T20 World Cup Semi Final 2026: 19 ವರ್ಷಗಳ ಐತಿಹಾಸಿಕ ದಾಖಲೆ ಮುರಿದ ಸಂಜು-ಇಶಾನ್ ಕಿಶಾನ್! Video

ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ ಇಂದಿನ ಪಂದ್ಯದಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದರು. 42 ಎಸೆತಗಳಲ್ಲಿ 7 ಸಿಕ್ಸರ್, 8 ಬೌಂಡರಿಗಳೊಂದಿಗೆ 89 ರನ್ ಗಳಿಸಿದರು. ಆದರೆ 11 ರನ್ ಗಳಿಂದ ಎರಡನೇ ಬಾರಿಗೆ ಶತಕದ ಅಂಚಿನಲ್ಲಿ ಎಡವಿದರು.
Sanju Samson and Ishan Kishan
ಸಂಜು ಸ್ಯಾಮ್ಸನ್, ಇಶಾನ್ ಕಿಶಾನ್
Updated on

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿಯೂ ಸಂಜು ಸ್ಯಾಮ್ಸನ್ ಅತ್ಯುತ್ತಮ ಪ್ರದರ್ಶನ ನೀಡಿದರು.

ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ ಇಂದಿನ ಪಂದ್ಯದಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದರು. 42 ಎಸೆತಗಳಲ್ಲಿ 7 ಸಿಕ್ಸರ್, 8 ಬೌಂಡರಿಗಳೊಂದಿಗೆ 89 ರನ್ ಗಳಿಸಿದರು. ಆದರೆ 11 ರನ್ ಗಳಿಂದ ಎರಡನೇ ಬಾರಿಗೆ ಶತಕದ ಅಂಚಿನಲ್ಲಿ ಎಡವಿದರು. ಆಕರ್ಷಕ ಎರಡನೇ ಅರ್ಧಶತಕ ಸಿಡಿಸುವ ಮೂಲಕ ಇಂಗ್ಲೆಂಡ್ ತಂಡ ಗೆಲ್ಲಲು 254 ರನ್ ಗಳ ಬೃಹತ್ ಟಾರ್ಗೆಟ್ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಅವರು ತಮ್ಮ ಅತ್ಯುತ್ತಮ ಜೊತೆಯಾಟದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದರು. ಈ ಜೋಡಿ 97 ರನ್‌ಗಳ ಕಲೆಹಾಕುವ ಮೂಲಕ ಟಿ-20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಪರ ಅತಿ ಹೆಚ್ಚಿನ ರನ್ ಗಳಿಸಿ ಪಾರ್ಟನರ್ ಶಿಫ್ ಎಂಬ ಖ್ಯಾತಿಗೆ ಪಾತ್ರವಾಯಿತು.

Sanju Samson and Ishan Kishan
T20 World Cup 2026 ಸೆಮಿಫೈನಲ್: ಸ್ಯಾಮ್ಸನ್ ಮಿಂಚಿನ ಅರ್ಧಶತಕ; ಇಂಗ್ಲೆಂಡ್ ಗೆ ಬೃಹತ್ 254 ರನ್ ಟಾರ್ಗೆಟ್ ನೀಡಿದ ಭಾರತ!

ಡರ್ಬನ್‌ನಲ್ಲಿ ನಡೆದ 2007 ರ T20 ವಿಶ್ವಕಪ್‌ನ ಉದ್ಘಾಟನಾ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಯುವರಾಜ್ ಸಿಂಗ್ ಮತ್ತು ರಾಬಿನ್ ಉತ್ತಪ್ಪ ಕಲೆಹಾಕಿದ್ದ 84 ರನ್‌ಗಳ ಜೊತೆಯಾಟದ ದಾಖಲೆಯನ್ನು ಮುರಿದರು.

ಸುಮಾರು ಎರಡು ದಶಕಗಳ ಕಾಲ ಯುವರಾಜ್ ಮತ್ತು ಉತ್ತಪ್ಪ ನಡುವಿನ ಜೊತೆಯಾಟದ ದಾಖಲೆಯನ್ನು ಯಾರು ಮುರಿಯಲು ಸಾಧ್ಯವಾಗಿರಲಿಲ್ಲ. ಆದರೆ, ಇದೀಗ ಆ ಐತಿಹಾಸಿಕ ದಾಖಲೆಯನ್ನು ಸ್ಯಾಮ್ಸನ್ ಮತ್ತು ಕಿಶನ್ ಜೋಡಿ ಮುರಿಯುವಲ್ಲಿ ಯಶಸ್ವಿಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com