'ವಿಪರೀತ ವಿನಾಶಕಾರಿ': ತಂಡದಿಂದ ವೈಭವ್ ಸೂರ್ಯವಂಶಿ ಕೈಬಿಡುವಂತೆ ಸೂಚಿಸಿದ್ದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಮೆಚ್ಚುಗೆ!

15 ವರ್ಷದ ಆರಂಭಿಕ ಆಟಗಾರ ಕೇವಲ 11 ಎಸೆತಗಳಲ್ಲಿ ಭಾರತ ಎ ಪರ ತನ್ನ ಚೊಚ್ಚಲ ಅರ್ಧಶತಕ ಗಳಿಸುವ ಮೂಲಕ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರನ್ನು ಬರೆದರು.
Sanjay Manjrekar
ಸಂಜಯ್ ಮಂಜ್ರೇಕರ್
Updated on

ವೈಭವ್ ಸೂರ್ಯವಂಶಿ ಮತ್ತೊಮ್ಮೆ ಕ್ರಿಕೆಟ್ ಜಗತ್ತನ್ನು ಅಚ್ಚರಿಗೊಳಿಸಿದರು. ಕೇವಲ 28 ಎಸೆತಗಳಲ್ಲಿ 94 ರನ್ ಗಳಿಸಿ ಔಟಾದರು. ಸೂರ್ಯವಂಶಿ ತ್ರಿಕೋನ ಸರಣಿಯ ಫೈನಲ್‌ನ ಶ್ರೀಲಂಕಾ ಎ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕಳೆದ ಪಂದ್ಯದಲ್ಲಿ ಭಾರತ ಎ ತಂಡವು ಸೂಪರ್ ಓವರ್‌ನಲ್ಲಿ ಶ್ರೀಲಂಕಾ ಎ ವಿರುದ್ಧ ಸೋಲು ಕಂಡಿತ್ತು. ಬಳಿಕ ಕೆಲವು ಶ್ರೀಲಂಕಾ ಎ ಆಟಗಾರರು ಸೂರ್ಯವಂಶಿ ಮತ್ತು ಸೂರ್ಯಾಂಶ್ ಶೆಡ್ಜ್ ಅವರನ್ನು ಸ್ಲೆಡ್ಜಿಂಗ್ ಮಾಡಿದ್ದರು. ಇದರಿಂದ ಉಭಯ ತಂಡಗಳ ಆಟಗಾರರ ನಡುವೆ ಜಗಳವಾಯಿತು. ಈ ವೇಳೆ 15 ವರ್ಷದ ಬಾಲಕ ವೈಭವ್ ಸೂರ್ಯವಂಶಿ ಎದುರಾಳಿ ತಂಡದ ಆಟಗಾರನನ್ನು ತಳ್ಳಿದ್ದರು.

ಈ ಘಟನೆಯ ನಂತರ, ಭಾರತದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಅವರು ವೈಭವ್ ಸೂರ್ಯವಂಶಿ ಅವರನ್ನು ಮುಂದಿನ ಪಂದ್ಯದಿಂದ (ಅಫ್ಘಾನಿಸ್ತಾನ ಎ ವಿರುದ್ಧ) ಕೈಬಿಡುವಂತೆ ಸೂಚಿಸಿದ್ದರು.

'ನಾನು ಭಾರತ ಎ ತಂಡದ ಕೋಚ್ ಅಥವಾ ಮ್ಯಾನೇಜರ್ ಆಗಿದ್ದರೆ, ಈ ಬಾರಿಯ ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೆ ವೈಭವ್ ಸೂರ್ಯವಂಶಿ ಅವರನ್ನು ಹೊರಗಿಡುತ್ತಿದ್ದೆ. ಮೈದಾನದಲ್ಲಿ ದೈಹಿಕವಾಗಿ ಘರ್ಷಣೆಯಲ್ಲಿ ತೊಡಗುವುದು ಸರಿಯಲ್ಲ ಎಂದು ಅವರಿಗೆ ತಿಳಿಸಲು ಮಾತ್ರ. ಏನೇ ಪ್ರಚೋದನೆಗಳಿದ್ದರೂ ಸಹ' ಎಂದು ಅವರು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಬರೆದಿದ್ದರು.

ತ್ರಿಕೋನ ಸರಣಿಯ ಫೈನಲ್‌ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಉತ್ತಮ ಪ್ರದರ್ಶನ ನೀಡಿದ ನಂತರ ಪ್ರತಿಕ್ರಿಯಿಸಿರುವ ಮಂಜ್ರೇಕರ್, 'ವೈಭವ್ 50 ಓವರ್‌ಗಳ ಕ್ರಿಕೆಟ್ ಅನ್ನು ಒಂದು ಸ್ವರೂಪವಾಗಿ ಮಾತ್ರ ನೋಡುತ್ತಾರೆ. ಅಲ್ಲಿಯೂ ಅವರು ಸಾಕಷ್ಟು ಪ್ರಭಾವ ಸೃಷ್ಟಿಸಬಹುದು ಎಂದು ಈಗಷ್ಟೇ ಅರಿತುಕೊಂಡಿದ್ದಾರೆ! 50 ಓವರ್‌ಗಳ ಕ್ರಿಕೆಟ್‌ನಲ್ಲಿ, ಮೊದಲ 10 ಓವರ್‌ಗಳು ವೃತ್ತದ ಹೊರಗೆ ಇಬ್ಬರು ಫೀಲ್ಡರ್‌ಗಳಿಗೆ ಮಾತ್ರ ಅವಕಾಶ ನೀಡುತ್ತವೆ. ವೈಭವ್ ODIಗಳಲ್ಲಿ ಇನ್ನಷ್ಟು ವಿನಾಶ ಸೃಷ್ಟಿಸಬಹುದು' ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ.

15 ವರ್ಷದ ಆರಂಭಿಕ ಆಟಗಾರ ಕೇವಲ 11 ಎಸೆತಗಳಲ್ಲಿ ಭಾರತ ಎ ಪರ ತನ್ನ ಚೊಚ್ಚಲ ಅರ್ಧಶತಕ ಗಳಿಸುವ ಮೂಲಕ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರನ್ನು ಬರೆದರು. ಎರಡು ದಶಕಗಳ ಹಿಂದೆ ಶ್ರೀಲಂಕಾದ ಕೌಶಲ್ಯ ವೀರರತ್ನೆ 12 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದ ಲಿಸ್ಟ್ ಎ ದಾಖಲೆಯನ್ನು ಹೊಂದಿದ್ದರು.

ಸೂರ್ಯವಂಶಿ ಆರಂಭದಿಂದಲೇ ಶ್ರೀಲಂಕಾದ ಬೌಲಿಂಗ್ ಮೇಲೆ ಅದ್ಭುತ ದಾಳಿ ನಡೆಸಿದರು. ದಿಟ್ಟ ಸ್ಟ್ರೋಕ್‌ಪ್ಲೇ ಮೂಲಕ ಬೌಂಡರಿಗಳನ್ನು ಬಾರಿಸಿದರು. ಅವರ ಇನಿಂಗ್ಸ್‌ನಲ್ಲಿ 10 ಬೌಂಡರಿಗಳು ಮತ್ತು ಎಂಟು ಸಿಕ್ಸರ್‌ಗಳು ಸೇರಿದ್ದವು. ಅವರು ಪವರ್‌ಪ್ಲೇನಲ್ಲಿ ಪ್ರಾಬಲ್ಯ ಸಾಧಿಸಿದರು.

ಈ ಯುವ ಆಟಗಾರ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ತಲುಪುವ ನಿರೀಕ್ಷೆಯಲ್ಲಿದ್ದರು. ಶತಕಕ್ಕೆ ಕೇವಲ ಆರು ರನ್‌ಗಳು ಬಾಕಿಯಿದ್ದಾಗ ಸೂರ್ಯವಂಶಿ, ಇದುವರೆಗೆ ದಾಖಲಾದ ವೇಗದ ಲಿಸ್ಟ್ ಎ ಶತಕವನ್ನು ಸರಿಗಟ್ಟುವಷ್ಟು ಹತ್ತಿರದಲ್ಲಿದ್ದರು. ಆದರೆ, ಶಕತದಿಂದ ವಂಚಿತರಾದರು. 2023ರಲ್ಲಿ ಟ್ಯಾಸ್ಮೇನಿಯಾ ವಿರುದ್ಧ ದಕ್ಷಿಣ ಆಸ್ಟ್ರೇಲಿಯಾ ಪರ 29 ಎಸೆತಗಳಲ್ಲಿ ಶತಕ ಬಾರಿಸಿದ ಆಸ್ಟ್ರೇಲಿಯಾದ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಸದ್ಯ ಆ ದಾಖಲೆ ಹೊಂದಿದ್ದಾರೆ.

Sanjay Manjrekar
ಸೂಪರ್ ಓವರ್ ವಿವಾದದ ಕುರಿತು ಮಾತನಾಡಿದ ತಿಲಕ್ ವರ್ಮಾ; ವೈಭವ್ ಸೂರ್ಯವಂಶಿ ಬಗ್ಗೆ ಮುತ್ತಿನಂತಾ ಮಾತು!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com