Tri Series Final: ವೈಭವ್ ಸೂರ್ಯವಂಶಿ ಸ್ಫೋಟಕ ಅರ್ಧಶತಕ; ಶ್ರೀಲಂಕಾ ಹುಟ್ಟಡಗಿಸಿ ಟ್ರೋಫಿಗೆ ಮುತ್ತಿಟ್ಟ ಭಾರತ!

ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾವನ್ನು ಭಾರತ 66 ರನ್ ಗಳಿಂದ ಮಣಿಸಿ ಟ್ರೋಫಿ ಗೆದ್ದಿದೆ. ಭಾರತ ತಂಡ ಮೊದಲು ಬ್ಯಾಟ್ ಮಾಡಿ 377 ರನ್ ಗಳಿಸಿತು. ಭಾರತ ನೀಡಿದ 378 ರನ್ ಗಳ ಗುರಿ ಬೆನ್ನಟಿ ಶ್ರೀಲಂಕಾವನ್ನು 311 ರನ್ ಗಳಿಗೆ ಆಲೌಟ್ ಆಯಿತು.
Team India
ಟೀಂ ಇಂಡಿಯಾ
Updated on

ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾವನ್ನು ಭಾರತ 66 ರನ್ ಗಳಿಂದ ಮಣಿಸಿ ಟ್ರೋಫಿ ಗೆದ್ದಿದೆ. ಭಾರತ ತಂಡ ಮೊದಲು ಬ್ಯಾಟ್ ಮಾಡಿ 377 ರನ್ ಗಳಿಸಿತು. ಭಾರತ ನೀಡಿದ 378 ರನ್ ಗಳ ಗುರಿ ಬೆನ್ನಟಿ ಶ್ರೀಲಂಕಾವನ್ನು 311 ರನ್ ಗಳಿಗೆ ಆಲೌಟ್ ಆಯಿತು.

ಈ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ಎ ತಂಡವು ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಭಾರತ ತಂಡ ಮೊದಲು ಬ್ಯಾಟ್ ಮಾಡಿ 377 ರನ್ ಗಳಿಸಿತು. ಭಾರತ ಎ ಪರ ವೈಭವ್ ಸೂರ್ಯವಂಶಿ 29 ಎಸೆತಗಳಲ್ಲಿ 94 ರನ್ ಗಳಿಸುವ ಮೂಲಕ ಗರಿಷ್ಠ ಸ್ಕೋರರ್ ಗಳಿಸಿದರು. ನಾಯಕ ತಿಲಕ್ ವರ್ಮಾ ಕೂಡ ಅರ್ಧಶತಕ ಗಳಿಸಿ, ತಂಡವು ಬೃಹತ್ ಮೊತ್ತವನ್ನು ತಲುಪಲು ಸಹಾಯ ಮಾಡಿದರು.

Team India
'ವಿಪರೀತ ವಿನಾಶಕಾರಿ': ತಂಡದಿಂದ ವೈಭವ್ ಸೂರ್ಯವಂಶಿ ಕೈಬಿಡುವಂತೆ ಸೂಚಿಸಿದ್ದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಮೆಚ್ಚುಗೆ!

ಈ ಬಿರುಗಾಳಿಯ ಇನ್ನಿಂಗ್ಸ್‌ನಲ್ಲಿ ವೈಭವ್ 29 ಎಸೆತಗಳಲ್ಲಿ 10 ಬೌಂಡರಿ ಮತ್ತು 8 ಸಿಕ್ಸರ್‌ಗಳೊಂದಿಗೆ 94 ರನ್ ಗಳಿಸಿದರು. ಮತ್ತೊಂದೆಡೆ ಪ್ರಿಯಾಂಶ್ ಆರ್ಯ 29 ಎಸೆತಗಳಲ್ಲಿ 39 ರನ್ ಗಳಿಸಿದರು. ನಾಯಕ ತಿಲಕ್ ವರ್ಮಾ ತಮ್ಮ ಉತ್ತಮ ಫಾರ್ಮ್ ಅನ್ನು ಮುಂದುವರಿಸಿದರು ಮತ್ತು 67 ರನ್‌ಗಳ ಅಮೂಲ್ಯ ಕೊಡುಗೆ ನೀಡಿದರು. ರುತುರಾಜ್ ಗಾಯಕ್ವಾಡ್ ಕೂಡ 40 ರನ್ ಗಳಿಸಿದರು. ಒಂದು ಹಂತದಲ್ಲಿ, 48ನೇ ಓವರ್ ವೇಳೆಗೆ, ಟೀಮ್ ಇಂಡಿಯಾ 8 ವಿಕೆಟ್‌ಗಳ ನಷ್ಟಕ್ಕೆ 338 ರನ್ ಗಳಿಸಿತ್ತು. ನಂತರ ಭಾರತೀಯ ಬ್ಯಾಟ್ಸ್‌ಮನ್‌ಗಳು ಕೊನೆಯ ಎರಡು ಓವರ್‌ಗಳಲ್ಲಿ 39 ರನ್‌ಗಳನ್ನು ಸೇರಿಸಿದರು. ಅನುಕುಲ್ ರಾಯ್ 15 ಎಸೆತಗಳಲ್ಲಿ 39 ರನ್ ಗಳಿಸಿ ವಿನಾಶಕಾರಿ ಪ್ರದರ್ಶನ ನೀಡಿದರು. ಈ ಇನ್ನಿಂಗ್ಸ್‌ನಲ್ಲಿ ಅವರು ಒಂದು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com