

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ 2026ರ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕೆ ಭಾರತ ತಂಡ ಸಿದ್ಧತೆ ನಡೆಸುತ್ತಿರುವಾಗಲೇ, ಅಗ್ರ ಕ್ರಮಾಂಕದ ಸಂಯೋಜನೆಯ ಸುತ್ತಲಿನ ಚರ್ಚೆ ಅಭಿಮಾನಿಗಳನ್ನು ಕುತೂಹಲಕ್ಕೆ ದೂಡಿದೆ. ಟಿ20 ವಿಶ್ವಕಪ್‌ನಲ್ಲಿ ಫಾರ್ಮ್ ಕಂಡುಕೊಳ್ಳದ ಯುವ ಅಭಿಷೇಕ್ ಶರ್ಮಾ ಅವರ ಬೆಂಬಲಕ್ಕೆ ಭಾರತದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ನಿಂತಿದ್ದಾರೆ. ಗೌತಮ್ ಗಂಭೀರ್ ನೇತೃತ್ವದ ತಂಡದ ಆಡಳಿತವು ಸ್ಫೋಟಕ ಎಡಗೈ ಬ್ಯಾಟ್ಸ್‌ಮನ್ ಮೇಲೆ ನಂಬಿಕೆ ಇಡಬೇಕೆಂದು ಒತ್ತಾಯಿಸಿದ್ದಾರೆ.
ಭಾರತದ ಅಭಿಯಾನವು ಯುದ್ಧತಂತ್ರದ ಬದಲಾವಣೆಗಳ ರೋಲರ್ ಕೋಸ್ಟರ್ ಆಗಿದೆ. ಪಂದ್ಯಾವಳಿಯ ಆರಂಭದಿಂದದಲೂ ಅಭಿಷೇಕ್ ಶರ್ಮಾ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿದ್ದಾರೆ. ಅವರು ಆಫ್-ಸ್ಪಿನ್ ವಿರುದ್ಧ, ವಿಶೇಷವಾಗಿ ಪವರ್‌ಪ್ಲೇನಲ್ಲಿ ರನ್ ಗಳಿಸಲು ಕಷ್ಟಪಡುತ್ತಿದ್ದಾರೆ. ಹೀಗಾಗಿ, ಜಿಂಬಾಬ್ವೆ ವಿರುದ್ಧದ ನಿರ್ಣಾಯಕ ಸೂಪರ್ 8 ಪಂದ್ಯಕ್ಕೂ ಮುಂಚಿತವಾಗಿ ತಂಡದ ಆಡಳಿತವು ಅಗ್ರ ಕ್ರಮಾಂಕದ ಯೋಜನೆಗಳನ್ನು ಮರು ಮೌಲ್ಯಮಾಪನ ಮಾಡುವಂತೆ ಒತ್ತಾಯಿಸಿತು. ಆಗ ಸಂಜು ಸ್ಯಾಮ್ಸನ್ ಅವರಿಗೆ ಅಭಿಷೇಕ್ ಶರ್ಮಾ ಅವರೊಂದಿಗೆ ಆರಂಭಿಕರಾಗಿ ಬಡ್ತಿ ನೀಡಲಾಯಿತು.
ಈ ನಡೆ ತಂಡಕ್ಕೆ ನೆರವಾದರೂ, ಅಭಿಷೇಕ್ ಶರ್ಮಾ ಅವರ ವೈಯಕ್ತಿಕ ಫಾರ್ಮ್ ಹಲವರಿಗೆ ಇನ್ನೂ ಕಳವಳವಾಗಿದೆ. ಗುಂಪು ಹಂತಗಳಲ್ಲಿ ಸತತ ಮೂರು ಬಾರಿ ಸೊನ್ನೆಗೆ ಔಟಾಗಿದ್ದರು ಮತ್ತು ಜಿಂಬಾಬ್ವೆ ವಿರುದ್ಧ 55 ರನ್ ಗಳಿಸಿದರೂ, ವೆಸ್ಟ್ ಇಂಡೀಸ್ ವಿರುದ್ಧದ ಗೆಲ್ಲಲೇಬೇಕಾದ ಪಂದ್ಯದಲ್ಲಿ ಕೇವಲ 10 ರನ್‌ಗಳಿಗೆ ಔಟಾಗಿದ್ದರು. ಸ್ಯಾಮ್ಸನ್ ಅವರ 97 ರನ್‌ಗಳು ಇಲ್ಲದಿದ್ದರೆ, ಭಾರತವು ಸೆಮಿಫೈನಲ್ ಸ್ಥಾನವನ್ನು ಕಳೆದುಕೊಳ್ಳುತ್ತಿತ್ತು.
ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ಗೆ ಅಭಿಷೇಕ್ ಶರ್ಮಾರನ್ನು ಕೈಬಿಡುವ ಕುರಿತು NDTV ಕೇಳಿದ ಪ್ರಶ್ನೆಗೆ ಉತ್ತರಿಸಿದ ದಿನೇಶ್ ಕಾರ್ತಿಕ್, ಎಡ-ಬಲ ಆರಂಭಿಕ ಸಂಯೋಜನೆಯಲ್ಲಿ ಅಭಿಷೇಕ್ ಪಾತ್ರವು ಅವರ ಇತ್ತೀಚಿನ ಹೋರಾಟಗಳಿಗಿಂತ ಹೆಚ್ಚು ಮೌಲ್ಯಯುತವಾಗಿದೆ. ಆದ್ದರಿಂದ ಅವರು ಸೆಮಿಫೈನಲ್‌ನಲ್ಲಿ ಆಡಬೇಕು ಎಂದು ಹೇಳಿದರು.
'ವಿಶ್ವಕಪ್‌ನಂತಹ ದೊಡ್ಡ ಟೂರ್ನಮೆಂಟ್‌ನಲ್ಲಿ, ನಿಮ್ಮನ್ನು ಅಲ್ಲಿಗೆ ಕರೆತಂದ ಆಟಗಾರರನ್ನು ನೀವು ನಂಬಬೇಕು. ಅವರು ಅಭಿಷೇಕ್, ಸಂಜು ಮತ್ತು ಇಶಾನ್ ಕಿಶನ್ ಅವರಿಗೆ ಅಂಟಿಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ. ಪ್ರಮುಖ ಪಂದ್ಯದ ದಿನದಂದು ಯಶಸ್ಸಿನ ಅತ್ಯುತ್ತಮ ಅವಕಾಶವನ್ನು ನೀವೇ ನೀಡಿ' ಎಂದು ದಿನೇಶ್ ಕಾರ್ತಿಕ್, ಟಿ20 ವಿಶ್ವಕಪ್ 2026 ರಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ 2ನೇ ಸೆಮಿಫೈನಲ್ ಹಣಾಹಣಿಗೆ ಮುನ್ನ ಜಿಯೋಸ್ಟಾರ್ ಮೀಡಿಯಾ ಡೇ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದರು.
ಅಭಿಷೇಕ್ ಶರ್ಮಾ ತೀವ್ರ ಟೀಕೆಗೆ ಗುರಿಯಾಗಿದ್ದರೂ, ಆರಂಭಿಕರಾಗಿ ಅವರ ಜೊತೆಗೆ ಬ್ಯಾಟಿಂಗ್ ಮಾಡಿದ ಸಂಜು ಸ್ಯಾಮ್ಸನ್ ವೆಸ್ಟ್ ಇಂಡೀಸ್ ವಿರುದ್ಧ ಅತ್ಯುತ್ತಮ ಚೇಸಿಂಗ್ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಈಡನ್ ಗಾರ್ಡನ್ಸ್‌ನಲ್ಲಿ ಅವರು ಗಳಿಸಿದ ಅಜೇಯ 97 ರನ್‌ಗಳು ಭಾರತದ ಸೆಮಿಫೈನಲ್ ಸ್ಥಾನವನ್ನು ಭದ್ರಪಡಿಸಿದ್ದಲ್ಲದೆ, ಅಗ್ರಸ್ಥಾನದಲ್ಲಿ ಆಕ್ರಮಣಕಾರಿ ಆರಂಭವನ್ನು ಸಾಧಿಸುವಲ್ಲಿ ಅವರನ್ನು ಆಧಾರಸ್ತಂಭವಾಗಿಯೂ ಸಾಭೀತುಪಡಿಸಿಕೊಂಡರು.
ಇಂಗ್ಲೆಂಡ್‌ನ ಸ್ಯಾಮ್ ಕರಣ್ ಈಗಾಗಲೇ ಹಾಲಿ ಚಾಂಪಿಯನ್ ತಂಡದ ಅಭಿಷೇಕ್ ಶರ್ಮಾ ಬೆದರಿಕೆಯ ಬಗ್ಗೆ 'ಎಚ್ಚರಿಕೆಯಿಂದ' ಇರುವುದಾಗಿ ಒಪ್ಪಿಕೊಂಡಿದ್ದಾರೆ ಮತ್ತು ವಿಶ್ವಕಪ್‌ಗೂ ಮುನ್ನ ದ್ವಿಪಕ್ಷೀಯ ಸರಣಿಯಲ್ಲಿ ಅಭಿಷೇಕ್ 37 ಎಸೆತಗಳಲ್ಲಿ ಶತಕ ಬಾರಿಸಿದ್ದನ್ನು ನೆನಪಿಸಿಕೊಂಡಿದ್ದಾರೆ.
Advertisement