ್ಟಿದ ಶ್ರೀಲಂಕಾಗೆ ಕೊನೆಯ ಎಸೆತದಲ್ಲಿ ಗೆಲ್ಲಲು 2 ರನ್‌ಗಳು ಬೇಕಾಗಿತ್ತು. ಆದರೆ ಸಿ. ಗುಣಶೇಖರ ಒಂದು ಸಿಂಗಲ್ ಪಡೆದರು. ಎರಡನೇ ರನ್ ಗಳಿಸುವ ಸಮಯದಲ್ಲಿ ಗುಣಶೇಖರ ರನ್ ಔಟ್ ಆಗಿದ್ದರು. ಹೀಗಾಗಿ ಸೂಪರ್ ಓವರ್ ನಡೆಸಲಾಯಿತು. 2 ಪಂದ್ಯಗಳಲ್ಲಿ ಗೆದ್ದಿರುವ ಶ್ರೀಲಂಕಾ 4 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೇ 2 ಅಂಕಗಳನ್ನು ಗಳಿಸಿರುವ ಭಾರತ ಮತ್ತು ಅಫ್ಘಾನಿಸ್ತಾನ ಕ್ರಮವಾಗಿ 2 ಮತ್ತು ಮೂರನೇ ಸ್ಥಾನದಲ್ಲಿದೆ.
Advertisement