ಅಂತಾರಾಷ್ಟ್ರೀಯ ಕ್ರಿಕೆಟಿಗೆ ಇಂಗ್ಲೆಂಡ್ ಸ್ಟಾರ್ ಆಟಗಾರ ಬೆನ್ ಸ್ಟೋಕ್ಸ್ ವಿದಾಯ: ಸಚಿನ್ ತೆಂಡೂಲ್ಕರ್ ಹೇಳಿದ್ದೇನು?

ನಾಟಿಂಗ್‌ಹ್ಯಾಮ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮಧ್ಯದಲ್ಲಿ ಇದೇ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಎಂದು ಘೋಷಿಸುವ ಮೂಲಕ ಭಾನುವಾರ ಬೆನ್ ಸ್ಟೋಕ್ಸ್ ಕ್ರಿಕೆಟ್ ಜಗತ್ತಿಗೆ ಶಾಕ್ ನೀಡಿದರು.
Ben Stokes
ಬೆನ್ ಸ್ಟೋಕ್ಸ್
Updated on

ಲಂಡನ್: ಇಂಗ್ಲೆಂಡ್ ಸ್ಟಾರ್ ಆಟಗಾರ ಬೆನ್ ಸ್ಟೋಕ್ಸ್ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಘೋಷಿಸಿದ್ದಾರೆ.

ನಾಟಿಂಗ್‌ಹ್ಯಾಮ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮಧ್ಯದಲ್ಲಿ ಇದೇ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಎಂದು ಘೋಷಿಸುವ ಮೂಲಕ ಭಾನುವಾರ ಬೆನ್ ಸ್ಟೋಕ್ಸ್ ಕ್ರಿಕೆಟ್ ಜಗತ್ತಿಗೆ ಶಾಕ್ ನೀಡಿದರು. ಸೋಮವಾರ ಕೊನೆಯಬಾರಿಗೆ ಇಂಗ್ಲೆಂಡ್ ಜೆರ್ಸಿಯಲ್ಲಿ ಆಡಿದರು. ನ್ಯೂಜಿಲೆಂಡ್ 160 ರನ್‌ಗಳ ಗೆಲುವು ಸಾಧಿಸಿ ಸರಣಿಯನ್ನು 2-1 ಅಂತರದಿಂದ ಗೆದ್ದಿಕೊಂಡಿತು.

ಲಾರ್ಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದ ನಂತರ, ಬೆನ್ ಸ್ಟೋಕ್ಸ್ ಮತ್ತು ಅವರ ಸಹ ಆಟಗಾರ ಗಸ್ ಅಟ್ಕಿನ್ಸನ್ ತಂಡದ ಕರ್ಫ್ಯೂ ನಿಯಮವನ್ನು ಉಲ್ಲಂಘಿಸಿದ್ದರು. ಲಂಡನ್‌ನ ಚೆಲ್ಸಿಯಾ ನೈಟ್‌ಕ್ಲಬ್‌ನಲ್ಲಿ ತಡರಾತ್ರಿ ನಡೆದ ಗಲಾಟೆಯಲ್ಲಿ ಇಂಗ್ಲೆಂಡ್ ತಂಡದ ಭದ್ರತಾ ಅಧಿಕಾರಿಯೊಬ್ಬರ ಮೇಲೆ ರಗ್ಬಿ ಆಟಗಾರನೊಬ್ಬ ಹಲ್ಲೆ ನಡೆಸಿದ್ದ ಘಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಇವರಿಬ್ಬರನ್ನೂ ಎರಡನೇ ಟೆಸ್ಟ್‌ನಿಂದ ಹೊರಗಿಟ್ಟಿತ್ತು.

ಸ್ಟೋಕ್ಸ್‌ ಮುಂದಿನ ಜೀವನಕ್ಕೆ ಶುಭ ಕೋರಿದ ಸಚಿನ್ ತೆಂಡೊಲ್ಕರ್: ಬೆನ್ ಸ್ಟೋಕ್ಸ್ ವಿದಾಯದ ಸುದ್ದಿ ತಿಳಿಯುತ್ತಿದ್ದಂತೆಯೇ ಲೆಜೆಂಡರಿ ಆಟಗಾರ ಸಚಿನ್ ತೆಂಡೊಲ್ಕರ್ ಅವರಿಗೆ ಮುಂದಿನ ಜೀವನಕ್ಕೆ ಶುಭಾಶಯ ಕೋರಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದು, ನೀವು ಆಟಕ್ಕೆ ತಂದ ಶಕ್ತಿಯನ್ನು ಯಾವಾಗಲೂ ಮೆಚ್ಚಿದ್ದೇನೆ. ನಿಮ್ಮ ಸಕಾರಾತ್ಮಕತೆ, ನಿಮ್ಮ ನಿರ್ಭೀತ ಉದ್ದೇಶ ಮತ್ತು ಒತ್ತಡದಲ್ಲಿ ಕ್ಷಣಗಳನ್ನು ರೂಪಿಸಿದ ರೀತಿ ನೀವು ಒಳಗೆ ಹೋದಾಗಲೆಲ್ಲಾ ಎದ್ದು ಕಾಣುತ್ತದೆ. ಆಲ್‌ರೌಂಡರ್ ಆಗಿ, ನೀವು ಇಂಗ್ಲೆಂಡ್‌ನ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದೀರಿ ಮತ್ತು ನಾಯಕನಾಗಿ, ನಿಮ್ಮ ದಿಟ್ಟ ತಂತ್ರಗಳು ನಿಮ್ಮ ತಂಡಕ್ಕೆ ಹೊಸ ಮೆರುಗನ್ನು ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Ben Stokes
ಟೆಸ್ಟ್ ಪಂದ್ಯದ ಮಧ್ಯೆ ಬೆನ್ ಸ್ಟೋಕ್ಸ್ ಹಠಾತ್ ನಿವೃತ್ತಿ ಘೋಷಿಸಿ, ಕ್ರಿಕೆಟ್‌ಗೆ ವಿದಾಯ!

ಮುಂದೆ ಏನಾಗುತ್ತದೆಯೋ ಅದಕ್ಕೆ ನಿಮಗೆ ಶುಭ ಹಾರೈಸುತ್ತೇನೆ. ನಿಮ್ಮನ್ನು ತಿಳಿದಿದ್ದರೂ, ಮಧ್ಯದಿಂದ ದೂರವಿರುವುದು ಅತ್ಯಂತ ಕಠಿಣ ಭಾಗವಾಗಿರಬಹುದು. ನಿಮ್ಮ ಮುಂದಿನ ಇನ್ನಿಂಗ್ಸ್‌ ಶುಭವಾಗಲಿ! ಎಂದು ಸಚಿನ್ ತೆಂಡೊಲ್ಕರ್ ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com