3rd ODI: ಆಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ 9 ವಿಕೆಟ್ ಭರ್ಜರಿ ಜಯ, 3-0 ಅಂತರದಲ್ಲಿ ಏಕದಿನ ಸರಣಿ ಕ್ಲೀನ್ ಸ್ವೀಪ್!

ಭಾರತದ ಪರ ಜೈಸ್ವಾಲ್ (ಅಜೇಯ 110 ) ಶತಕ ಸಿಡಿಸಿದರೆ, ಅವರಿಗೆ ಉತ್ತಮ ಸಾಥ್ ನೀಡಿದ ರೋಹಿತ್ ಶರ್ಮಾ (79) ಅರ್ಧಶತಕ ಗಳಿಸಿದರು.
India beat Afghanistan by 9 Wickets
ಆಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ
Updated on

ಚೆನ್ನೈ: ಆಫ್ಘಾನಿಸ್ತಾನ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲೂ ಭಾರತ ಭರ್ಜರಿ ಜಯ ಸಾಧಿಸಿದ್ದು, 9 ವಿಕೆಟ್ ಅಂತರದಲ್ಲಿ ಆಫ್ಘನ್ನರನ್ನು ಮಣಿಸಿ 3-0 ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್ ಮಾಡಿದೆ.

ಆಫ್ಘಾನಿಸ್ತಾನ ನೀಡಿದ 219 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಭಾರತ 29 ಓವರ್ ನಲ್ಲೇ 219 ರನ್ ಗಳಿಸಿ 9 ವಿಕೆಟ್ ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು.

ಭಾರತದ ಪರ ಜೈಸ್ವಾಲ್ (ಅಜೇಯ 110 ) ಶತಕ ಸಿಡಿಸಿದರೆ, ಅವರಿಗೆ ಉತ್ತಮ ಸಾಥ್ ನೀಡಿದ ರೋಹಿತ್ ಶರ್ಮಾ (79) ಅರ್ಧಶತಕ ಗಳಿಸಿದರು.

ಬಳಿಕ ಕ್ರೀಸ್ ಗೆ ಬಂದ ಶ್ರೇಯಸ್ ಅಯ್ಯರ್ ಅಜೇಯ 20 ರನ್ ಗಳಿಸಿ ಗೆಲುವಿನ ಔಪಚಾರಿಕತೆ ಮುಕ್ತಾಯಗೊಳಿಸಿದರು. ಆಫ್ಘಾನಿಸ್ತಾನ ಪರ ನಬಿ ಮಾತ್ರ ರೋಹಿತ್ ಶರ್ಮಾ ಅವರ ವಿಕೆಟ್ ಗಳಿಸಿದರು.

India beat Afghanistan by 9 Wickets
3rd ODI: ಆಫ್ಘಾನಿಸ್ತಾನಕ್ಕೆ ಪೆನಾಲ್ಟಿ ಶಾಕ್, ಇನ್ನಿಂಗ್ಸ್ ಆರಂಭಕ್ಕೂ ಮುನ್ನವೇ ಭಾರತಕ್ಕೆ 5 ರನ್, ಮೊದಲ ಓವರ್ ನಲ್ಲೇ 23 ರನ್: ವಿಚಿತ್ರ ದಾಖಲೆ!

3-0 ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್

ಇನ್ನು ಮೊದಲೆರಡು ಪಂದ್ಯಗಳನ್ನು ಗೆದ್ದಿದ್ದ ಭಾರತ ಅಂತಿಮ ಏಕದಿನ ಪಂದ್ಯವನ್ನೂ ಗೆಲ್ಲುವ ಮೂಲಕ 3 ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com