India vs Ireland 1st T20: ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಭಾರತ; ಐರ್ಲೆಂಡ್ ಗೆ 34 ರನ್ ಗಳ ಜಯ!

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡದ ಬೌಲಿಂಗ್ ನ್ನು ಸಮರ್ಥವಾಗಿ ಎದುರಿಸಿದ ಎದುರಾಳಿ ತಂಡ, ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು.
India vs Ireland 1st T20: ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಭಾರತ; ಐರ್ಲೆಂಡ್ ಗೆ 34 ರನ್ ಗಳ ಜಯ!
Updated on

ಐರ್ಲೆಂಡ್: ಐರ್ಲೆಂಡ್ ನಲ್ಲಿ ನಡೆದ ಭಾರತ-ಐರ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಆತಿಥೇಯ ತಂಡ 34 ರನ್ ಗಳಿಂದ ಗೆಲುವು ಸಾಧಿಸಿದೆ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡದ ಬೌಲಿಂಗ್ ನ್ನು ಸಮರ್ಥವಾಗಿ ಎದುರಿಸಿದ ಎದುರಾಳಿ ತಂಡ, ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು.

ರನ್ ಚೇಸಿಂಗ್ ನಲ್ಲಿ ಭಾರತದ ಪರ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ 20 ಎಸೆತಗಳಲ್ಲಿ 50 ರನ್ ಗಳಿಸುವ ಮೂಲಕ ಉತ್ತಮ ಆರಂಭ ನೀಡಿದರು. ಆದರೆ ಸಂಜು ಸ್ಯಾಮ್ಸನ್ 4 ಎಸೆತಗಳಲ್ಲಿ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದು, ಅತ್ಯುತ್ತಮ ಜೊತೆಯಾಟದ ಇನ್ನಿಂಗ್ಸ್ ವೈಫಲ್ಯವನ್ನುಂಟುಮಾಡಿತು.

India vs Ireland 1st T20: ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಭಾರತ; ಐರ್ಲೆಂಡ್ ಗೆ 34 ರನ್ ಗಳ ಜಯ!
ವೈಭವ್ ಅದ್ಭುತ ಪ್ರತಿಭೆ, ಮತ್ತೊಬ್ಬನನ್ನು ಸೃಷ್ಟಿಸುವುದು ಅಸಾಧ್ಯ: ರಾಹುಲ್ ದ್ರಾವಿಡ್

ಬಳಿಕ ಕ್ರೀಸ್ ಗೆ ಬಂದ ಇಶಾನ್ ಕಿಶನ್ 5 ಎಸೆತಗಳಲ್ಲಿ 1 ರನ್ , ಶ್ರೇಯಸ್ ಅಯ್ಯರ್ 7 ಎಸೆತಗಳಲ್ಲಿ 3 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದು ಭಾರತಕ್ಕೆ ತೀವ್ರ ಹಿನ್ನಡೆಯಾಯಿತು. ತಿಲಕ್ ವರ್ಮಾ ಸಹ 21 ಎಸೆತಗಳಲ್ಲಿ 19 ರನ್ ಗಳಿಸಿ ನಿರ್ಗಮಿಸಿದ್ದು ಭಾರತದ ಬ್ಯಾಟಿಂಗ್ ವೈಫಲ್ಯಕ್ಕೆ ಸಾಕ್ಷಿಯಾಯಿತು. ಅಂತಿಮವಾಗಿ ಭಾರತ ತಂಡ 18.5 ಓವರ್ ಗಳಲ್ಲಿ 148 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು.

Follow KannadaPrabha channel on WhatsApp

Download the KannadaPrabha News app to follow the latest news updates

Subscribe and Receive exclusive content and updates on your favorite topics

Subscribe to KannadaPrabha YouTube Channel and watch Videos

X
Kannada Prabha
www.kannadaprabha.com